Advertisment

60 ಸಾವಿರ ರೂಪಾಯಿಗೆ 9 ದಿನದ ಕಂದಮ್ಮನ್ನು ಮಾರಿದ ನೀಚ; ಬಂದ ಹಣದಲ್ಲಿ ಏನು ಮಾಡಿದ ಗೊತ್ತಾ?

author-image
Gopal Kulkarni
Updated On
60 ಸಾವಿರ ರೂಪಾಯಿಗೆ 9 ದಿನದ ಕಂದಮ್ಮನ್ನು ಮಾರಿದ ನೀಚ; ಬಂದ ಹಣದಲ್ಲಿ ಏನು ಮಾಡಿದ ಗೊತ್ತಾ?
Advertisment
  • 60 ಸಾವಿರ ರೂಪಾಯಿಗೆ ಸ್ವಂತ ಮಗುವನ್ನೇ ಮಾರಿದ ನೀಚ
  • ಮಕ್ಕಳಿಲ್ಲದವರಿಂದ 60 ಸಾವಿರ ಪಡೆದವನು ಮಾಡಿದ್ದೇನು?
  • ಸ್ಥಳೀಯರಲ್ಲಿ ಮೂಡಿದ ಅನುಮಾನ ಕೊನೆಗೆ ಸತ್ಯವಾಗಿದ್ದು ಹೇಗೆ?

ಒಡಿಶಾದ ಬಲ್ಸೋರೆದಲ್ಲಿ ನಡೆದಿರುವ ಒಂದು ಘಟನೆ ಸದ್ಯ ಎಂತವರನ್ನು ವಿಚಲಿತಗೊಳಿಸುವಂತದ್ದಾಗಿದೆ. ವ್ಯಕ್ತಿಯೊಬ್ಬ ತನ್ನದೇ ಕುಡಿಯಾದ 9 ದಿನದ ಕಂದಮ್ಮನನ್ನು 60 ಸಾವಿರ ರೂಪಾಯಿಗೆ ಮಾರಿಕೊಂಡಿದ್ದು ಬೆಳಕಿಗೆ ಬಂದಿದೆ.

Advertisment

ಇತ್ತೀಚೆಗೆ ಶಾಂತಿ ಬೆಹೆರಾ ಎಂಬುವವರು ಪಿಆರ್​ಎಂ ಮೆಡಿಕಲ್ ಕಾಲೇಜ್​ ಬರೀಪಾದದಲ್ಲಿ ಡಿಸೆಂಬರ್ 9 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಈಕೆಯ ಪತಿ ಧರ್ಮು ಬೆಹೆರಾ ವಾಸವಿರುವ ಪೊಡಾಪೊಡಾ ಗ್ರಾಮದವರು ಅವನ ಬದುಕಲ್ಲಿ ಆದ ಬದಲವಾಣೆಗಳನ್ನು ಕಂಡು ಅನುಮಾನಗೊಂಡಿದ್ದಾರೆ ಏಕಾಏಕಿ ಅವನು ಬೈಕ್​ನಲ್ಲಿ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯರ  ಅನುಮಾನವೇ ಕೊನೆಗೂ ನಿಜವಾಗಿದೆ ಕೂಡ.

ಇದನ್ನೂ ಓದಿ:ಊಟ ಬಡಿಸುವುದು ಲೇಟಾಗಿದ್ದಕ್ಕೆ ಸಿಡಿದ ವರ ಮಾಡಿದ್ದೇನು? ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ವಧು?

ಡಿಸೆಂಬರ್​ 22 ರಂದು ಹೆರಿಗೆ ಬಳಿಕ ಶಾಂತಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಇದೇ ವೇಳೆ ಆಕೆಯ ಪತಿ ಧರ್ಮು, ಆಗಷ್ಟೇ ಹುಟ್ಟಿದ ಹಸುಗೂಸನ್ನು ಮಕ್ಕಳಿಲ್ಲದ ಸೈಂಕುಲಾದ ದಂಪತಿಗಳಿಗೆ 60 ಸಾವಿರ ರೂಪಾಯಿಗೆ ಮಾರಿದ್ದಾನೆ. ಇಬ್ಬರು ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಈ ಒಂದು ಡೀಲ್ ಕುದುರಿದೆ ಬಂದ ಹಣದಿಂದಲೇ ಬೈಕ್​ ಕೊಂಡುಕೊಂಡು ಊರೆಲ್ಲಾ ಸುತ್ತಿದ್ದಾನೆ

Advertisment

ಇವನು ಬೈಕ್ ತೆಗೆದುಕೊಂಡು ಏಕಾಏಕಿ ಸುತ್ತಾಡುತ್ತಿರುವುದನ್ನು ಕಂಡು ಅನುಮಾನಗೊಂಡ ಸ್ಥಳೀಯರು, ಈತನ ವಿರುದ್ಧ  ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ತನಿಖೆಯನ್ನು ಕೈಗೆತ್ತಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಸ್ತಾ ಪೊಲೀಸರು ಮಗುವನ್ನು ಖರೀದಿ ಮಾಡಿದವರ ಕೈಯಿಂದ ರಕ್ಷಿಸಿದ್ದಾರೆ. ಜೊತೆಗ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್​ ಕೂಡ ನೀಡಿದ್ದಾರೆ.

ಇದನ್ನೂ ಓದಿ:2025ರಲ್ಲಿ ಸಂಭವಿಸಲಿವೆ ಒಟ್ಟು 4 ಗ್ರಹಣ; ಭಾರತದಲ್ಲಿ ಎಷ್ಟು ಗೋಚರ? ಯಾವಾಗ?

ಮಗುವನ್ನು ಮಾರುವುದಕ್ಕೆ ಆರಂಭದಲ್ಲಿ ಧರ್ಮು ಪತ್ನಿ ಶಾಂತಿ ಒಪ್ಪಿರಲಿಲ್ಲ. ಆದ್ರೆ ಮಗುವನ್ನು ಖರೀದಿದಾರರಷ್ಟು ಚೆನ್ನಾಗಿ ನಮಗೆ ಸಾಕಲು ಸಾಧ್ಯವಿಲ್ಲವೆಂದು ಕೊನೆಗೆ ಒಪ್ಪಿದೆ ಎಂದು ಹೇಳಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ಧಿಯಲ್ಲಿ ಮಗು ಆರೋಗ್ಯವಾಗಿದ್ದು. ತನಿಖೆಯನ್ನು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಮುಂದುವರಿಸಿದ್ದಾರೆ.

Advertisment

ಸದ್ಯ ಘಟನೆಯ ಕುರಿತು ಎಲ್ಲೆಡೆ ಆಕ್ರೋಶ ಹಾಗೂ ಖಂಡನೆ ವ್ಯಕ್ತಿವಾಗುತ್ತಿದ್ದು ಈ ರೀತಿಯಾ ನಿರ್ಧಾರ ತೆಗೆದುಕೊಳ್ಳಲು ಹೇಗೆ ತಂದೆ ತಾಯಿಗೆ ಮನಸ್ಸು ಬಂತು ಅಂತ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment