/newsfirstlive-kannada/media/post_attachments/wp-content/uploads/2025/05/ravichandran2.jpg)
ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್. ಅವರು 64ನೇ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಳ್ಳಲಿದ್ದಾರೆ. ಅದರಲ್ಲೂ ವೀಕ್ಷಕರ ನೆಚ್ಚಿನ ಶೋ ಆಗಿರೋ ʻಭರ್ಜರಿ ಬ್ಯಾಚುಲರ್ಸ್ʼ ವೇದಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..
ಇದೇ ವೇಳೆ ಸರ್ಪ್ರೈಸ್ ಎಂಬಂತೆ ನಟಿ ಸುಧಾರಾಣಿ ಮತ್ತು 'ಕನಸಿನ ರಾಣಿ' ಮಾಲಾಶ್ರೀ ಅವರು ರವಿಚಂದ್ರನ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು, ನಟ ರವಿಚಂದ್ರನ್ ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʻಭರ್ಜರಿ ಬ್ಯಾಚುಲರ್ಸ್ʼ ಶೋನ ಜಡ್ಜ್ ಆಗಿದ್ದಾರೆ. ಹಾಗಾಗಿ ಈ ಬಾರಿ ರವಿಚಂದ್ರನ್ ಅವರ ಹುಟ್ಟು ಹಬ್ಬವನ್ನು ಮುಂಚಿತವಾಗಿಯೇ ʻಭರ್ಜರಿ ಬ್ಯಾಚುಲರ್ಸ್ʼ ವೇದಿಕೆಯಲ್ಲಿ ಆಚರಿಸಲಾಗಿದೆ.
View this post on Instagram
ಬ್ಯಾಚುಲರ್ಸ್ ಮತ್ತು ಏಂಜಲ್ಸ್ ರವಿಚಂದ್ರನ್ ಅವರಿಗಾಗಿ ಸ್ಪೆಷಲ್ ಆಗಿ ಹಾಡು ಹಾಡಿದ್ದಾರೆ. ಅಲ್ಲದೇ ಅವರ ಹಾಡುಗಳಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ. ಒಂದಲ್ಲ ಒಂದು ಸರ್ಪ್ರೈಸ್ ನೀಡುವ ಬ್ಯಾಚುಲರ್ಸ್ ವೇದಿಕೆ ರವಿಚಂದ್ರನ್ ಅವರ ಬರ್ತ್‌ಡೇ ಸ್ಟಾರ್ ನಟಿಯನ್ನು ವೇದಿಕೆಗೆ ಕರೆಸಿದ್ದಾರೆ.
View this post on Instagram
ವೇದಿಕೆಗೆ ಎಂಟ್ರಿ ಕೊಟ್ಟ ನಟಿ ಸುಧಾರಾಣಿ ಮತ್ತು ಮಾಲಾಶ್ರೀ ಅವರನ್ನು ನೋಡಿದ ರವಿಚಂದ್ರನ್ ಸಖತ್ ಖುಷ್ ಆಗಿದ್ದಾರೆ. ಇಬ್ಬರು ನಟಿಯರ ಜೊತೆಗೆ ಕ್ರೇಜಿಸ್ಟಾರ್ ಸಖತ್ ಸ್ಟೆಪ್ ಹಾಕಿದ್ದಾರೆ. ವೇದಿಕೆಯಲ್ಲಿ, ರಿಯಲ್ ರಾಮಾಚಾರಿಯನ್ನು ಯಾರೂ ಕೂಡ ಬೀಟ್ ಮಾಡಲು ಸಾಧ್ಯವಿಲ್ಲ. ಇಂದಿಗೂ ಅವರು ಹಾಗೆಯೇ ಕಾಣುತ್ತಿದ್ದಾರೆ ಎಂದು ಕನಸಿನ ರಾಣಿ ಕ್ರೇಜಿಸ್ಟಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮತ್ತೇ ಕನಸುಗಾರನ ಹೃದಯ ವಿಶಾಲವಾದದ್ದು, ಕನಸುಗಾರನ ನಿಮಗೆ ಹುಟ್ಟು ಹಬ್ಬದ ಶುಭಶಯಗಳು ಅಂತ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ