ಪತ್ನಿಯಿಂದ ಮಾನಸಿಕ ಕಿರುಕುಳ.. ವಿಡಿಯೋ ಮಾಡಿದ ಪತಿ ಕೊನೆಗೆ ಮಾಡಿಕೊಂಡಿದ್ದೇನು? ಬೆಚ್ಚಿ ಬೀಳಿಸುವ ಸ್ಟೋರಿ!

author-image
Gopal Kulkarni
Updated On
ಪತ್ನಿಯಿಂದ ಮಾನಸಿಕ ಕಿರುಕುಳ.. ವಿಡಿಯೋ ಮಾಡಿದ ಪತಿ ಕೊನೆಗೆ ಮಾಡಿಕೊಂಡಿದ್ದೇನು? ಬೆಚ್ಚಿ ಬೀಳಿಸುವ ಸ್ಟೋರಿ!
Advertisment
  • ಪತ್ನಿಯ ಮಾನಸಿಕ ಕಿರುಕುಳ ತಾಳಲಾರದೇ ಜೀವ ಕಳೆದುಕೊಂಡ ಪತಿ
  • ರೈಲ್ವೆ ಟ್ರ್ಯಾಕ್ ಮೇಲೆ ಜಿಗಿಯುವ ಮುನ್ನ ವಿಡಿಯೋ ಮಾಡಿದ ನೊಂದ ಪತಿ
  • ಆತ್ಮಹತ್ಯೆಗೆ ಮುನ್ನ ಮಾಡಿದ ವಿಡಿಯೋ ವೈರಲ್​, ನ್ಯಾಯ ನೀಡುವಂತೆ ಅಗ್ರಹ

ಇತ್ತೀಚೆಗೆ ಪತ್ನಿಯರ ಕಾಟದಿಂದ ಬೇಸತ್ತು ಜೀವ ಕಳೆದುಕೊಳ್ಳುತ್ತಿರುವ ಪತಿಯರ ಸುದ್ದಿಗಳು ಜಾಸ್ತಿ ಅಗುತ್ತಿವೆ. ಅದರಲ್ಲೂ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್​ ಪ್ರಕರಣವಂತೂ ದೊಡ್ಡ ಸುದ್ದಿ ಮಾಡಿತ್ತು. ವರದಕ್ಷಿಣೆ ಕಿರುಕುಳದ ವಿರುದ್ಧದ ಕಾನೂನು ಯಾವ ಮಟ್ಟಿಗೆ ಕೆಲವು ಮಹಿಳೆಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅದು ನಿದರ್ಶನವಾಗಿತ್ತು. ಈಗ ಅಂತಹದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ವ್ಯಕ್ತಿಯೊಬ್ಬ ರೈಲ್ವೆ ಟ್ರ್ಯಾಕ್​ನಲ್ಲಿ ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್​ನಲ್ಲಿ ಜಿಗಿದು ಜೀವ ಕಳೆದುಕೊಂಡಿದ್ದಾನೆ. ಹೀಗೆ ರೈಲ್ವೆ ಟ್ರ್ಯಾಕ್​ ಮೇಲೆ ಜಿಗಿಯುವುದಕ್ಕಿಂತ ಮುಂಚೆ ಒಂದು ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ತನ್ನ ಪತ್ನಿ ನೀಡುತ್ತಿರುವ ಮಾನಸಿಕ ಕಿರುಕುಳ ತಾಳದೇ ನಾನು ನನ್ನ ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ಹೀಗೆ ವಿಡಿಯೋ ಮಾಡಿ ಜೀವ ಕಳೆದುಕೊಂಡ ವ್ಯಕ್ತಿಯನ್ನು ಒಡಿಶಾದ ಕುಂಭರ್ಬಸ್ತಾದ ರಾಮಚಂದ್ರ ಬರ್ಜೇನಾ ಎಮದು ಗುರುತಿಸಲಾಗಿದೆ. ತನ್ನ ಪತ್ನಿ ರೂಪಾಲಿ ನನಗೆ ಮಾನಸಿಕ ಹಿಂಸೆ ನೀಡಿದ್ದಾಳೆ ಎಂದು ಅವನು ಆತ್ಮಹತ್ಯೆಗೂ ಮೊದಲು ಮಾಡಿರುವ ವಿಡಿಯೋದ ಆಧಾರದ ಮೇಲೆ ಆತನ ಪತ್ನಿ ರೂಪಾಲಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ರಾಮಚಂದ್ರ ಬರ್ಜೇನ್​, ನಾನು ಕುಂಭರ್ಬಸ್ತಾದ ನಿವಾಸಿ, ನಾನು ನನ್ನ ಪತ್ನಿಯಿಂದ ತುಂಬಾ ಮಾನಸಿಕವಾಗಿ ಹೈರಾಣಾಗಿದ್ದೇನೆ ಹೀಗಾಗಿ ನನ್ನ ಜೀವವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ಸದ್ಯ ರಾಮಚಂದ್ರ ಮಾಡಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


">April 5, 2025

ಪೊಲೀಸರು ಹೇಳುವ ಪ್ರಕಾರ ರಾಮಚಂದ್ರ ಮತ್ತು ರೂಪಾಲಿ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮನೆಯಲ್ಲಿ ನಡೆಯುತ್ತಿರುವ ನಿರಂತರ ಗಲಾಟೆಯಿಂದ ಬೇಸತ್ತ ರಾಮಚಂದ್ರ ತನ್ನ ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಈ ಕಾರಣದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ರಾಮಚಂದ್ರನ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿ ಕೂಡಲೇ ತನಿಖೆಯನ್ನು ಕೈಗೊಂಡಿದ್ದಾರೆ. ಆತನ ಮನೆಯವರು ರಾಮಚಂದ್ರನ ದೇಹವನ್ನು ಗುರುತಿಸಿದ್ದು. ಆತನ ಪತ್ನಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment