/newsfirstlive-kannada/media/post_attachments/wp-content/uploads/2025/07/actress-prarthana1.jpg)
ಸೋಷಿಯಲ್ ಮೀಡಿಯಾದಲ್ಲಿ ಸಲಿಂಗ ಜೋಡಿಗಳ ಬಗ್ಗೆ ಒಂದಲ್ಲಾ ಒಂದು ವಿಚಾರ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಗಂಡಿನ ಜೊತೆ ಗಂಡು, ಹೆಣ್ಣಿನ ಜೊತೆ ಹೆಣ್ಣು ಮದುವೆಗಳು ನಡೆಯುತ್ತಿವೆ. ಈ ಹಿಂದೆ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವ ವಿವಾದಕ್ಕೆ ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟ ಮಾಡಿತ್ತು. ಸಲಿಂಗಿಗಳಿಗೆ ವಿವಾಹ ಅನ್ನೋದು ಮೂಲಭೂತ ಹಕ್ಕು ಅಲ್ಲ. ಸಲಿಂಗಿಗಳು ಜೊತೆಯಲ್ಲಿ ವಾಸ ಮಾಡಬಹುದು. ಸಲಿಂಗಿಗಳ ವಿವಾಹದ ಹಕ್ಕಿಗೆ ಸುಪ್ರೀಂಕೋರ್ಟ್‌ನಲ್ಲಿ ಮನ್ನಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: ರಾಮಾಯಣದಲ್ಲಿ ಯಶ್​ ರಾವಣ ಆದ್ರೆ.. ಹನುಮಾನ್, ಲಕ್ಷ್ಮಣ, ಸೂರ್ಪನಕಿ ಪಾತ್ರ ಮಾಡ್ತಿರೋದು ಯಾರು?
/newsfirstlive-kannada/media/post_attachments/wp-content/uploads/2025/07/actress-prarthana.jpg)
ಭಾರತದಲ್ಲಿ ಅನೇಕ ಸಲಿಂಗ ವಿವಾಹಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಯುವಕರು ಮದುವೆಯಾಗಿದ್ದರು. ಅಷ್ಟೇ ಅಲ್ಲದೇ 5 ವರ್ಷಗಳಿಂದ ಸಂಬಂಧ ಹೊಂದಿದ್ದ ಭಾರತ ಮತ್ತು ಪಾಕಿಸ್ತಾನ ಮೂಲದ ಸಲಿಂಗ ಜೋಡಿ ಅಂಜಲಿ ಚಕ್ರ- ಸೂಫಿ ಮಲಿಕ್ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದರು. ಈ ಸಾಲಿಗೆ ಈಗ ಮಲಯಾಳಂನ ನಟಿ ಪ್ರಾರ್ಥನಾ ಕೃಷ್ಣನ್ ಮತ್ತು ಮಾಡೆಲ್ ಅನ್ಸಿಯಾ ಕೂಡ ಸೇರಿಕೊಂಡಿದ್ದಾರಾ ಎನ್ನುವ ಅನುಮಾನ ಮೂಡಿತ್ತು. ಹೌದು, 'ಕೊಡೆಯಿಡ' ಎಂಬ ಧಾರಾವಾಹಿಯ ಮೂಲಕ ಮಲಯಾಳಂ ಪ್ರೇಕ್ಷಕರ ಗಮನ ಸೆಳೆದ ಪ್ರಾರ್ಥನಾ ಕೃಷ್ಣನ್ ನಾಯರ್, ತಮ್ಮ ಆಪ್ತ ಸ್ನೇಹಿತೆಯಾದ ಅನ್ಸಿಯಾ ಜೊತೆಗೆ ಮದುವೆಯಾಗಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ದೇವಸ್ಥಾನವೊಂದರಲ್ಲಿ ಪರಸ್ಪರ ತಾಳಿ ಹಾಕುವುದು, ಹಾರ ಬದಲಾಯಿಸುವುದನ್ನು ಪ್ರಾರ್ಥನಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಮನಸ್ಸಿನಲ್ಲಿ ವಿಷ ತುಂಬಿದ, ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಬರೆದುಕೊಂಡಿದ್ದಾರೆ. ಅನ್ಸಿಯಾ ಲೆಸ್ಬಿಯನ್.. ಮೈ ಲವ್.. ಡ್ರೀಮ್ ಕಮ್ ಟ್ರೂ ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಅನ್ಸಿಯಾ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us