Kumbh Mela; 2000 ಕೋಟಿ ಹಣದ ಡ್ರಗ್ಸ್ ಕೇಸ್​ನಲ್ಲಿ ಸಿಲುಕಿದ್ದ ಬಾಲಿವುಡ್‌ ನಟಿ ಈಗ ಸಾಧ್ವಿ

author-image
Bheemappa
Updated On
ಮಹಾಕುಂಭಮೇಳದಿಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ ಉಚ್ಛಾಟನೆ; ಕಾರಣವೇನು?
Advertisment
  • 2012ರ ನಂತರ 2025ರ ಕುಂಭಮೇಳದಲ್ಲಿ ಭಾಗಿಯಾದ ಮಮತಾ
  • ಹಲವು ವರ್ಷಗಳಿಂದ ವಿದೇಶದಲ್ಲಿ ನಡೆಸಿದ್ದ ಬಾಲಿವುಡ್ ನಟಿ
  • ಡ್ರಗ್ಸ್​ ಕೇಸ್ ಸಂಬಂಧ ಅಮೆರಿಕದಲ್ಲಿ ವಿಚಾರಣೆಗೆ ಹಾಜರಾಗಿದ್ರು

90ರ ದಶಕದಲ್ಲಿ ಹುಡಗರ ಮನ ಕದಡಿದ್ದ ಬಾಲಿವುಡ್​ ನಟಿ ಮಮತಾ ಕುಲಕರ್ಣಿ ಅವರು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಮಮತಾ ಕುಲಕರ್ಣಿ ಅವರನ್ನು ಇನ್ಮುಂದೆ ಯಾಮೈ ಮಮತಾ ನಂದಗಿರಿ ಎನ್ನುವ ಹೆಸರಿಂದ ಗುರುತಿಸಲಾಗುತ್ತದೆ.

publive-image

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಮಹಾಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಅವರು ಸನ್ಯಾಸತ್ವ ಸ್ವೀಕಾರಿಸಿದ್ದು, ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ಮಮತಾ ಕುಲಕರ್ಣಿ ನೇಮಕಗೊಂಡಿದ್ದಾರೆ. 2000ದಿಂದ ಇಲ್ಲಿವರೆಗೆ ಅಂದರೆ 25 ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. 2012ರಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ಅವರು ಮತ್ತೆ ವಿದೇಶಕ್ಕೆ ಮರಳಿದ್ದರು. ಈಗ ಮತ್ತೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ.

ಮಮತಾ ಕುಲಕರ್ಣಿ ಅವರು 2024ರ ಡಿಸೆಂಬರ್​ನಲ್ಲಿ ವಿದೇಶದಿಂದ ಭಾರತಕ್ಕೆ ವಾಪಸ್ ಆಗಿದ್ದರು. ನಾನು 25 ವರ್ಷಗಳ ನಂತರ ತಾಯಿನಾಡಿಗೆ ಬಂದಿದ್ದೇನೆ. 12 ವರ್ಷಗಳ ಬಳಿಕ ಮತ್ತೊಂದು ಮಹಾ ಕುಂಭಮೇಳಕ್ಕೆ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ. ಸದ್ಯ ಮಮತಾ ಕುಲಕರ್ಣಿ ಅವರು ಮಹಾ ಕುಂಭಮೇಳದಲ್ಲಿ ಅಧ್ಯಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:ಲಾಯರ್ ಜಗದೀಶ್, ಮಗ, ಗನ್​ಮ್ಯಾನ್​ ಅರೆಸ್ಟ್​.. ಕೋರ್ಟ್​ಗೆ ಹಾಜರು ಪಡಿಸಲಿರೋ ಪೊಲೀಸರು

publive-image

ಮಹಾಂಡಲೇಶ್ವರ ಆಚಾರ್ಯ ನಾರಾಯಣ ತ್ರಿಪಾಠಿ ಮಾತನಾಡಿ, ಮಮತ ಕುಲಕರ್ಣಿ ಅವರು ಕಳೆದ 10 ವರ್ಷಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಸನಾತನ ಧರ್ಮಕ್ಕೆ ತಕ್ಕಂತೆ ಇರುವುದು ಅವರಿಗೆ ತಿಳಿದಿದೆ. ಧರ್ಮ ವಿಚಾರದಲ್ಲಿ ಬದ್ಧವಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಮತಾ ಕುಲಕರ್ಣಿ ಅವರು ವಿಕಿ ಗೋಸ್ವಾಮಿ ಜೊತೆ ಮದುವೆ ಆಗಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಆಫ್ರಿಕಾದಲ್ಲಿ ನೆಲೆಸಿದ್ದರು. 2000 ಕೋಟಿ ಹಣದ ಡ್ರಗ್ಸ್ ಪ್ರಕರಣದಲ್ಲಿ ಮಮತಾ ಕುಲಕರ್ಣಿಯರ ಹೆಸರು ಕೇಳಿ ಬಂದಿತ್ತು. ಈ ಮಾದಕ ವಸ್ತು ಪ್ರಕರಣ ಸಂಬಂಧ ಅಮೆರಿಕದ ತನಿಖಾ ಸಂಸ್ಥೆಯ ತನಿಖೆಗೂ ನಟಿ ಹಾಜರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment