/newsfirstlive-kannada/media/post_attachments/wp-content/uploads/2024/08/MOAHANLAAL-HOSPITALIZED.jpg)
ಕೊಚ್ಚಿ: ಮಲಯಾಳಂನ ಖ್ಯಾತ ನಟ ಮೋಹನಲಾಲ್ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಲಾಲೆಟನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಮೋಹನಲಾಲ್ ವೈರಲ್ ಇನ್ಫೆಕ್ಷನ್ನಿಂದ ಬಳಲುತ್ತಿದ್ದಾರಂತೆ
ಇದನ್ನೂ ಓದಿ:ರಾಕಿಭಾಯ್ ಈ ಡಾಲರ್ ಮೇಲಿದೆ ಎಲ್ಲರ ಕಣ್ಣು; ಯಶ್ ಟಾಕ್ಸಿಕ್ ಸಿನಿಮಾಗೆ ಇದ್ಯಾ ಆ ಶಕ್ತಿ?
64 ವರ್ಷದ ಹಿರಿಯ ನಟನಿಗೆ ವೈದ್ಯರು ಕೆಲವು ದಿನಗಳ ಕಾಲ ಸಾರ್ವಜನಿಕ ಭೇಟಿಯನ್ನು ನಿರಾಕರಿಸಲು ಹೇಳಿದ್ದಾರೆ. ಅದರ ಜೊತೆಗೆ ಈಗಾಗಲೇ ಹೇಳಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’; ವೀಕೆಂಡಲ್ಲೂ ಗೋಲ್ಡನ್’ ಸಿನಿಮಾ ಹೌಸ್ ಫುಲ್
ಎಲ್2 ಎಂಪೂರಾನ್ ಶೂಟಿಂಗ್ ಮುಗಿಸಿ ಹಾಗೂ ಅವರೇ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ಬರೂಜ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಗುಜರಾತ್ನಿಂದ ಕೊಚ್ಚಿಗೆ ವಾಪಸ್ ಬಂದಿದ್ದರು ಮೋಹನ್ಲಾಲ್, ಆ ವೇಳೆಯೇ ಅವರಲ್ಲಿ ಜ್ವರ, ಮೈಕೈನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದವು.
ಕೂಡಲೇ ಕೊಚ್ಚಿ ಆಸ್ಪತ್ರೆಗೆ ಮೋಹನ್ಲಾಲ್ ದಾಖಲಾದರು. ಇತ್ತೀಚೆಗೆ ಬಂದ ವೈದ್ಯಕೀಯ ವರದಿಯ ಪ್ರಕಾರ ಹಿರಿಯ ನಟ ಚೇತರಿಸಿಕೊಳ್ಳುತ್ತಿದ್ದಾರೆ ಸದ್ಯ ಅವರನ್ನು ಆಬ್ಸ್ರವೇಷನ್ನಲ್ಲಿ ಇಡಲಾಗಿದೆ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ