ಭಾರತೀಯ ಪ್ರವಾಸಿಗರಿಲ್ಲದೆ ನಷ್ಟದ ದಾರಿಯಲ್ಲಿ ಮಾಲ್ಡೀವ್ಸ್​! ಕಳೆದ ವರ್ಷಕ್ಕೂ ಈ ವರ್ಷಕ್ಕೂ ವ್ಯತ್ಯಾಸ ಎಷ್ಟಿದೆ ಗೊತ್ತಾ?

author-image
AS Harshith
Updated On
ಭಾರತೀಯ ಪ್ರವಾಸಿಗರಿಲ್ಲದೆ ನಷ್ಟದ ದಾರಿಯಲ್ಲಿ ಮಾಲ್ಡೀವ್ಸ್​! ಕಳೆದ ವರ್ಷಕ್ಕೂ ಈ ವರ್ಷಕ್ಕೂ ವ್ಯತ್ಯಾಸ ಎಷ್ಟಿದೆ ಗೊತ್ತಾ?
Advertisment
  • ಒಂದೇ ಒಂದು ಮಾತಿನಿಂದ ಮನೆ ಕೆಡಿಸಿಕೊಂಡ ಮಾಲ್ಡೀವ್ಸ್​
  • ಭಾರತೀಯರಿಲ್ಲದೆ ಬಿಕೋ ಪರಿಸ್ಥಿತಿ ತಲುಪುತ್ತಿದೆ ಪ್ರವಾಸೋದ್ಯಮ
  • ಔಷಧಕ್ಕೂ ಭಾರತವನ್ನೇ ನಂಬಿಕೊಂಡಿದ್ದ ಮಾಲ್ಡೀವ್ಸ್​ ಪರಿಸ್ಥಿತಿ ಏನು?

ಮಾಲ್ಡೀವ್ಸ್​ ಮತ್ತು ಭಾರತದ ಸ್ನೇಹ ಸಂಬಂಧ ಹದಗೆಟ್ಟಿದೆ. ​ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮಾತಿನಿಂದ ಮಾಲ್ಡೀವ್ಸ್​ ನಷ್ಟದ ದಾರಿಯಲ್ಲಿದೆ. ಅದರಲ್ಲೂ ಭಾರತ ಪ್ರವಾಸಿಗರ ಸಂಖ್ಯೆಯಿಂದ ಮಾಲ್ವೀವ್ಸ್​ಗೆ ದೊಡ್ಡ ಹೊಡೆತ ಬಿದ್ದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಾಲ್ಡೀವ್ಸ್​ ಹೋಗುವ ಭಾರತೀಯರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದಂತೆ ಶೇ.33ರಷ್ಟು ಭಾರತೀಯರು ಮಾಲ್ಡೀವ್ಸ್​ಗೆ ಹೋಗೋದನ್ನ ನಿಲ್ಲಿಸಿದ್ದಾರೆ.

ಮಾಲ್ಡೀವ್ಸ್​ಗೆ ದೊಡ್ಡ ಹೊಡೆತ

ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದ ಅಂಕಿಅಂಶದಂತೆ 2023ರ ಮಾರ್ಚ್​ 4ರ ವೇಳೆಗೆ 41,054 ಭಾರತೀಯರು ಮಾಲ್ಡೀವ್ಸ್​ ಭೇಟಿ ನೀಡಿದ್ದರು. ಈ ವರ್ಷ ಮಾರ್ಚ್​ 2ರ ವೇಳೆಗೆ ಭಾರತೀಯರ ಸಂಖ್ಯೆ 27,224 ದಾಖಲಾಗಿದೆ. ಕಳೆದ ವರ್ಷ ಮತ್ತು ಈ ವರ್ಷವನ್ನು ಹೊಲೀಸಿದರೆ 13,830 ಜನರು ಮಾಲ್ಡೀವ್ಸ್​ ಹೋಗೋದನ್ನ ನಿಲ್ಲಿಸಿದ್ದಾರೆ.

publive-image

ಮಾಲ್ಡೀವ್ಸ್​ ಪ್ರವಾಸೋದ್ಯಮದ ಮೂಲಕ ದುಡಿಯುವ ದೇಶ.​ ಪ್ರತಿ ವರ್ಷ ಮಾಲ್ಡೀವ್ಸ್​ಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಆದರೆ ಮಾಲ್ಡೀವ್ಸ್ ಅಧ್ಯಕ್ಷ​ ಮೊಹಮ್ಮದ್ ಮುಯಿಜ್ಜು ಭಾರತೀಯ ವಿರೋಧಿ ಧೋರಣೆಯಿಂದಾಗಿ ಪ್ರವಾಸೋದ್ಯಮದ ನಷ್ಟದ ಅಂಚಿಗೆ ಸಾಗುತ್ತಿದೆ.

publive-image

ಆರೋಗ್ಯ, ಔಷಧಕ್ಕೂ ಕಷ್ಟ!

ಮಾಲ್ಡೀವ್ಸ್​ ದೇಶವು ಭಾರತವನ್ನು ಆರೋಗ್ಯ ದೃಷ್ಟಿಯಲ್ಲೂ ನಂಬಿಕೊಂಡಿತ್ತು. ಔಷಧಕ್ಕೂ ಭಾರತವನ್ನು ಅವಲಂಬಿಸಿತ್ತು. ಆ ದೇಶದ ಹೆಚ್ಚಿನ ಪ್ರಜೆಗಳು ಆರೋಗ್ಯ ದೃಷ್ಟಿಯಿಂದ, ಶುಶ್ರೂಶೆಗಾಗಿ ಭಾರತಕ್ಕೆ ಬರುತ್ತಾರೆ. ಮಾತ್ರವಲ್ಲದೆ ಭಾರತದಿಂದ ಮಾಲ್ಡೀವ್ಸ್​ಗೆ ಔಷಧಿ ಪೂರೈಕೆಯಾಗುತ್ತಿದೆ. ಆದರೀಗ ಇವೆಲ್ಲವು ಅಷ್ಟಕಷ್ಟೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment