ಕ್ಷಮಿಸಿ..!! ಭಾರತೀಯರು ನಮ್ಮನ್ನು ಕ್ಷಮಿಸಬೇಕು -ಕೈಮುಗಿದ ಮಾಲ್ಡೀವ್ಸ್​ ಮಾಜಿ ಅಧ್ಯಕ್ಷ

author-image
Ganesh
Updated On
ಕ್ಷಮಿಸಿ..!! ಭಾರತೀಯರು ನಮ್ಮನ್ನು ಕ್ಷಮಿಸಬೇಕು -ಕೈಮುಗಿದ ಮಾಲ್ಡೀವ್ಸ್​ ಮಾಜಿ ಅಧ್ಯಕ್ಷ
Advertisment
  • ಭಾರತ ಪ್ರವಾಸದಲ್ಲಿರುವ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್
  • ಮಾಲ್ಡೀವ್ಸ್​ ಮತ್ತು ಭಾರತ ಮಧ್ಯೆ ಉದ್ವಿಗ್ನತೆ ಮುಂದುವರಿದಿದೆ
  • ಮಾಲ್ಡೀವ್ಸ್‌ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದ ಮಾಜಿ ಅಧ್ಯಕ್ಷ

ಮೊಹಮ್ಮದ್ ಮುಯಿಝು (mohamed muizzu) ಅಧಿಕಾರಕ್ಕೆ ಬಂದಾಗಿಂದ ಭಾರತ ಮತ್ತು ಮಾಲ್ಡೀವ್ಸ್​ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದನ್ನ ಅವರ ಆಪ್ತ ಸಚಿವರು ಟೀಕಿಸಿದ ಬೆನ್ನಲ್ಲೇ, ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ವಿಷಮ ಆಗಿದೆ.

ಲೇಟೆಸ್ಟ್ ವಿಚಾರ ಏನೆಂದರೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಬಹಿಷ್ಕಾರದ ಕೂಗಿನ ನಡುವೆಯೂ ಮಾಲ್ಡೀವ್ಸ್ ಜನರ ಪರವಾಗಿ ಅವರು ಕ್ಷಮೆಯಾಚಿಸಿದ್ದಾರೆ.

ಈ ಉದ್ವಿಗ್ನತೆಯು ಮಾಲ್ಡೀವ್ಸ್‌ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅದರ ಬಗ್ಗೆ ನಾನು ತುಂಬಾ ಕಳವಳಗೊಂಡಿದ್ದೇನೆ. ಮಾಲ್ಡೀವ್ಸ್ ಜನರನ್ನು ಕ್ಷಮಿಸಿ ಎಂದು ಹೇಳಲು ನಾನು ಬಯಸುತ್ತೇನೆ. ಅಹಿತಕರ ಬೆಳವಣಿಗೆ ನಡೆದಿರುವುದು ನಿಜ. ಭಾರತೀಯರು ರಜಾದಿನಗಳಲ್ಲಿ ಮಾಲ್ಡೀವ್ಸ್‌ಗೆ ಬರಬೇಕೆಂದು ಬಯಸುತ್ತೇವೆ. ನಮ್ಮ ಆತಿಥ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment