/newsfirstlive-kannada/media/post_attachments/wp-content/uploads/2025/01/MALLIKARJUN-KHARGE.jpg)
144 ವರ್ಷಗಳ ಬಳಿಕ ಗಂಗಾ, ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮದಂಥ ಪರಮ ಪಾವನ ಸ್ಥಳದಲ್ಲಿ ಮಹಾಕುಂಭಮೇಳ ಮೇಳೈಸಿದೆ. ಪ್ರತಿದಿನವೂ ಅಸಂಖ್ಯ ಯಾತ್ರಿಕರು ಬಂದು ಪುಣ್ಯಸ್ನಾನ ಮಾಡ್ತಿದ್ದು, ಮುಕ್ತಿ ಪಡೆಯುತ್ತಿದ್ದಾರೆ. ಜನವರಿ 29 ಅಂದ್ರೆ ನಾಳೆ ಮೌನಿ ಅಮಾವಾಸ್ಯೆಯಂದ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಲು ಭಕ್ತಕೋಟಿಯೇ ಆಗಮಿಸುವ ನಿರೀಕ್ಷೆ ಇದೆ. ಆದ್ರೀಗ ಗಂಗಾ ಸ್ನಾನದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಶುರುವಾಗಿದೆ.
ಗಂಗಾ ಸ್ನಾನದಿಂದ ಬಡತನಕ್ಕೆ ಮುಕ್ತಿ ಸಿಗಲ್ಲ
ಈಗಾಗಲೇ ಕಳೆದ 15 ದಿನಗಳಿಂದ 13 ಕೋಟಿಗೂ ಅಧಿಕ ಜನರು ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮೂಡುವ ಮೂಲ ಭಗವಂತನ ಕೃಪೆಗೆ ಪಾತ್ರರಾಗ್ತಿದ್ದಾರೆ. ಬಿಜೆಪಿ ನಾಯಕರು ಕೂಡ. ತಾ ಮುಂದು ನಾ ಮುಂದು ಎಂಬಂತೆ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಯುಪಿ ಸಿಎಂ ಆದಿತ್ಯನಾಥ್.. ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ನಿನ್ನೆ ಪುಣ್ಯಸ್ನಾನ ಮಾಡಿದ್ದಾರೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಬಿಜೆಪಿ ನಾಯಕರನ್ನು ಟೀಕಿಸುವ ಭರದಲ್ಲಿ.. ಗಂಗಾ ಸ್ನಾನದಿಂದ ಬಡತನಕ್ಕೆ ಮುಕ್ತಿ ಸಿಗಲ್ಲ ಎಂದು ಹೇಳಿಕೆ ನೀಡುವ ಮೂಲಕ ಕೋಟ್ಯಂತರ ಹಿಂದೂ ಭಾವನೆಗೆ ಧಕ್ಕೆ ತಂದಿದ್ದಾರೆ.
ಇದನ್ನೂ ಓದಿ: ಡಿ.ಕೆ ಸುರೇಶ್ಗೆ ಮಹತ್ವದ ಹುದ್ದೆ? ಹೇಗಿದೆ DCM ಡಿ.ಕೆ ಶಿವಕುಮಾರ್ ಕಸರತ್ತು?
ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ದೂರವಾಗುತ್ತದೆಯೇ? ನಿಮ್ಮ ಹೊಟ್ಟೆಗೆ ಆಹಾರ ಸಿಗುತ್ತದೆಯೇ? ನಾನು ಯಾರ ನಂಬಿಕೆಗೆ ಧಕ್ಕೆ ತರಲು ಬಯಸುವುದಿಲ್ಲ ಮತ್ತು ನನ್ನ ಮಾತುಗಳು ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದೆ.. ಹಸಿವಿನಿಂದ ಸಾಯುತ್ತಿರುವಾಗ, ಕೂಲಿ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ, ಆದರೆ ಬಿಜೆಪಿ ನಾಯಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಗಂಗಾನದಿಯಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ನಿಗಿನಿಗಿ
ಗಂಗಾ ಸ್ನಾನದಿಂದ ದೇಶದ ಬಡತನ ನಿವಾರಣೆಯಾಗುವುದಿಲ್ಲ ಎಂದು ಖರ್ಗೆ ಹೇಳಿಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದು. ಕಾಂಗ್ರೆಸ್ ನಾಯಕರು ಇಫ್ತಾರ್ ಕೂಟ ಮಾಡುವುದರಿಂದ ದೇಶದ ಶ್ರೀಮಂತಿಕೆ ಹೆಚ್ಚುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ಸೂಕ್ತ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಸ್; ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ನಾನು ಇವತ್ತು ಚಾಲೆಂಜ್ ಮಾಡ್ತೀನಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಬೇರೆ ಧರ್ಮದ ವಿಚಾರಗಳ ಬಗ್ಗೆ ಮಾತನಾಡುತ್ತಾರಾ?.. ಇಫ್ತಾರ್ ಕೂಟದಲ್ಲಿ ಹೋಗಿದ್ರಿಂದ ಬಡತನ ದೂರ ಆಗುತ್ತೆ, ಜನರಿಗೆ ಕೆಲಸ ಆಗುತ್ತೆ ಅಂತ ಅವರು ಹೇಳ್ತಾರಾ?. ಗಂಗಾ ನದಿ ಮತ್ತು ಪ್ರಯಾಗ್ರಾಜ್ನಂತಹ ಪವಿತ್ರ ಸ್ಥಳ ಹಾಗೂ ಕುಂಭಮೇಳದಂತಹ ಕಾರ್ಯಕ್ರಮ ಬಗ್ಗೆ ನಾಲಿಗೆ ಹರಿಬಿಡೋದು ಖಂಡನೀಯ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಕೇವಲ ಬಿಜೆಪಿ ಮಾತ್ರವಲ್ಲ.. ಇಂಡಿಯಾ ಕೂಟದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಇಂಡಿಯಾ ಕೂಟದಲ್ಲಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಇದೀಗ ಖರ್ಗೆ ಹೇಳಿಕೆಯಿಂದ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಮಿಲ್ಕಿಪುರ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಒಟ್ಟಾರೆ.. 144 ವರ್ಷಗಳ ಬಳಿಕ ಬಂದಿರುವ ಈ ಪುಣ್ಯದ ಕಾರ್ಯದಲ್ಲಿ ರಾಜಕೀಯ ಮೇಲಾಟಗಳ ನಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ..
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ