ಮಲೇಷ್ಯಾ ಖ್ಯಾತ ಮಾಡೆಲ್‌ಗೆ ದೇವಾಲಯದ ಅರ್ಚಕನಿಂದ ಕಿರುಕುಳ.. ಕೇಸ್ ದಾಖಲಾಗ್ತಿದ್ದಂತೆ ಪರಾರಿ!

author-image
Bheemappa
Updated On
ಮಲೇಷ್ಯಾ ಖ್ಯಾತ ಮಾಡೆಲ್‌ಗೆ ದೇವಾಲಯದ ಅರ್ಚಕನಿಂದ ಕಿರುಕುಳ.. ಕೇಸ್ ದಾಖಲಾಗ್ತಿದ್ದಂತೆ ಪರಾರಿ!
Advertisment
  • 2021ರ ಮಿಸ್ ಗ್ರಾಂಡ್ ಮಲೇಷ್ಯಾ ವಿನ್ನರ್​ಗೆ ಅರ್ಚಕ ಕಿರುಕುಳ
  • ಭಾರತದ ಪವಿತ್ರ ನೀರು ಎಂದು ನಟಿ ದೇಹದ ಮೇಲೆ ಸಿಂಪಡಣೆ
  • ಖಾಸಗಿ ಕಚೇರಿಗೆ ಬರಲು ಹೇಳಿ ಅಸಭ್ಯವಾಗಿ ವರ್ತಿಸಿದ ಅರ್ಚಕ

ಮಲೇಷ್ಯಾದಲ್ಲಿ ಇರುವ ಭಾರತೀಯ ಮೂಲದ ನಟಿ, ಮಾಡೆಲ್ ಹಾಗೂ ಟಿವಿ ನಿರೂಪಕಿಗೆ ಮಲೇಷ್ಯಾದಲ್ಲಿ ಹಿಂದೂ ಅರ್ಚಕರೊಬ್ಬರು ಆಶೀರ್ವಾದ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಮಲೇಷ್ಯಾದ ಮರೀಯಮ್ಮನ್ ದೇವಾಲಯಕ್ಕೆ ಲಿಷಾಲೀನ್ಯಾ ಕನರನ್ (Lishalliny Kanaran) ಎಂಬ ನಟಿ ಭೇಟಿ ನೀಡಿದ್ದರು. ಈಕೆ 2021ರ ಮಿಸ್ ಗ್ರಾಂಡ್ ಮಲೇಷ್ಯಾ ವಿನ್ನರ್. ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ದೇವಾಲಯದ ಅರ್ಚಕ, ಭಾರತದಿಂದ ತಂದ ಪವಿತ್ರ ನೀರು ಅನ್ನು ನನ್ನ ಮೇಲೆ ಹಾಕಿದ್ದರು. ಬಳಿಕ ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಕಿರುಕುಳ ನೀಡಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

publive-image

ದೇವಾಲಯದ ಅರ್ಚಕ ಭಾರತದ ನಾಗರಿಕ. ಲೈಂಗಿಕವಾಗಿ ಕಿರುಕುಳ ನೀಡಿದ್ದರು ಎಂದು ನಟಿ ಲಿಷಾಲೀನ್ಯಾ ಕನರಲ್ ಹೇಳಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸದಂತೆ ಪೊಲೀಸ್ ಅಧಿಕಾರಿ, ನಟಿ ಲಿಷಾಲೀನ್ಯಾ ಕನರನ್​​ಗೆ ಎಚ್ಚರಿಕೆ ನೀಡಿದ್ದರಂತೆ. ನೀವು ಹೀಗೆ ಮಾಡಿದ್ರೆ, ನಿಮ್ಮ ತಪ್ಪು. ನಿಮ್ಮನ್ನೇ ಹೊಣೆ ಮಾಡಲಾಗುತ್ತೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರಂತೆ. ಆದರೇ, ಪೊಲೀಸ್ ಅಧಿಕಾರಿಯ ವಾರ್ನಿಂಗ್ ಬಳಿಕ ನಟಿ ಲಿಷಾಲೀನ್ಯಾ ಕನರನ್ ತಮಗಾದ ಕಹಿ ಅನುಭವವನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಇನ್​​ಸ್ಟಾದ ಪೋಸ್ಟ್​ನಲ್ಲಿ ನಟಿ ಹೇಳಿದ್ದು ಏನೇನು?

ಲೀಷಾಲೀನ್ಯಾ ಕನರನ್, ಇನ್​​ಸ್ಟಾದ ಪೋಸ್ಟ್​ನಲ್ಲಿ ಹೀಗೆ ಹೇಳಿದ್ದಾರೆ. ಜೂನ್ 21 ರಂದು ಲೀಷಾಲೀನ್ಯಾ ಕನರನ್ ಒಬ್ಬರೇ ದೇವಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಅವರ ತಾಯಿ ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲಿ, ಅರ್ಚಕರು ಪೂಜೆಯ ವಿಧಿವಿಧಾನಗಳ ಬಗ್ಗೆ ಲೀಷಾಲಿನ್ಯಾ ಕನರನ್​ಗೆ ಮಾರ್ಗದರ್ಶನ ಮಾಡುತ್ತಿದ್ದರು. ಲಿಷಾಲೀನ್ಯಾ ಕನರನ್​ಗೆ ಪೂಜೆ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಯಾವಾಗಲೂ ಅವರ ಸಹಾಯವನ್ನು ಮೆಚ್ಚಿಕೊಳ್ಳುತ್ತಿದ್ದರು. ಆ ದಿನ, ಲೀಷಾಲಿನ್ಯಾ ಕನರನ್ ಪ್ರಾರ್ಥನೆ ಮಾಡುವಾಗ, ಅರ್ಚಕ ಇವರ ಜೊತೆ ಮಾತನಾಡಿದ್ದಾರೆ. ನನ್ನ ಬಳಿ ಭಾರತದ ಪವಿತ್ರ ನೀರು ಇದೆ. ಇದು ನಿಮ್ಮನ್ನು ರಕ್ಷಿಸುತ್ತೆ. ಇದು ಆಶೀರ್ವಾದ. ಪ್ರಾರ್ಥನೆಯ ಬಳಿಕ ಅವರನ್ನು ಭೇಟಿಯಾಗಲು ಹೇಳಿದರು. 1 ಗಂಟೆ ಕಾಲ ಅರ್ಚಕರಿಗಾಗಿ ಕಾದೆ. ಅರ್ಚಕರು ಬೇರೆಯವರಿಗೆ ಆಶೀರ್ವಾದ ಮಾಡುತ್ತಿದ್ದರು. ಬಳಿಕ ತಮ್ಮ ಖಾಸಗಿ ಕಚೇರಿಗೆ ಬರಲು ಹೇಳಿದರು. ಅಲ್ಲಿ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ್ದರು.

ಮೊದಲಿಗೆ ಬಹಳ ಸ್ಟ್ರಾಂಗ್ ವಾಸನೆ ಬರುವ ದ್ರವ ಸಿಂಪಡಿಸಿ ಬಳಿಕ ದೇಹದ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದರು. ನನ್ನ ಒಳ್ಳೆಯದ್ದಕ್ಕೆ ಬಟ್ಟೆ ಬಿಚ್ಚುವಂತೆ ಹೇಳಿದರು. ನಾನು ಅದಕ್ಕೆ ನಿರಾಕರಿಸಿದಾಗ, ಅರ್ಚಕರು, ನಾನು ಟೈಟ್ ಆದ ಬಟ್ಟೆ ಧರಿಸಿರುವುದಕ್ಕೆ ಬೈದರು. ಬಳಿಕ ತಮ್ಮ ವಿಕೃತಿ ಮುಂದುವರೆಸಲು ಪ್ರಯತ್ನಿಸಿದರು. ನನಗೆ ಇಷ್ಟ ಆಗದ ರೀತಿ ಅವರ ವರ್ತನೆ ಇತ್ತು. ಅದನ್ನು ಅವರು ಆಶೀರ್ವಾದ ಎಂದು ಹೇಳಿದರು. ನಾನು ಇದನ್ನೆಲ್ಲಾ ಮಾಡಿದರೇ, ಇದು ಆಶೀರ್ವಾದ ಏಕೆಂದರೇ, ಅವರು ದೇವರ ಸೇವೆ ಮಾಡ್ತಾರೆ ಎಂದರು. ನನ್ನ ಮನಸ್ಸಿನಲ್ಲಿ ಇದೆಲ್ಲಾ ತಪ್ಪು ಎಂದು ಆ ಕ್ಷಣಕ್ಕೆ ಅನ್ನಿಸಿತ್ತು. ಆದರೇ, ನಾನು ಮಾತನಾಡಲಿಲ್ಲ. ಏಕೆ ಹೀಗಾದೆ ಎಂದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದು ಲೀಷಾಲಿನ್ಯಾ ಕನರನ್ ಇನ್​​ಸ್ಟಾದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಕನ್ನಡಿಗರಿಗೆ ಒಲಿದ ಸ್ಥಾನ.. ಟೀಮ್ ಇಂಡಿಯಾದ ಪ್ಲೇಯಿಂಗ್- 11ಗೆ ಬುಮ್ರಾ ಎಂಟ್ರಿ!

publive-image

ಜುಲೈ 4 ರಂದು ಲೀಷಾಲಿನ್ಯಾ ಕನರನ್, ಈ ಲೈಂಗಿಕ ಕಿರುಕುಳದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅರ್ಚಕರನ್ನು ಹುಡುಕುತ್ತಾ ದೇವಾಲಯಕ್ಕೆ ಹೋದಾಗ, ಈ ಅರ್ಚಕ ಅಲ್ಲಿಂದ ಪರಾರಿಯಾಗಿದ್ದ. ಸದ್ಯ ತಲೆಮರೆಸಿಕೊಂಡಿರುವ ಅರ್ಚಕನಿಗಾಗಿ ಪೊಲೀಸರು ಬಲೆ ಬೀಸಿದ್ದು ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment