newsfirstkannada.com

ವೃತ್ತಿಯಲ್ಲಿ ಇಂಜಿನಿಯರ್.. ಈತನಿಗಿತ್ತು ಅದೊಂದು ಚಟ.. ಬುರ್ಕಾ ಹಾಕಿ ಲೇಡಿಸ್​ ಟಾಯ್ಲೆಟ್​ಗೆ ಎಂಟ್ರಿಕೊಟ್ಟು ಲಾಕ್ ಆದ..!

Share :

Published August 18, 2023 at 7:46am

    ರೊಬೊಟಿಕ್ಸ್ ಎಂಜಿನಿಯರ್ ಎಸಗಿದ ನೀಚ ಕೃತ್ಯವೇನು?

    ಮಾಲ್​ಗಳಲ್ಲಿ ಮಹಿಳೆಯರ ವಾಶ್​ರೂಮ್​ಗೆ ಹೋಗ್ತಿದ್ದ

    ಆರೋಪಿ ಪೊಲೀಸರಿಗೆ ತಗಲಾಕಿಕೊಂಡಿದ್ದೆ ಇಂಟ್ರೆಸ್ಟಿಂಗ್..!​

ಕೊಚ್ಚಿ: ಬುರ್ಕಾ ಹಾಕಿಕೊಂಡು ಮಹಿಳೆಯರ ವಾಶ್​ರೂಮ್​ಗೆ ಹೋಗಿ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿದ್ದ ರೊಬೊಟಿಕ್ಸ್ ಎಂಜಿನಿಯರಿಂಗ್ ಉದ್ಯೋಗಿಯನ್ನು ಕೇರಳ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಆರೋಪಿ ಅಭಿಮನ್ಯು (23) ಕೃತ್ಯವೆಸಗಿದ ಉದ್ಯೋಗಿ. ಕೊಚ್ಚಿಯ ಪ್ರತಿಷ್ಠಿತ ಮಾಲ್​ಗೆ ಬುರ್ಕಾ ಹಾಕಿಕೊಂಡು ಹೋಗುತ್ತಿದ್ದ ಆರೋಪಿಯು ನೇರ ಮಹಿಳೆಯರ ವಾಶ್​ರೂಮ್​ಗೆ ತೆರಳುತ್ತಿದ್ದ. ಅಲ್ಲಿ ಬಾಗಿಲು ಬಳಿ ಒಂದು ಬಾಕ್ಸ್​ನಲ್ಲಿ ತನ್ನ ಮೊಬೈಲ್​ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದೇ ವೇಳೆ ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್​ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯ ಫೋನ್​ ಮತ್ತು ಬುರ್ಕಾವನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಳಿಕ ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೃತ್ತಿಯಲ್ಲಿ ಇಂಜಿನಿಯರ್.. ಈತನಿಗಿತ್ತು ಅದೊಂದು ಚಟ.. ಬುರ್ಕಾ ಹಾಕಿ ಲೇಡಿಸ್​ ಟಾಯ್ಲೆಟ್​ಗೆ ಎಂಟ್ರಿಕೊಟ್ಟು ಲಾಕ್ ಆದ..!

https://newsfirstlive.com/wp-content/uploads/2023/08/KERALA_MAN.jpg

Load More