/newsfirstlive-kannada/media/post_attachments/wp-content/uploads/2024/12/Maternity-Leave.jpg)
ಗಂಡು ಮಕ್ಕಳಿಗೂ ಕೂಡ ಹೆರಿಗೆ ರಜೆ ಇರಬೇಕಿತ್ತಪ್ಪಾ ಎಂದು ಹಲವು ತಮಾಷೆಗೆ ಮಾತನಾಡಿಕೊಳ್ಳುವುದು ನಮಗೆ ಗೊತ್ತೆ ಇದೆ. ರಜೆಯ ವಿಚಾರದಲ್ಲಿ ಹೆಣ್ಣು ಮಕ್ಕಳೆ ಅದೃಷ್ಟಶಾಲಿಗಳು, ಗಂಡು ಮಕ್ಕಳು ನತದೃಷ್ಟವಂತರು ಅವರಿಗೆ ಹೆರಿಗೆ ರಜೆ ಎನ್ನುವ ದೀರ್ಘಕಾಲದ ರಜೆ ಇದೆ, ನಮಗೇನು ಮಣ್ಣು ಇಲ್ಲ ಅಂತಿರುವ ಕಾಲಘಟ್ಟದಲ್ಲಿಯೇ ಶಿಕ್ಷಕನೊಬ್ಬ ತಾನು ಪುರುಷನಾದರೂ ಸಹ ಹೆರಿಗೆ ರಜೆಯನ್ನು ಮಂಜೂರು ಮಾಡಿಸಿಕೊಂಡು ವಾರಾನುಗಟ್ಟಲೇ ರಜೆಯಲ್ಲಿ ಮಜಾ ಮಾಡಿದ್ದಾನೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ.. ಹೊಸ ವರ್ಷಕ್ಕೆ ಇನ್ನಷ್ಟು ಹೆಚ್ಚಳವಾಗುತ್ತಾ ಸಿಲ್ವರ್, ಹಳದಿ ಲೋಹ​?
ಇಂತಹದೊಂದು ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಪುರುಷ ಶಿಕ್ಷಕನೊಬ್ಬ ಹೆರಿಗೆ ರಜೆಗಾಗಿ ಮನವಿ ಮಾಡಿದ್ದಾನೆ. ಅವನದೆಂತಾ ಅದೃಷ್ಟವೋ ಗೊತ್ತಿಲ್ಲ ಅವನ ಮೇಲಧಿಕಾರಿಗಳು ಶಿಕ್ಷಕ ಪುರುಷನಾಗಿದ್ದರು ಕೂಡ ಹೆರಿಗೆ ರಜೆಯನ್ನು ಮಂಜೂರಾತಿ ಮಾಡಿದ್ದರೆ. ಸಿಕ್ಕಿದ್ದೆ ಚಾನ್ಸು ಅಂತ ಶಿಕ್ಷಕ ವಾರಾನುಗಟ್ಟಲೆ ರಜೆಯನ್ನು ಮಜವಾಗಿ ಅನುಭವಿಸಿದ್ದಾನೆ.
ಈ ಒಂದು ಅಂಶ ಸರ್ಕಾರಿ ಶಿಕ್ಷಕರು ಆನ್​ಲೈನ್​ನಲ್ಲಿ ರಜೆಗೆ ಮನವಿ ಸಲ್ಲಿಸುವ ಯೂಸರ್ ಫೋರ್ಟಲ್​ನಲ್ಲಿ ಸಿಕ್ಕಿದೆ. ಆನ್​ಲೈನ್​ನಲ್ಲಿ ಇದನ್ನು ಕಂಡ ಸರ್ಕಾರಿ ಶಿಕ್ಷಕನೊಬ್ಬ ಅದರ ಸ್ಕ್ರೀನ್​ಶಾಟ್​ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾನೆ.
ಈ ವಿಷಯವು ಗಮನಕ್ಕೆ ಬರುತ್ತಿದ್ದಂತೆ ಮೇಲಾಧಿಕಾರಿಗಳು ಇದೊಂದು ತಾಂತ್ರಿಕ ದೋಷದಿಂದ ಆದಂತಹ ಸಮಸ್ಯೆ ಇದನ್ನು ಆದಷ್ಟು ಬೇಗ ಸರಿಮಾಡುತ್ತೇವೆ ಎಂದು ಹೇಳಿದ್ದಲ್ಲದೇ. ರಜೆಗಾಗಿ ಅರ್ಜಿ ಹಾಕುವ ವಿಚಾರದಲ್ಲಿ ಕೆಲವು ತಪ್ಪಾದ ಎಂಟ್ರಿಗಳಾಗಿವೆ. ಅದು ಕೂಡ ತಾಂತ್ರಿಕ ದೋಷದಿಂದ ಆಗಿದ್ದು ಕೂಡಲೇ ಅದನ್ನು ಸರಿ ಮಾಡುತ್ತೇವೆ ಎಂದು ವೈಶಾಲಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಅರ್ಚನಾ ಕುಮಾರಿ ಎಂಬುವವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us