ಪತಿಗೆ 100, ಪತ್ನಿಗೆ 102 ವರ್ಷ.. ಇವರು ವಿಶ್ವದ ಅತ್ಯಂತ ಹಿರಿಯ ದಂಪತಿಗಳು; ಗಿನ್ನಿಸ್ ರೆಕಾರ್ಡ್‌!

author-image
Gopal Kulkarni
Updated On
ಪತಿಗೆ 100, ಪತ್ನಿಗೆ 102 ವರ್ಷ.. ಇವರು ವಿಶ್ವದ ಅತ್ಯಂತ ಹಿರಿಯ ದಂಪತಿಗಳು; ಗಿನ್ನಿಸ್ ರೆಕಾರ್ಡ್‌!
Advertisment
  • 102 ವಯಸ್ಸಿನ ಗೆಳತಿಯನ್ನು ಮದುವೆಯಾದ 100 ವರ್ಷದ ವೃದ್ಧ
  • ಗಿನ್ನಿಸ್ ರೆಕಾರ್ಡ್ ಮಾಡಿದ ಫಿಲಿಡೆಲ್ಫಿಯಾದ ಈ ಶತಕದ ಜೋಡಿ
  • ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಮದುವೆಯಾಗಿದ್ದೇ ಒಂದು ರೋಚಕ ಕತೆ

ಫಿಲಿಡೆಲ್ಫಿಯಾದಲ್ಲಿ ಒಂದು ಜೋಡಿ ಗಿನ್ನಿಸ್ ರೆಕಾರ್ಡ್​ ಸೆಟ್ ಮಾಡಿದೆ. ವಿಶ್ವದ ಅತ್ಯಂತ ಹಿರಿಯ ನವಜೋಡಿ ಎಂದು ಖ್ಯಾತಿಯನ್ನು ಪಡೆದಿದೆ. 100 ವರ್ಷದ ವೃದ್ಧ, 102 ವರ್ಷದ ವೃದ್ಧೆಯನ್ನು ಮದುವೆಯಾಗಿ ಹೊಸ ರೆಕಾರ್ಡ್​ ಸೆಟ್ ಮಾಡಿದ್ದಾರೆ. ಬರ್ನಿ ಲಿಟ್​ಮನ್​ಗೆ 100 ವರ್ಷ, ಮಾರ್ಜೊರಿ ಫಿಟರ್​​ಮನ್​ಗೆ 102 ವರ್ಷ ಈ ಇಬ್ಬರು  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಇಬ್ಬರ ಜೋಡಿಯ ವಯಸ್ಸನ್ನು ಒಟ್ಟು ತಾಳೆ ಹಾಕಿ ನೋಡಿದರೆ. ಈ ಜೋಡಿ 202 ವರ್​ಷ 271 ದಿನಗಳದ್ದು. ಡಿಸೆಂಬರ್​ 3 ರಂದು ಗಿನ್ನಿಸ್ ರೆಕಾರ್ಡ್​ನಲ್ಲಿ ದಾಖಲಾಗಿದೆ.

ತಮ್ಮ ಶತಾಬ್ದಿಯನ್ನು ಆಚರಿಸುತ್ತಿರುವ ಈ ಜೋಡಿಯ ಲವ್ ಸ್ಟೋರಿ ಒಂಬತ್ತು ವರ್ಷಗಳ ಹಿಂದೆಯೇ ಶುರುವಾಗಿದೆ. ಫಿಲಿಡೆಲ್ಫಿಯಾದ ಹಿರಿಯ ನಾಗರಿಕರಿಗಾಗಿ ನೀಡಲಾದ ವಸತಿಯಲ್ಲಿ ಇವರು ವಾಸಿಸುತ್ತಿದ್ದರು. ಅಲ್ಲಿ ಆಗಾಗ ಇವರ ಫ್ಲೋರ್​ನಲ್ಲಿ ಪಾರ್ಟಿಗಳು ನಡೆಯುತ್ತಿದ್ದವು. ಆಗ ಪರಿಚಯವಾದ ಇವರ ನಡುವಿನ ನಂಟು ಪ್ರೇಮಕ್ಕೆ ತಿರುಗಿತು. ಈ ಇಬ್ಬರ ಪ್ರೇಮ ಕಹಾನಿ ಮೇ 19ರಂದು ದಾಂಪತ್ಯ ಜೀವನಕ್ಕೆ ಕಾಲಿಡುವಲ್ಲಿಗೆ ಬಂದು ತಲುಪಿದೆ

ಇದನ್ನೂ ಓದಿ:ವಿಶ್ವದಲ್ಲೇ ಅತ್ಯಂತ ದುಬಾರಿ ನೀರಿನ ಬಾಟಲ್ ಕಣ್ರೀ ಇದು.. ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!

ಇಬ್ಬರು, ಬರ್ನಿ ಹಾಗೂ ಮೆರ್ಜೊರಿ ತುಂಬಾ ಶ್ರೀಮಂತ ಬದುಕನ್ನು ಕಂಡವರು.ವೈದವ್ಯ ಬರುವುದಕ್ಕೂ ಮೊದಲು ಇಬ್ಬರು ಈ ಹಿಂದೆ ತಮ್ಮ ಸಂಗಾತಿಗಳೊಂದಿಗೆ 60 ವರ್ಷ ಜೀವನ ನಡೆಸಿದವರು.ಬರ್ನಿ ಈ ಹಿಂದೆ ಇಂಜನೀಯರ್ ಆಗಿ ಕೆಲಸ ಮಾಡಿದವರು ಹಗೂ ಮರ್ಜೊರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರು.

publive-image

ಅವರ ಶತಾಬ್ದಿಗೆ ಸಾಕ್ಷಿಯಾದ ಲಿಟ್​ಮನ್ ಮೊಮ್ಮಗಳು ಸರಾಹ ಸಿಚರ್ಮೆನ್​ ಮಾಧ್ಯಮಗಳ ಮುಂದೆ ಮಾತನಾಡುತ್ತಾ. ಕೇವಲ ದುಃಖ ಹಾಗೂ ಭಯ ತುಂಬಿರುವ ಈ ಜಗತ್ತಲ್ಲಿ ಏನಾದರೂ ಒಂದು ಖುಷಿಯ ಸಂಗತಿ ನಡೆದಲ್ಲಿ ಅದು ನಿಜಕ್ಕೂ ವಿಶೇಷ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿರುವ ನನ್ನ 100 ವರ್ಷ ಹರೆಯದ ನನ್ನಜ್ಜ102 ವರ್ಷದ ತನ್ನ ಗರ್ಲ್​ಫ್ರೆಂಡ್​ನ್ನು ಮದುವೆಯಾಗಿದ್ದಾರೆ. ಅವರಿಬ್ಬರು ಈ ಹಿಂದೆ ತಮ್ಮ ತಮ್ಮ ಸಂಗಾತಿಯೊಂದಿಗೆ 60 ವರ್ಷದ ಬದುಕನ್ನ ಸಾಗಿಸಿದ್ದಾರೆ. ಈಗ ಈ ಜೋಡಿ ಮತ್ತೆ ತಮ್ಮ 100ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment