ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗ.. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಂದೆ

author-image
AS Harshith
Updated On
ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗ.. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಂದೆ
Advertisment
  • ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಪಿ.ಎಸ್.ಮಲ್ಪಯ್ಯ
  • ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು
  • ಇಂದು ಹುಟ್ಟೂರಿನಲ್ಲಿ ಶಾಸಕ ನರೇಂದ್ರಸ್ವಾಮಿ ತಂದೆಯ ಅಂತ್ಯಕ್ರಿಯೆ ನೆರವೇರಲಿದೆ

ಮಂಡ್ಯ: ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗವಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಂದೆ ಪಿ.ಎಸ್.ಮಲ್ಪಯ್ಯ(93) ನಿಧನರಾಗಿದ್ದಾರೆ.

ಪಿ.ಎಸ್.ಮಲ್ಪಯ್ಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪುರಗಾಲಿ ಗ್ರಾಮದವರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಪಿ.ಎಸ್.ಮಲ್ಪಯ್ಯ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ, 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ.. ಬ್ಯಾಂಕ್ ಅಧಿಕಾರಿ ನೇಣಿಗೆ ಶರಣು

ಮಲ್ಲಯ್ಯ‌‌ರವರು ತಾಲೂಕು ಬೋರ್ಡ್ ಸದಸ್ಯರಾಗಿ, ಪುರಿಗಾಲಿ ಗ್ರಾಪಂ, ಹಾಲು ಉತ್ಪಾದಕರ ಸಂಘ, ಪ್ರಾಥಮಿಕ ಕೃಷಿ ಪರಿಷತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ಮೃತತಾಗಿದ್ದಾರೆ. ಮಲ್ಲರವರು ಪತ್ನಿ, ಶಾಸಕ ನರೇಂದ್ರಸ್ವಾಮಿ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನ ಅಗಲಿದ್ದಾರೆ.

ಇದನ್ನೂ ಓದಿ: ಒಬ್ಬಂಟಿಯಾದ ನೌಫಲ್​.. ಪತ್ನಿ, ಮಕ್ಕಳು ಸೇರಿ ಕುಟುಂಬದ 11 ಜನರು ನಾಪತ್ತೆ.. ಸಿಗದ ಮೃತದೇಹ, ತಡೆಯಲಾರದ ದುಃಖ 

ಇಂದು ಹುಟ್ಟೂರು ಪೂರಿಗಾಲಿಯಲ್ಲಿ ಮೃತ ಮಲ್ಲಯ್ಯರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment