newsfirstkannada.com

ಶೆಟ್ಟರ್​​ ಬಿಜೆಪಿಗೆ ಹೋದ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಆತಂಕ.. ಸಿದ್ದು, ಡಿಕೆಶಿಗೆ ಖರ್ಗೆ ವಾರ್ನಿಂಗ್​​​

Share :

Published January 26, 2024 at 8:25pm

Update January 26, 2024 at 8:14pm

    ಬಿಜೆಪಿ ಆಟಕ್ಕೆ ಕಾಂಗ್ರೆಸ್​​ ಗಲ್ಲಿಯಲ್ಲಿ ಗಲಿಬಿಲಿ ಶುರು

    ಕಾಂಗ್ರೆಸ್​​​ಗೆ ಶೆಟ್ಟರ್​ ಶಾಕ್​​.. ರಾಜ್ಯ ರಾಜಕೀಯ ಶೇಕ್​​​!

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ಗೆ ಖರ್ಗೆ ಬುದ್ಧಿವಾದ

ಬೆಂಗಳೂರು: ಬಿಜೆಪಿ ಆಟಕ್ಕೆ ಕಾಂಗ್ರೆಸ್​​ ಗಲ್ಲಿಯಲ್ಲಿ ಗಲಿಬಿಲಿ ಶುರುವಾಗಿದೆ. ಏಕಾಏಕಿ ಮನೆಯಿಂದ ಎದ್ದುಹೋದ ಶೆಟ್ಟರ್​​ ನಡೆಯಿಂದ ತಳಮಳ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ಈ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆಯಾರಾಮ್​ ಗಯಾರಾಮ್​ಗಳ ಬಗ್ಗೆ ಹುಶಾರಾಗಿರಿ ಅಂತ ಬುದ್ದಿ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್​​ನ ಸಚಿವರ ತಂಡವೇ ಶೆಟ್ಟರ್​​ ವಿರುದ್ಧ ಸಿಡಿದುಬಿದ್ದಿದೆ.

ಲೋಕಸಭೆ ಎಲೆಕ್ಷನ್​​ ಹೊತ್ತಲ್ಲೇ ಬಿಜೆಪಿ ಸರ್ಪ್ರೈಸ್​​ ಅಟ್ಯಾಕ್​​ ಮಾಡಿದೆ. ಸುಳಿವೇ ಸಿಗದಂತೆ ನಡೆದ ಸರ್ಜಿಕಲ್​ ಸ್ಟ್ರೈಕ್​ನಿಂದ ಕಾಂಗ್ರೆಸ್​​ನಿಂದ ಬಹುದೊಡ್ಡ ಲಿಂಗಾಯತ ವಿಕೆಟ್​​ ಪತನ ಆಗಿದೆ. ಎಲೆಕ್ಷನ್​ ಸಮೀಪಿಸ್ತಿದ್ದಂತೆ ಬಿಜೆಪಿ ಆರಂಭಿಸಿದ ಈ ಹೊಸ ಆಟಕ್ಕೆ ಕೈಪಡೆ ತಂತ್ರಗಳು ನೆಲಕಚ್ಚುತ್ತಿವೆ. ಕಾಂಗ್ರೆಸ್​​​ ದುಖಾನ್​​ಗೆ ಶೆಟರ್​​​ ಎಳೆದ ಮಾಜಿ ಸಿಎಂ, ಬಿಜೆಪಿ ಗಲ್ಲಿಯಲ್ಲಿದ್ದ ತಮ್ಮದೇ ಹಳೆಯ ಅಂಗಡಿಯನ್ನ ರೀ-ಓಪನ್​​ ಮಾಡಿದ್ದಾರೆ.

ಲೋಕಸಭೆ ಗೆಲ್ಲುವ ಕನಸಿನ ಬೆನ್ನೇರಿ ಪಾದಯಾತ್ರೆ ಹೊರಟ ರಾಹುಲ್​​​​, ನ್ಯಾಯ್​​​ ಯಾತ್ರೆ ದಾರಿ ಮಧ್ಯೆಯೇ ಪಂಚರ್​ ಆಗ್ತಿದೆ. ಎಲೆಕ್ಷನ್​​​ನಲ್ಲಿ ಬೀಸುವ ಗಾಳಿಯತ್ತ ತೂರಿಕೊಳ್ಳುವ ನಾಯಕರು ಜಂಪಿಂಗ್ ಜಪಾಂಗ್ ಪಾಲಿಟಿಕ್ಸ್​ ಶುರು ಮಾಡಿದ್ದಾರೆ. ಕಾಂಗ್ರೆಸ್‌ಗೆ ಸರ್ಪ್ರೈಸ್ ಶಾಕ್‌ ಕೊಡ್ತಿದ್ದಂತೆ ಕೈ ಪಡೆ ಕಂಗಾಲಾಗಿದ್ದು, ಕಾಂಗ್ರೆಸ್​​​ನಲ್ಲಿ ಶೆಟ್ಟರ್​​ ಅಕೌಂಟ್​​​ ತೆರೆದಿದ್ದ ಎಐಸಿಸಿ ಅಧ್ಯಕ್ಷ ಖರ್ಗೆಗೆ ಈ ಬೆಳವಣಿಗೆ ಮರ್ಮಾಘಾತ ನೀಡಿದೆ.

ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು

ಈ ಬೆಳವಣಿಗೆ ನಡೆದ ಮರು ದಿನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಅವರು, ಕಾಂಗ್ರೆಸ್​ ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು ಅಂತ ಶೆಟ್ಟರ್​​ಗೆ ತಿವಿದ್ರು. ಅಲ್ಲದೆ, ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಯೋಚಿಸಿ, ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ರಾಜ್ಯದ ಜೋಡೆತ್ತಿಗೆ ಬುದ್ದಿ ಹೇಳಿದ್ದಾರೆ.

ಕಾಂಗ್ರೆಸ್​ ಸಮುದ್ರ ಇದ್ದಂತೆ, ನೂರಾರು ಜನ ಬರ್ತಾರೆ, ಹೋಗ್ತಾರೆ

ಇನ್ನು, ಶೆಟ್ಟರ್ ರಾಜಕೀಯ ಮರು ವಲಸೆಗೆ ಕಾಂಗ್ರೆಸ್​​​ ಸಮುದ್ರ ಇದ್ದಂತೆ, ಬರ್ತಾರೆ ಹೋಗ್ತಾರೆ ಎಂದ ಡಿಸಿಎಂ ಡಿಕೆಶಿ, ಚುನಾವಣೆಯಲ್ಲಿ ಶೆಟ್ಟರ್ ಪರಾಭವಗೊಂಡ್ರೂ ನಾವು ಕೈ ಬಿಟ್ಟಿಲ್ಲ. ಹಿರಿಯರು ಅಂತ ಪರಿಷತ್ ಸ್ಥಾನಕ್ಕೂ ಅವಕಾಶ ಕಲ್ಪಿಸಿಕೊಟ್ಟೆವು ಅಂತ ಬೇಸರ ಹೊರಹಾಕಿದ್ರು.

ಬ್ಯಾಕ್ ಟು ಬ್ಯಾಕ್​ ಕೈ ಸಚಿವರಿಂದ ಶೆಟ್ಟರ್​ ವಿರುದ್ಧ ಕಿಡಿ

ಶೆಟ್ಟರ್​​​ ರಿಟರ್ನ್​​ ಆಗಿದ್ದು, ಬೆಳಗಾವಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬೆಳಗಾವಿಯ ಇಬ್ಬರು ಪ್ರಭಾವಿ ಕೈ ನಾಯಕರು, ಭವಿಷ್ಯದ ಡ್ಯಾಮೇಜ್​​ ಕಂಟ್ರೋಲ್​​ಗೆ ಮುಂದಾಗಿದ್ದಾರೆ. ಜಾರಕಿಹೊಳಿಗೆ ಇದು ಮಾಮೂಲಿ ಬೆಳವಣಿಗೆ ಎನಿಸಿದ್ರೆ, ಹೆಬ್ಬಾಳ್ಕರ್​​​ಗೆ ಶಾಕ್​​​ ನೀಡಿದೆ. ಆದ್ರೆ, ಪ್ರಿಯಾಂಕ್​​ ಖರ್ಗೆ ಕಣ್ಣಿಗೆ ಇ.ಡಿ ಕಾಣಿಸಿದೆ.

ಒಟ್ಟಾರೆ, ಶೆಟ್ಟರ್​​​, ಬಿಜೆಪಿಯತ್ತ ಹಾರಿದ್ದು, ಇನ್ನಷ್ಟು ಹಕ್ಕಿಗಳು ಗೂಡು ತೊರೆಯುವ ಆತಂಕ ಕಾಂಗ್ರೆಸ್​​​ಗೆ ಕಾಡ್ತಿದೆ. ಬಿಜೆಪಿ ಘರ್‌ವಾಪ್ಸಿ ಕಾರ್ಯಾಚರಣೆಯನ್ನ ಮತ್ತಷ್ಟು ತೀವ್ರಗೊಳಿಸಲು ಪ್ಲಾನ್​​ ರೂಪಿಸಿದ್ದು, ಹಾರುವ ಹಕ್ಕಿಗಳನ್ನ ಕಂಟ್ರೋಲ್‌ ಮಾಡೋದೇ ಕಾಂಗ್ರೆಸ್​​​ಗೆ ಸವಾಲಾಗಿ ಪರಿಣಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೆಟ್ಟರ್​​ ಬಿಜೆಪಿಗೆ ಹೋದ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಆತಂಕ.. ಸಿದ್ದು, ಡಿಕೆಶಿಗೆ ಖರ್ಗೆ ವಾರ್ನಿಂಗ್​​​

https://newsfirstlive.com/wp-content/uploads/2023/06/Jagadish-Shettar.jpg

Load More