/newsfirstlive-kannada/media/post_attachments/wp-content/uploads/2025/06/Malayalam-actor-Shine-Tom-Chacko-car-accident-father-death.jpg)
ಕೊಯಮತ್ತೂರು: ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ನಿಂತಿದ್ದ ಟ್ರಕ್‌ಗೆ ನಟ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ನಟ ಶೈನ್ ಟಾಮ್ ಚಾಕೊ ಅವರ ತಂದೆ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.
ಇದನ್ನೂ ಓದಿ:ಬಿ.ದಯಾನಂದ್ ತಲೆದಂಡ ಬೆನ್ನಲ್ಲೇ ಹೊಸ ಆಯುಕ್ತರ ನೇಮಕ.. ನೂತನ ಪೊಲೀಸ್ ಕಮಿಷನರ್ ಇವರೇ..!
ಕೇರಳ ರಾಜ್ಯದ ತ್ರಿಶೂರ್‌ನ 41 ವರ್ಷದ ನಟ ಶೈನ್ ಟಾಮ್ ಚಾಕೊ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆ ಕೂಡಲೇ ನಟ ಶೈನ್ ಟಾಮ್ ಚಾಕೊ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಇದೇ ಅಪಘಾತದಲ್ಲಿ ನಟನ ತಂದೆ ನಿಧನರಾಗಿದ್ದಾರೆ. ನಟ ಶೈನ್ ತಮ್ಮ ಕುಟುಂಬಸ್ಥರ ಜೊತೆಗೆ ತಂದೆಯ ವೈದ್ಯಕೀಯ ತಪಾಸಣೆಗಾಗಿ ಕಾರಿನಲ್ಲಿ ತ್ರಿಶೂರ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆದ್ರೆ ಇದೇ ವೇಳೆ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ನ ಪರೈಯೂರ್ ಬಳಿ ಚಾಲಕ ಅನಿಸ್ (42) ಅವರ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸದ್ಯ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಲ್ಲಿ ಶೈನ್ ಟಾಮ್ ಚಾಲೋ ಹಾಗೂ ತಾಯಿಗೆ ಚಿಕಿತ್ಸೆ ಮುಂದುವರೆದಿದೆ. ನಟ ಡಾಕು ಮಹರಾಜ್, ದಸರಾ, ರಾಬಿನ್ ಹುಡ್, ಬೀಸ್ಟ್ ಸೇರಿದಂತೆ ಹಲವು ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ