/newsfirstlive-kannada/media/post_attachments/wp-content/uploads/2024/07/Anil-kumar-2.jpg)
ಕಲಬುರಗಿ: ಇಲ್ಲಿನ ಕಮಲಾಪುರ ತಾಲ್ಲೂಕಿನ ಕುರಿಕೋಟಾ ಸೇತುವೆ ಮೇಲಿಂದ ಯುವಕ ಮತ್ತು ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬೆಣ್ಣೆತೋರಾ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಿಲ ಕುಮಾರ್ (37) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ. ಯುವತಿ ಹೆಸರು ಮತ್ತು ಗುರುತು ತಿಳಿದುಬರಬೇಕಿದೆ.
ಇದನ್ನೂ ಓದಿ: ಹೈಕೋರ್ಟ್​ ಆದೇಶ ಕೊಟ್ಟರೂ ವಿಫಲ! 2018ರಲ್ಲಿ ಜಗನ್ನಾಥನ ರತ್ನ ಭಂಡಾರ ಅಲುಗಾಡಿಸಲು ಸಾಧ್ಯವಾಗಿಲ್ಲ!
ಅನಿಲ ಕುಮಾರ್ ಮೃತದೇಹ ಬೆಣ್ಣೆತೋರಾ ನದಿಯಲ್ಲಿ ಪತ್ತೆಯಾಗಿದೆ. ಈತ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕುಣಿ ಸಂಗಾವಿ ಗ್ರಾಮದ ನಿವಾಸಿಯಾಗಿದ್ದಾನೆ.
/newsfirstlive-kannada/media/post_attachments/wp-content/uploads/2024/07/kalaburagi-4.jpg)
ಇದನ್ನೂ ಓದಿ: ಬರೀ 20 ಸಾವಿರಕ್ಕೆ Iphone 15 ಖರೀದಿಸಿ! ಈ ಆಫರ್​ ಮಿಸ್​ ಮಾಡ್ಬೇಡಿ
ಅನಿಲನ ಜೊತೆ ನದಿಗೆ ಹಾರಿದ ಯುವತಿಗಾಗಿ ಶೋಧ ನಡೆಯುತ್ತಿದೆ. ಸ್ಥಳಕ್ಕೆ ಮಹಾಗಾಂವ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಈಜು ತಜ್ಞರ ಮೂಲಕ ಪೊಲೀಸರು ಯುವತಿ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us