/newsfirstlive-kannada/media/post_attachments/wp-content/uploads/2024/08/HARDIK-PANDYA-5.jpg)
ಕೆಲ ದಿನಗಳ ಹಿಂದೆ ಬಿಸಿಸಿಐನ ವಾಂಖೆಡೆ ಕಚೇರಿಯಲ್ಲಿ ಐಪಿಎಲ್ ಅಧಿಕಾರಿಗಳು ಮತ್ತು ತಂಡದ ಮಾಲೀಕರ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಐಪಿಎಲ್ ಫ್ರಾಂಚೈಸಿಗಳ ಕೆಲವು ಮಾಲೀಕರು ಭಾಗವಹಿಸಿದ್ದರು. ಸಭೆ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.
ವರದಿಗಳ ಪ್ರಕಾರ.. ಮುಂಬೈ ಇಂಡಿಯನ್ಸ್ ತಮ್ಮ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡಲಿದೆ. 2024ರ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ಜವಾಬ್ದಾರಿಯನ್ನ ನೀಡಿತ್ತು. ರೋಹಿತ್ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಕಿತ್ಕೊಂಡು ಪಾಂಡ್ಯಗೆ ನೀಡಿರೋದು ಭಾರೀ ಟೀಕೆಗೆ ಕಾರಣವಾಗಿತ್ತು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋತಿತ್ತು.
ಇದನ್ನೂ ಓದಿ:ಪಂದ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್ ಕೊಟ್ಟ ಅಸಲಂಕಾ.. ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ..!
4 ಆಟಗಾರರನ್ನು ಉಳಿಸಿಕೊಳ್ಳಬಹುದು
ಮೂಲಗಳ ಪ್ರಕಾರ.. ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರನ್ನು ರಿಟೈನ್ ಮಾಡಿಕೊಳ್ಳಲಿದೆ. ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡುತ್ತದೆ. ಏಕೆಂದರೆ ಸೂರ್ಯಕುಮಾರ್ ಈಗ ಟಿ 20 ಸ್ವರೂಪದಲ್ಲಿ ದೇಶದ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೇ ಮುಂಬೈ ಇಂಡಿಯನ್ಸ್ ತಂಡದ ಜಾವಾಬ್ದಾರಿಯನ್ನು ನೀಡಬಹುದು. ಸೂರ್ಯನಿಗೆ ಕ್ಯಾಪ್ಟನ್ಸಿಯನ್ನು ಮುಂಬೈ ಇಂಡಿಯನ್ಸ್ ನೀಡೋದೇ ಆದರೆ, ತಿಲಕ್ ವರ್ಮಾ ಅವರನ್ನು ಸೂರ್ಯ ಉಳಿಸಿಕೊಳ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘14 ಬಾಲ್ಗೆ 1 ರನ್ ಬೇಕಿತ್ತು.. ಆದರೂ ಗೆಲ್ಲಲು ಆಗಲಿಲ್ಲ’ ರೋಹಿತ್ ಶರ್ಮಾ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ