/newsfirstlive-kannada/media/post_attachments/wp-content/uploads/2024/10/BAGALAKOTE-MALE-SHEEP.jpg)
ಕುರಿ ಸಾಕಾಣಿಕೆ ನಮ್ಮ ದೇಶದಲ್ಲಿ ಪ್ರಮುಖ ಹೈನುಗಾರಿಕೆಯಲ್ಲಿ ಒಂದು. ಅದರಲ್ಲೂ ಟಗರುಗಳನ್ನು ಪೊಗರುದಸ್ತಾಗಿ ಬೆಳೆಸಿ ಅವುಗಳನ್ನು ಕಾಳಗಕ್ಕೆ ಕರೆದುಕೊಂಡು ಹೋಗಿ ಪ್ರಶಸ್ತಿ ಬಾಚಿಕೊಳ್ಳುವ ಹುಚ್ಚು ಕೂಡ ನಮ್ಮಲ್ಲೇನು ಕಡಿಮೆ ಇಲ್ಲ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಈ ಒಂದು ಉತ್ಸಾಹ ಕುರಿಗಾಹಿಗಳಲ್ಲಿ ನಾವು ಹೆಚ್ಚು ಕಾಣುತ್ತೇವೆ. ಒಂದೊಂದು ಟಗರು ಲಕ್ಷ ಬೆಲೆಗೆ ತೂಗುವ ರೀತಿಯಲ್ಲಿ ಅವುಗಳನ್ನು ಬೆಳೆಸುತ್ತಾರೆ. ಬಾಗಲಕೋಟೆಯಲ್ಲಿ ಈಗ ಒಂದು ಟಗರು ಭಾರಿ ಸುದ್ದಿ ಮಾಡಿದೆ. ಅದು ಮಾರಾಟವಾದ ಬೆಲೆ ಕೇಳಿಯೇ ಎಲ್ಲರೂ ಶಾಕ್ ಆಗುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಸ್ತೆಗಳಲ್ಲಿ ಮೀನುಗಳು! ಬಲೆ ಹಾಕಿದ ಜನ; ರಣ ಮಳೆಯ ಅನಾಹುತದ 10 ಫೋಟೋಗಳು..!
5 ಲಕ್ಷ ರೂಪಾಯಿಗೆ ಮಾರಟವಾದ ಟಗರು
ಬಾಗಲಕೋಟೆಯ ತಗ್ಗಿ ಗ್ರಾಮದ ಫಕೀರಯ್ಯ ಅವರ ಸಾಕಿದ ಟಗರು ಜಯಸಿಂಹ. ಈ ಟಗರಿನ ಖದರ್​ ನೋಡಿದ್ರೆ ಎಂತವರು ಕೂಡ ಒಂದು ಕ್ಷಣ ದಂಗಾಗಿ ಹೋಗಬೇಕು ಹಾಗೆ ಬೆಳೆಸಿದ್ದರು. ಒಂದಲ್ಲ ಎರಡಲ್ಲ, ಒಟ್ಟು 70 ಟಗರಿನ ಕಾಳಗದ ಕಣದಲ್ಲಿ ಗೆದ್ದು ಸೈ ಎನಿಸಿಕೊಂಡಿರುವ ದೈತ್ಯ ಟಗರು ಇದು. ಈ ಟಗರನ್ನು 2022ರಲ್ಲಿ ಫಕೀರಯ್ಯ ಸಂಗದ 90 ಸಾವಿರ ರೂಪಾಯಿ ನೀಡಿ ಖರೀದಿಸಿ ಸಾಕಿದ್ದರು. ಇಲ್ಲಿಯವರೆಗೆ ಅದು ಕಣದಲ್ಲಿ ಕಾದಾಡಿ ಒಂದು ಫ್ರಿಡ್ಜ್​, 25 ತೊಲೆ ಬೆಳ್ಳಿ, 3 ಲಕ್ಷ ರೂಪಾಯಿ ನಗದು,1 ಬೈಕ್ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಟಗರನ್ನು ಈಗ ಧಾರವಾಡದ ಅಮ್ಮಿನಭಾವಿಯವರಾದ ಪ್ರಜ್ವಲ್ ಎನ್ನುವವರು ದಾಖಲೆಯ ಬೆಲೆಗೆ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:ಊರಿಗೆ ಹೋಗಿದ್ದಕ್ಕೆ ಸಿಟ್ಟು.. ನನಗೆ ಊಟ ಮಾಡಿಕೊಡೋರು ಯಾರು ಎಂದು ತಾಯಿಯನ್ನೇ ಕೊಂ*ದ ಮಗ
ಪ್ರಜ್ವಲ್ ಅವರು ಮೊದಲಿನಿಂದಲೂ ಟಗರು ಪ್ರಿಯರು. ಎರಡು ದಿನಗಳ ಹಿಂದೆ ಜಯಸಿಂಹ ಎಂಬ ಟಗರು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದ ಪ್ರಜ್ವಲ್ ಇದನ್ನು 5 ಲಕ್ಷ 1 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಇದು ಈಗ ದೊಡ್ಡ ಸುದ್ದಿಯಾಗಿದೆ. ಲಕ್ಷ ಎರಡು ಲಕ್ಷ ಅಂದ್ರೆ ಒಕೆ ಒಂದು ಟಗರು 5 ಲಕ್ಷ ರೂಪಾಯಿಗೆ ಖರೀದಿಯಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us