/newsfirstlive-kannada/media/post_attachments/wp-content/uploads/2025/06/gas1.jpg)
ಗಾಳಿ, ನೀರು, ಬೆಂಕಿ ಈ ಮೂರದಿಂದ ಮನುಷ್ಯ ಎಷ್ಟು ದೂರ ಇರುತ್ತಾನೋ ಅಷ್ಟು ಒಳ್ಳೆಯದು. ಅದರಲ್ಲೂ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದರೇ ಎಷ್ಟು ಎಚ್ಚರದಿಂದ ಇದ್ದರು ಕಡಿಮೆನೆ. ಕೆಲವೊಮ್ಮೆ ನಾವು ತೋರುವ ಸಣ್ಣ ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಕುತ್ತು ತರುತ್ತದೆ. ಹೀಗೆ ಸಿಲಿಂಡರ್ ಅನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿದ್ರೆ ಏನಾಗುತ್ತದೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಹಿಳೆ ಹಾಗೂ ವ್ಯಕ್ತಿಯೊಬ್ಬ ಪವಾಡ ಸದೃಶ ಎಂಬಂತೆ ಪಾರಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತಂಕಗೊಂಡಿದ್ದಾರೆ. ಮೊದಲು ಮಹಿಳೆಯೊಬ್ಬಳು ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದಂತೆ ಅದನ್ನು ಅಡುಗೆ ಮನೆಯಿಂದ ಹೊರಗೆ ತಂದಿದ್ದಾಳೆ. ಅನಿಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾಳೆ. ಆದ್ರೆ ಆಕೆಯ ನಿಯಂತ್ರಣಕ್ಕೆ ಸಿಗದಿದ್ದಕ್ಕೆ ಕೊನೆಗೆ ಮಹಿಳೆ ಮನೆಯಿಂದ ಓಡಿ ಹೋಗಿದ್ದಾಳೆ.
They were fortunate that all doors and windows were open, allowing much of the gas to escape outdoors, significantly reducing the explosion's impact.
pic.twitter.com/fFnDIlHk5F— Ghar Ke Kalesh (@gharkekalesh)
They were fortunate that all doors and windows were open, allowing much of the gas to escape outdoors, significantly reducing the explosion's impact.
pic.twitter.com/fFnDIlHk5F— Ghar Ke Kalesh (@gharkekalesh) June 22, 2025
">June 22, 2025
ಇದಾದ ಬಳಿಕ ಒಂದು ಬಾಗಿಲಿನಿಂದ ಮಹಿಳೆ, ಮತ್ತೊಂದು ಬಾಗಿಲಿನಿಂದ ವ್ಯಕ್ತಿ ಒಳಗಡೆ ಬಂದಿದ್ದಾರೆ. ಒಳಗೆ ಬಂದು ಜಸ್ಟ್ 5 ಸೆಕೆಂಡುಗಳಲ್ಲಿ ಅಡುಗೆ ಮನೆಯಿಂದ ಬೆಂಕಿ ದಿಢೀರನೇ ಸ್ಫೋಟಗೊಂಡಿದೆ. ಈ ವೇಳೆಯಲ್ಲಿ ಈ ಇಬ್ಬರೂ ಮನೆಯಿಂದ ಹೊರಗೆ ಓಡಿ ಹೋಗಿದ್ದು, ಪವಾಡ ಸದೃಶ ಎಂಬಂತೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದ್ರೆ, ಈ ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದ್ರೇ ಜೂನ್ 18ರಂದು ಮಧ್ಯಾಹ್ನ 3.17ಕ್ಕೆ ಸಂಭವಿಸಿದೆ. ಈ ಭಯಾನಕ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದೆ ಇರುತ್ತದೆ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದರೆ ಆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯ. ನಿರ್ಲಕ್ಷ್ಯ ವಹಿಸಿದರೆ ಇಂತಹ ಅವಘಡ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೇ ಇರುತ್ತದೆ. ಹೀಗಾಗಿ ದಯಮಾಡಿ ಯಾರೂ ಕೂಡ ನಿರ್ಲಕ್ಷ್ಯ ತೋರಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ