newsfirstkannada.com

ಭಾರತವನ್ನು ಎದುರಾಕಿಕೊಂಡ ಮಾಲ್ಡೀವ್ಸ್​ಗೆ ಆರ್ಥಿಕ ಬಿಕ್ಕಟ್ಟು.. ದಿವಾಳಿ ಎಂದು ಘೋಷಿಸಿದ ಭೂಲೋಕದ ಸ್ವರ್ಗ

Share :

Published February 19, 2024 at 6:40am

Update February 19, 2024 at 6:41am

    ಭಾರತದ ಬಗ್ಗೆ ಮುಯಿಝು ಮೊಂಡತನದ ಹೇಳಿಕೆ

    ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿರುವ ಮಾಲ್ಡೀವ್ಸ್

    ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಭೂಲೋಕದ ಸ್ವರ್ಗ

ಮಾಲ್ಡೀವ್ಸ್​ ಅಧ್ಯಕ್ಷರಿಗೆ ಮೋದಿ ಕೊಟ್ಟ ಠಕ್ಕರ್​ ಕನಸಿನಲ್ಲೂ ಭಾರತದ ಹೆಸರನ್ನ ಕನವರಿಸುವಂತಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ವಿಲ ವಿಲ ಅಂತಿರೋ ಮಾಲ್ಡೀವ್ಸ್​ಗೆ ಮಾಡಿದ ತಪ್ಪಿನ ಅರಿವಾಗಿ ಪಶ್ಚತಾಪ ಪಡುವ ಕಾಲ ಸನಿಹವಾಗಿದೆ. ಮಾಲ್ಡೀವ್ಸ್‌ಗೆ ಪ್ರವಾಸಿಗರ ಪ್ರಮುಖ ಮೂಲವಾಗಿದ್ದ ಭಾರತ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವೂ ಕಂಡಿದೆ.

ಭೂಲೋಕದ ಸ್ವರ್ಗದಂತಿದ್ದ ಮಾಲ್ಡೀವ್ಸ್​ ಸದ್ಯ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಡಿದ ಎಡ್ವಟ್ಟಿನಿಂದ ಮೌನಕ್ಕೆ ಜಾರಿದೆ. ಮುಯಿಝು ಮೊಂಡತನದ ಹೇಳಿಕೆಯಿಂದ ಮಾಲ್ಡೀವ್ಸ್​ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಲಕ್ಷದ್ವೀಪದಲ್ಲಿ ಮೋದಿ ಇಟ್ಟ ಹೆಜ್ಜೆ ಮಾಲ್ಡೀವ್ಸ್​ನಲ್ಲಿ ಭಾರತದ ಪ್ರವಾಸಿಗರೇ ಇಲ್ಲದಂತೆ ಮಾಡಿದೆ. ಇಂಡಿಯಾ ಔಟ್​ ಅಂತ ಅಧಿಕಾರಕ್ಕೆ ಬಂದ ಮುಯಿಝ ತಾನೇ ಅಧಿಕಾರದಿಂದ ಔಟ್​ ಅನ್ನುವ ಸನ್ನಿವೇಶ ಸೃಚ್ಟಿಸಿಕೊಂಡಿದ್ದಾರೆ.

ಆರ್ಥಿಕ ಬಿಕ್ಕಟ್ಟು ಉಲ್ಬಣ.. ದಿವಾಳಿ ಘೋಷಿಸಿದ ಮಾಲ್ಡೀವ್ಸ್

ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್‌ ಈಗ, ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ. ಒಂದು ವೇಳೆ ಮಾಲ್ಡೀವ್ಸ್‌ ತನ್ನ ನೀತಿಗಳನ್ನ ಬದಲಿಸದಿದ್ದರೆ, ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಅಂತ ಐಎಮ್​ಎಫ್​ ಎಚ್ಚರಿಸಿದೆ ಅಂತ ವರದಿಗಳು ತಿಳಿಸಿವೆ. ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತ-ವಿರೋಧಿ ನಿಲುವು, ಸಚಿವರ ಮೋದಿ ವಿರೋಧಿ ಹೇಳಿಕೆಗಳು ರಾಜತಾಂತ್ರಿಕ ಸಂಬಂಧಗಳನ್ನ ಕೆಡಿಸಿವೆ. ಇದರಿಂದ ಭಾರತೀಯ ಪ್ರವಾಸಿಗರು ಮಾಲಾದ್ವೀಪದಿಂದ ದೂರ ಉಳಿದಿದ್ದು ಮಾಲ್ಡೀವ್ಸ್​ನಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಈ ಆರ್ಥಿಕ ಕುಸಿತ ತಗ್ಗಿಸಲು ಮಾಲ್ಡೀವ್ಸ್ ಬೇಲ್‌ಔಟ್ ಸಾಲ ಕೋರಿ IMFನತ್ತ ಮುಖ ಮಾಡಿದೆ. ಮಾಲ್ಡೀವ್ಸ್ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ಹೊಂದಿದ್ದು, ಈ ಪೈಕಿ ಚೀನಾವೊಂದಕ್ಕೇ 25,000 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದೆ. ಹೊಸ ಸಾಲ ಪಡೆಯಲು ಚೀನಾದ ಮತ್ತಷ್ಟು ಷರತ್ತು ಒಪ್ಪಲೇ ಬೇಕಿದೆ. ಇಲ್ಲದಿದ್ದರೆ ಸಾಲ ಸಿಗಲ್ಲ, ಸಿಕ್ಕಿದರೆ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗದೇ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುತ್ತದೆ.

ಮಾಲ್ಡೀವ್ಸ್‌

ಇನ್ನು ಮಾಲ್ಡೀವ್ಸ್‌ಗೆ ಪ್ರವಾಸಿಗರ ಪ್ರಮುಖ ಮೂಲವಾಗಿದ್ದ ಭಾರತ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರಯಾಣಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಕುಸಿದಿದೆ. ಇದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ತಟ್ಟಿದೆ. ಇದರ ಎಫೆಕ್ಟ್​ ಹೇಗಿದೆ ಅಂದ್ರೆ ಮೊನ್ನೆ ಮೊನ್ನೆಯಷ್ಟೇ ಭಾರತದ ವಿರುದ್ಧ ಕಿಡಿ ಕಾರುತ್ತಿದ್ದ ಮಾಲ್ಡೀವ್ಸ್ ಬೆಂಬಲಿಗರು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಂದ ಹಣದ ಸಹಾಯ ಕೇಳ್ತಿವೆ.

ಒಟ್ನಲ್ಲಿ ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಅನ್ನೋ ಹಾಗಾಗಿದೆ ಮಾಲ್ಡೀವ್ಸ್​ ಅಧ್ಯಕ್ಷರ ಪರಿಸ್ಥಿತಿಯಾಗಿದೆ. ನರಿ ಬಾಯಿಂದ ಹುಲಿ ಬಾಯಿಗೆ ಸಿಲುಕಿ ಪರಿತಪಿಸುವಂತಾಗಿದೆ. ಮತ್ತೆ ಸಾಲದ ಸುಳಿಯಿಂದ ಹೊರಬಂದು ಮೊದಲಿನ ಸ್ಥಿತಿಯನ್ನ ಮರುಕಳಿಸಲು ಮಾಲ್ಡೀವ್ಸ್​ ಸರ್ಕಾರ ಸರ್ಕಸ್ ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತವನ್ನು ಎದುರಾಕಿಕೊಂಡ ಮಾಲ್ಡೀವ್ಸ್​ಗೆ ಆರ್ಥಿಕ ಬಿಕ್ಕಟ್ಟು.. ದಿವಾಳಿ ಎಂದು ಘೋಷಿಸಿದ ಭೂಲೋಕದ ಸ್ವರ್ಗ

https://newsfirstlive.com/wp-content/uploads/2024/01/Maldives-President-1.jpg

Load More