Advertisment

ವಯನಾಡು ದುರಂತ ಸ್ಥಳದಲ್ಲಿ ಓಡಾಡಿದ್ದ ನಟನಿಗೆ ಆಗಿದ್ದೇನು? ಈಗ ಹೇಗಿದೆ ಮೋಹನ್‌ ಲಾಲ್​ ಆರೋಗ್ಯ ಸ್ಥಿತಿ!

author-image
Veena Gangani
Updated On
ವಯನಾಡು ದುರಂತ ಸ್ಥಳದಲ್ಲಿ ಓಡಾಡಿದ್ದ ನಟನಿಗೆ ಆಗಿದ್ದೇನು? ಈಗ ಹೇಗಿದೆ ಮೋಹನ್‌ ಲಾಲ್​ ಆರೋಗ್ಯ ಸ್ಥಿತಿ!
Advertisment
  • ಮೋಹನ್​ ಲಾಲ್ ಮಲಯಾಳಂ ಸಿನಿರಂಗದ ಸೂಪರ್​ ಸ್ಟಾರ್
  • ವಿಚಾರ ತಿಳಿದ ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ ಅಭಿಮಾನಿಗಳು
  • ಹೊಸ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸ್ಟಾರ್ ನಟನಿಗೆ ಏನಾಯ್ತು?

ಮಲಯಾಳಂ ಇಂಡಸ್ಟ್ರಿಗೆ ಅನಿರೀಕ್ಷಿತ ಶಾಕ್ ಒಂದು ಎದುರಾಗಿದೆ. ಬಿಗ್ ಬಜೆಟ್​ ಸಿನಿಮಾಗಳ ಮೂಲಕ ಅಲ್ಲಿನ ಚಿತ್ರರಂಗದ ಲೈಫ್ ಲೈನ್ ಆಗಿರೋ ಮೋಹನ್ ಲಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಭಿಮಾನಿಗಳಲ್ಲಿ ಆತಂಕ ಹುಟ್ಟಿದೆ.

Advertisment

ಇದನ್ನೂ ಓದಿ: VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!

ಮೋಹನ್​ ಲಾಲ್ ಮಲಯಾಳಂ ಸಿನಿ ರಂಗದ ಸೂಪರ್​ ಸ್ಟಾರ್. ಯಾವುದೇ ಪಾತ್ರವನ್ನೂ ನೀರು ಕುಡಿದಷ್ಟು ಸಲೀಸಾಗಿ ಮಾಡಿ ಮುಗಿಸಬಲ್ಲ ಅದ್ಭುತ ಕಲೆಗಾರ. ಕೇವಲ ಕೇರಳಕ್ಕೆ ಸೀಮಿತವಾಗದೇ ಪ್ಯಾನ್ ಇಂಡಿಯಾ ಫಾಲೋವರ್ಸ್​ಗಳು, ಅಭಿಮಾನಿಗಳನ್ನ ಹೊಂದಿರೋ ನಟ. 64 ವರ್ಷದ ಲಾಲೆಟ್ಟನ್ ಬೆಂಬಲಿಗರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇದೇ ಶಾಕಿಂಗ್ ಸುದ್ದಿ ಅಭಿಮಾನಿಗಳನ್ನ ಆಸ್ಪತ್ರೆ ಕಡೆ ಬರುವಂತೆ ಮಾಡಿದೆ.

publive-image

ಕಳೆದೆರಡು ವಾರದಿಂದ ಗುಜರಾತ್​​ನಲ್ಲಿ ಎಲ್​2 ಎಂಪುರಾನ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ನಟ ಇದೀಗ ದಿಢೀರ್ ಕೊಚ್ಚಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಮೃತಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್​ನಲ್ಲಿ ಎಲ್​2 ಎಂಪುರಾನ್ ಶೂಟಿಂಗ್ ಮುಗಿಸಿದ್ದ ಮೋಹನ್ ಲಾಲ್, ಬಳಿಕ ತಾವೇ ನಿರ್ದೇಶಿಸ್ತಿರೋ ಬರೂಜ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿದ್ರು. ಬಳಿಕ ಗುಜರಾತ್​ನಿಂದ ಕೊಚ್ಚಿಗೆ ವಾಪಸ್ ಬಂದಿದ್ದರು.

Advertisment

ಇದನ್ನೂ ಓದಿ:ಮಿಸ್ ಯು ಕೀರ್ತಿ​​.. ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ತನ್ವಿ ರಾವ್​​? ಫ್ಯಾನ್ಸ್​ ಬೇಸರ!

publive-image

ಈ ವೇಳೆ ಜ್ವರ, ಮೈಕೈನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೋಹನ್ ಲಾಲ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಸ್ಥಿರವಾಗಿದ್ದು ಐದು ದಿನಗಳ ಕಾಲ ಮೋಹನ್ ಲಾಲ್ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಹೆಚ್ಚು ಜನರು ಸೇರೋ ಪ್ರದೇಶಗಳಲ್ಲಿ ಓಡಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ವಯನಾಡು ದುರಂತ ಸ್ಥಳದಲ್ಲಿ ಓಡಾಡಿದ್ದ ನಟ ಇದೀಗ ಆಸ್ಪತ್ರೆಗೆ ಸೇರಿದ್ದಾರೆ ಅನ್ನೋದನ್ನ ಅಭಿಮಾನಿಗಳೇ ನಂಬ್ತಿಲ್ಲ. ಆದ್ರೂ ಅದೇ ಸತ್ಯ. ಹೀಗಾಗಿ ಬೇಗ ಗುಣಮುಖರಾಗಿ ಡಿಸ್ಚಾರ್ಜ್ ಆಗಲಿ, ಮತ್ತೆ ತೆರೆ ಮೇಲೆ ಅಬ್ಬರಿಸಲಿ ಅಂತಾ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment