ಬಿಗ್​ಬಾಸ್​ನಿಂದ ಬರ್ತಿದ್ದಂತೆ ಗಂಡನಿಂದ ದೂರ.. ಡಿವೋರ್ಸ್​ಗೆ ಮುಂದಾದ ಸ್ಟಾರ್ ಸೀರಿಯಲ್ ನಟಿ..!

author-image
Veena Gangani
Updated On
ಬಿಗ್​ಬಾಸ್​ನಿಂದ ಬರ್ತಿದ್ದಂತೆ ಗಂಡನಿಂದ ದೂರ.. ಡಿವೋರ್ಸ್​ಗೆ ಮುಂದಾದ ಸ್ಟಾರ್ ಸೀರಿಯಲ್ ನಟಿ..!
Advertisment
  • ನಟಿ ಮಾಡಿದ ಆ ಒಂದು ತಪ್ಪು ಗಂಡನ ಕೋಪಕ್ಕೆ ಕಾರಣವಾಯ್ತಾ?
  • ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಗಂಡನಿಂದ ದೂರವಾದ ನಟಿ
  • ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಡಿವೋರ್ಸ್ ಬಗ್ಗೆ ಚರ್ಚೆ ಶುರು

ಇತ್ತೀಚೆಗೆ ಎಲ್ಲಾ ಕಡೆ ಡಿವೋರ್ಸ್ ಬಗ್ಗೆ ಜೋರು ಚರ್ಚೆ ಶುರುವಾಗಿದೆ. ದೊಡ್ಡ ದೊಡ್ಡ ಸ್ಟಾರ್​ ನಟ, ನಟಿಯರು ಡಿವೋರ್ಸ್ ಪಡೆಯೋದಕ್ಕೆ ಮುಂದಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇದರ ಮಧ್ಯೆ ಮಲಯಾಳಂ ಬಿಗ್ ಬಾಸ್ ಸೀಸನ್ 2 ಮಾಜಿ ಸ್ಪರ್ಧಿ, ಸ್ಟಾರ್​ ನಟಿ ಇದೀಗ ಗಂಡನಿಂದ ದೂರವಾಗಿದ್ದಾರೆ.

ಇದನ್ನೂ ಓದಿ: ನೀವು ಚಿನ್ನದ ಮೇಲೆ ಹೂಡಿಕೆ ಶುರು ಮಾಡಿದ್ದಲ್ಲಿ ಹಿಂದೆ ಪಡೆದ ಲಾಭ ಈಗ ಸಿಗುವುದಿಲ್ಲ; ಯಾಕೆ ಗೊತ್ತಾ?

ಯಾವುದೇ ಸಂಬಂಧದಲ್ಲೂ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಹೀಗೆ ಇದ್ದಾಗ ಮಾತ್ರ ಸಂಬಂಧಗಳು ದೀರ್ಘಕಾಲ ಬಾಳಲು ಸಾಧ್ಯವಾಗಿತ್ತದೆ. ಏನೇ ಸಮಸ್ಯೆ ಆದ್ರೂ ಕುಳಿತುಕೊಂಡು ಮಾತನಾಡಿದ್ರೆ ಎಲ್ಲವೂ ಬಗೆ ಹರಿಯುತ್ತದೆ. ಆದ್ರೆ, ಕೆಲವೊಂದು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಉಂಟು. ಇದಕ್ಕೆ ವೀಣಾ ನಾಯರ್ ಬದುಕು ಮತ್ತೊಂದು ಉದಾಹರಣೆಯಾಗಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದೇ ಗಂಡನ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಹಿಂದೆ ವೀಣಾ ನಾಯರ್​ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸೋಷಿಯಲ್​ ಮೀಡಯಾದಲ್ಲಿ ಚರ್ಚೆ ಶುರುವಾಗಿತ್ತು. ಇದೀಗ ಆ ವಂದಿಗೆ ನಟಿ ವೀಣಾ ನಾಯರ್ ಬ್ರೇಕ್ ಆಗಿದ್ದಾರೆ. ಗಂಡನಿಂದ ಡಿವೋರ್ಸ್ ಖುದ್ದು ನಟಿಯೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ:ಚಿನ್ನಾಭರಣ ಕೊಳ್ಳುವವರಿಗೆ ಶಾಕಿಂಗ್ ನ್ಯೂಸ್.. ಬಜೆಟ್ 2025 ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ?

ದಕ್ಷಿಣ ಭಾರತದ ಮಲೆಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿಯಾಗಿರುವ ವೀಣಾ ನಾಯರ್ ಅವರು ತಮ್ಮ ವೈಯಕ್ತಿಕ ಜೀವನ, ಮಗನ ವಿಚಾರ ಮತ್ತು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದು ಖಾಸಗಿ ಸಂದರ್ಶನದಲ್ಲಿ ಈ ವಿಚಾರ ಬಗ್ಗೆ ಮಾತಾಡಿದ್ದಾರೆ.

ನನ್ನ ಮಗ ತುಂಬಾ ಸಂತೋಷವಾಗಿದ್ದಾನೆ. ಅವನು ನಮ್ಮಿಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ಅವನ ತಂದೆ ಬಂದಾಗ ಅವರ ಜೊತೆ ಹೊರಗೆ ಹೋಗುತ್ತಾನೆ. ನಾನು ಒಬ್ಬ ತಾಯಿಯ ಪ್ರೀತಿಯನ್ನು ಮಾತ್ರ ಕೊಡಬಲ್ಲೆ. ತಂದೆಯ ಪ್ರೀತಿ ಕೊಡಲು ಸಾಧ್ಯವಿಲ್ಲ. ಅದು ಅವನಿಗೆ ಅವರಪ್ಪನ ಮೂಲಕವೇ ಸಿಗುತ್ತಿದೆ. ನಮ್ಮಿಬ್ಬರ ನಡುವಿನ ಸಮಸ್ಯೆಯಿಂದ ದೂರವಾಗಿದ್ದೇವೆ ಮತ್ತು ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment