/newsfirstlive-kannada/media/post_attachments/wp-content/uploads/2025/04/KLB_MALLIKARJUN.jpg)
ಕಲಬುರಗಿ: ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಪ್ರವಾಸಿ ತಾಣದಲ್ಲಿ ನಡೆದಂತ ಭಯೋತ್ಪಾದಕರ ಪೈಶಾಚಿಕ ಕೃತ್ಯದಿಂದ ಕಲಬುರಗಿಯ ಹಿರಿಯ ವಕೀಲರೊಬ್ಬರ ಕುಟುಂಬದ 8 ಜನ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಎಲ್ಲರೂ ದಾಳಿ ನಡೆಯುವ ಮೊದಲೇ ಬೇರೆ ನಗರಕ್ಕೆ ತೆರಳಿದ್ದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಕಲಬುರಗಿಯ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಸೇರಿದಂತೆ ಅವರ ಕುಟುಂಬದ 8 ಮಂದಿ ಜಮ್ಮು ಕಾಶ್ಮೀರದ ಪ್ರವಾಸ ಮಾಡುತ್ತಿದ್ದಾರೆ. ಇವರು ಪಹಲ್ಗಾಮ್ನಲ್ಲಿರುವ ಆರು ವ್ಯಾಲಿ, ಬೇತಾಬ ವ್ಯಾಲಿಯ ಪ್ರವಾಸ ಮುಗಿಸಿಕೊಂಡು ಶ್ರೀನಗರಕ್ಕೆ ಹೋಗಿದ್ದಾರೆ. ಇವರು ಶ್ರೀನಗರಕ್ಕೆ ಹೋದ ಕೆಲವೇ ಗಂಟೆಗಳಲ್ಲಿ ಪಹಲ್ಗಾಮ್ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಪ್ರವಾಸಿಗರ ಜೀವ ತೆಗೆದಿದ್ದಾರೆ.
ಪಹಲ್ಗಾಮ್ನಲ್ಲಿ ಏಪ್ರಿಲ್ 20, 21 ರಂದು ಆರು ವ್ಯಾಲಿ, ಬೇತಾಬ ವ್ಯಾಲಿಯನ್ನು ನೋಡಿಕೊಂಡು ಅದೇ ರಾತ್ರಿ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ಅವರ ಕುಟುಂಬದವರು ಶ್ರೀನಗರಕ್ಕೆ ತೆರಳಿದ್ದಾರೆ. ಇದರಿಂದ ದೊಡ್ಡ ಅನಾಹುತದಿಂದ ಎಲ್ಲರೂ ಕೊಂಚದರಲ್ಲೇ ಸೇಫ್ ಆಗಿದ್ದಾರೆ ಎನ್ನಬಹುದು. ಶ್ರೀನಗರದಲ್ಲಿರುವ ಮಲ್ಲಿಕಾರ್ಜುನ ಭೃಂಗಿಮಠ ತಮ್ಮ ಫೇಸ್ಬುಕ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿನ್ನೆ, ಮೊನ್ನೆ ಅಂದರೆ ಏಪ್ರಿಲ್ 20, 21 ರಂದು ಆರು ವ್ಯಾಲಿ, ಬೇತಾಬ ವ್ಯಾಲಿಯನ್ನು ಮುಗಿಸಿಕೊಂಡು ಈಗ ಶ್ರೀನಗರಕ್ಕೆ ಬಂದಿದ್ದೇವೆ. ಆದರೆ ನನಗೆ ಸಾಕಷ್ಟು ಫೋನ್ ಕಾಲ್ ಬಂದಿದ್ದವು. ಎಲ್ಲರೂ ನೀವು ಅರಮವಾಗಿ ಇದ್ದೀರಾ ಎಂದು ಕೇಳುತ್ತಿದ್ದರು. ಯಾಕೆ ಎಂದು ಪ್ರಶ್ನಿಸಿದೆ. ಇದಕ್ಕೆ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ಮಾಡಿದ್ದಾರೆ ಅಂತ ಹೇಳಿದರು. ನಂತರ ನಾನು ಟಿವಿಯಲ್ಲಿ ನೋಡಿ ಮಾಹಿತಿ ತಿಳಿದುಕೊಂಡೆ. ನಾವೆಲ್ಲ ಶ್ರೀನಗರಕ್ಕೆ ಬಂದಿದ್ದು ಎಲ್ಲರೂ ಚೆನ್ನಾಗಿದ್ದೇವೆ. ಸೇಫ್ ಆಗಿದ್ದೇವೆ ಎಂದು ಹಿರಿಯ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಹೇಳಿದ್ದಾರೆ.
ಇದನ್ನೂ ಓದಿ: Pahalgam; ಹೆಂಡತಿ, ಮಕ್ಕಳ ಮುಂದೆಯೇ IB ಅಧಿಕಾರಿಯ ಜೀವ ತೆಗೆದ ಕ್ರೂರಿಗಳು
ಮಲ್ಲಿಕಾರ್ಜುನ ಭೃಂಗಿಮಠ ಕುಟುಂಬದವರು ಏಪ್ರಿಲ್ 16 ರಂದು ಕಲಬುರಗಿಯಿಂದ ಜಮ್ಮುಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ. ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಮಲ್ಲಿಕಾರ್ಜುನ ಭೃಂಗಿಮಠ ಕುಟುಂಬದವರು ಉಗ್ರರ ದಾಳಿ ನಡೆಸಿದ ಸ್ಥಳದ ಸಮೀಪದಲ್ಲೇ ಸುತ್ತಾಡಿದ್ದರು. ಇನ್ನು ಬೇರೆ ಬೇರೆ ಸ್ಥಳಗಳನ್ನು ನೋಡಬೇಕಾಗಿದ್ದರಿಂದ ಅದೇ ರಾತ್ರಿ ಪಹಲ್ಗಾಮ್ನಿಂದ ಶ್ರೀನಗರಕ್ಕೆ ತೆರಳಿದ್ದರಿಂದ ಇಡೀ ಕುಟುಂಬ ಸುರಕ್ಷಿತವಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ