newsfirstkannada.com

ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಅವಮಾನ; ಕೊಟ್ಟಿದ್ದ ಕಿರೀಟ ವಾಪಸ್​.. ಕಾರಣವೇನು?

Share :

Published April 12, 2024 at 6:48pm

Update April 12, 2024 at 6:55pm

    ಕಿರೀಟಕ್ಕೆ ಪರಿಪೂರ್ಣಳಲ್ಲ ಎಂದು ಹೇಳಿಕೊಂಡಿದ್ದೇಕೆ ಉಂಡುಕ್ ನ್ಗಡೌ!

    ಕುಟುಂಬಸ್ಥರ ಜೊತೆ ಥಾಯ್ಲೆಂಡ್‌ಗೆ ಹೋಗಿದ್ದ ಮಲೇಷಿಯಾದ ಬ್ಯೂಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಮಲೇಷಿಯಾದ ರಾಣಿ ವಿಡಿಯೋ

ಮಲೇಷ್ಯಾ: 2023ರಲ್ಲಿ ಉಂಡುಕ್ ನ್ಗಡೌ ಜೊಹೋರ್ ಎಂಬಾಕೆ ಮಲೇಷ್ಯಾದ ಸೌಂದರ್ಯ ರಾಣಿ ಎಂಬ ಬಿರುದು ಪಡೆದುಕೊಂಡಿದ್ದರು. ಆದರೆ ಇದೀಗ ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್​ ಪಡೆದುಕೊಳ್ಳಲಾಗಿದೆ.

ಹೌದು, ಉಂಡುಕ್ ನ್ಗಡೌ ಜೊಹೋರ್ ಅವರು ರಜೆಯ ನಿಮಿತ್ತ ಕುಟುಂಬಸ್ಥರ ಜೊತೆ ಥಾಯ್ಲೆಂಡ್‌ಗೆ ಹೋಗಿದ್ದರು. ರಜೆಯಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದ ಮಲೇಷಿಯಾದ ಬ್ಯೂಟಿ ಕ್ವೀನ್ ತಾನು ಪೋಸ್ಟ್​ ಮಾಡಿದ ವಿಡಿಯೋದಿಂದ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾಳೆ. ಮಲೇಷಿಯಾದ ಬ್ಯೂಟಿ ಕ್ವೀನ್ ಆಗಿರೋ ಉಂಡುಕ್ ನ್ಗಡೌ ಜೊಹೋರ್ ಜೊತೆ ಕೆಲ ಪುರುಷರು ಅಶ್ಲೀಲವಾಗಿ ಡ್ಯಾನ್ಸ್​ ಮಾಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ: ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?

ಅಶ್ಲೀಲವಾಗಿ ಡ್ಯಾನ್ಸ್​ ಮಾಡಿರೋ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಭರಿತವಾಗಿ ಕಾಮೆಂಟ್ ಮಾಡುತ್ತಿದ್ದರು. ಮಲೇಷಿಯಾದ ಬ್ಯೂಟಿ ಕ್ವೀನ್ ಹೀಗೆ ಅಶ್ಲೀಲವಾಗಿ ಪುರುಷರ ಜೊತೆ ಡ್ಯಾನ್ಸ್​ ಮಾಡುವುದು ಸರಿಯಲ್ಲ ಎಂದು ಕಾಮೆಂಟ್​ ಮಾಡಿದ್ದರು. ಇದಾದ ಬಳಿಕ ಮಲೇಷಿಯಾದ ಬ್ಯೂಟಿ ಕ್ವೀನ್ ಪಟ್ಟದಿಂದ ಕೆಳಗಿಳಿಸಲಾಗಿದೆ. ಜೊತೆಗೆ ಆಕೆಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್​ ಪಡೆದುಕೊಳ್ಳಲಾಗಿದಿಯಂತೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಂಡುಕ್ ನ್ಗಡೌ ಜೊಹೋರ್, ನಾನು ನನ್ನ ಸ್ವಂತ ಇಚ್ಛೆಯಿಂದ ಉಂದುಕ್ ನ್ಗಡೌ ಸ್ಪರ್ಧೆಗೆ ಸೇರಿಕೊಂಡೆ. ಯಾವುದೇ ಬಲವಂತವಿಲ್ಲದೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದೆ. ನನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಈ ಕಿರೀಟಕ್ಕೆ ಪರಿಪೂರ್ಣಳಲ್ಲ ಎಂದು ಹೇಳಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಅವಮಾನ; ಕೊಟ್ಟಿದ್ದ ಕಿರೀಟ ವಾಪಸ್​.. ಕಾರಣವೇನು?

https://newsfirstlive.com/wp-content/uploads/2024/04/viral-video1.jpg

Load More