newsfirstkannada.com

ನಮ್ಮದು ಚಿಕ್ಕ ದೇಶವಾಗಿರಬಹುದು, ನಮ್ಮನ್ನು ಬೆದರಿಸೋ ಹಕ್ಕು ನಿಮಗಿಲ್ಲ; ಮಾಲ್ಡೀವ್ಸ್​ ​ಅಧ್ಯಕ್ಷ ಮೊಹಮದ್ ಮುಯಿಝ್ಝು 

Share :

Published January 14, 2024 at 7:50am

    ನಾವು ಯಾರ ಹಿತ್ತಲಿನಲ್ಲಿಲ್ಲ ಎಂದ ಮೊಹಮದ್ ಮುಯಿಝ್ಝು

    ಚೀನಾ ಪ್ರವಾಸ ಮುಗಿಸಿ ದೇಶಕ್ಕೆ ಹಿಂತಿರುಗಿದ ವಾಲ್ಡೀವ್ಸ್ ಅಧ್ಯಕ್ಷ

    ಭಾರತಕ್ಕೆ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮದ್ ಮುಯಿಝ್ಝು ಪರೋಕ್ಷ ಎಚ್ಚರಿಕೆ

ಮಾಲ್ಡೀವ್ಸ್​ ​ಅಧ್ಯಕ್ಷ ಮೊಹಮದ್ ಮುಯಿಝ್ಝು ‘ನಮ್ಮದು ಚಿಕ್ಕ ದೇಶವಾಗಿರಬಹುದು. ನಮ್ಮನ್ನು ಬೆದರಿಸುವ ಹಕ್ಕು ನಿಮಗಿಲ್ಲ’ ಎಂದು ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಚೀನಾ ಪ್ರವಾಸ ಮುಗಿಸಿ ವಾಲ್ಡೀವ್ಸ್​ಗೆ ಹಿಂತಿರುಗಿದ ಮೊಹಮದ್ ಮುಯಿಝ್ಝು ‘ ನಾವು ಈ ಸಾಗರದಲ್ಲಿ ಸಣ್ಣ ದ್ವೀಪಗಳನ್ನು ಹೊಂದಿದ್ದರು, 900,000 ಚದರ ಕಿಲೋ ಮೀಟರ್ಸ್​​ಗಳಷ್ಟು ವಿಶಾಲವಾದ ಆರ್ಥಿಕ ವಲಯವನ್ನು ಹೊಂದಿದ್ದೇವೆ. ಸಾಗರದ ಅತಿದೊಡ್ಡ ಪಾಲನ್ನು ಹೊಂದಿರುವ ದೇಶಗಳಲ್ಲಿ ಮಾಲ್ಡೀವ್ಸ್​ ಒಂದಾಗಿದೆ’ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ‘ಸಾಗರವು ಒಂದು ನಿರ್ದಿಷ್ಟ ದೇಶಕ್ಕೆ ಸೇರಿದಲ್ಲ. ಎಲ್ಲಾ ದೇಶಗಳಿಗೂ ಸೇರಿದೆ. ನಾವು ಯಾರ ಹಿತ್ತಲಿನಲ್ಲಿಲ್ಲ, ನಾವು ಸ್ವತಂತ್ರ ಮತ್ತು ಸಾರ್ವಭೌಮ ರಾಜ್ಯ’ ಎಂದು ಹೇಳಿದ್ದಾರೆ.

ಚೀನಾ ಪ್ರವಾಸ ಮಾಡಿದ ಮೊಹಮದ್ ಮುಯಿಝ್ಝು ಅವರು ಕ್ಸಿ ಜಿನ್​ಪಿಂಗ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಉಭಯ ದೇಶಗಳ 20 ಒಪ್ಪಂದಗಳಿಗೆ ಸಹಿ ಹಾಕಿದ್ದರು. ಬಳಿಕ ಚೀನಾವನ್ನು ಹಾಡಿ ಹೊಗಳಿದ ಮೊಹಮದ್ ಮುಯಿಝ್ಝು, ಮಾಲ್ಡೀವ್ಸ್​ನ ರಾಷ್ಟ್ರೀಯ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಚೀನಾ ಬೆಂಬಲಿಸುತ್ತಾ ಬಮದಿದೆ. ಚೀನಾ ನಮಗೆ ಯುಎಸ್​ಡಿ 130 ಮಿಲಿಯನ್​ ಸಹಾಯವನ್ನು ಮಾಡಿದೆ. ಇದನ್ನು ರಸ್ತೆಗಳ ಪುನರಾಭಿವೃದ್ಧಿಗೆ ಬಹುಪಾಲು ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮದು ಚಿಕ್ಕ ದೇಶವಾಗಿರಬಹುದು, ನಮ್ಮನ್ನು ಬೆದರಿಸೋ ಹಕ್ಕು ನಿಮಗಿಲ್ಲ; ಮಾಲ್ಡೀವ್ಸ್​ ​ಅಧ್ಯಕ್ಷ ಮೊಹಮದ್ ಮುಯಿಝ್ಝು 

https://newsfirstlive.com/wp-content/uploads/2024/01/Mohamed-Muizzu.jpg

Load More