/newsfirstlive-kannada/media/post_attachments/wp-content/uploads/2025/04/vincy_sony_aloshious.jpg)
ಇತ್ತೀಚೆಗೆ ಎಲ್ಲ ಕ್ಷೇತ್ರದ ನಟಿಯರು ತಮಗಾದ ಕೆಟ್ಟ ಅನುಭವದ ಬಗ್ಗೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಮೊನ್ನೆಯಷ್ಟೇ ಬಹುಭಾಷ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ತಮ್ಮ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ:ರೀಲ್ಸ್ ಗೆಳೆಯನಿಗಾಗಿ ರಿಯಲ್ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!
/newsfirstlive-kannada/media/post_attachments/wp-content/uploads/2025/04/vincy-aloshious1.jpg)
ಇದೀಗ ಮಲಯಾಳಂ ನಟಿಯೊಬ್ಬರು ಶೂಟಿಂಗ್​ ಸೆಟ್‌ನಲ್ಲಿ ನಡೆದಿದ್ದ ಅನುಚಿತ ಘಟನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಹೌದು, ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಸೆಟ್‌ನಲ್ಲಿ ತಾವು ಎದುರಿಸಿದ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿತ್ರದ ಪ್ರಮುಖ ನಾಯಕ ನಟ ಡ್ರಗ್ಸ್ ಅಡಿಕ್ಟ್ ಆಗಿದ್ದರಂತೆ.
/newsfirstlive-kannada/media/post_attachments/wp-content/uploads/2025/04/vincy-aloshious.jpg)
ಅಲ್ಲದೇ ಆ ಸ್ಟಾರ್ ನಟ ಆಕೆಯನ್ನ ಎಳೆದಾಡಿ ಅನುಚಿತವಾಗಿ ವರ್ತಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಆಗ ಇಂಥವರ ಜೊತೆ ಕೆಲಸ ಮಾಡಲು ಕಷ್ಟವಾಗ್ತಿತ್ತು. ಈಗ ಮಾದಕ ದ್ರವ್ಯಗಳನ್ನು ಸೇವಿಸೋ ನಟರೊಂದಿಗೆ ನಾನು ಕೆಲಸ ಮಾಡುವುದಿಲ್ಲ ಅಂತಾ ನಟಿ ವಿನ್ಸಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us