newsfirstkannada.com

ಸ್ವಾತಂತ್ರ್ಯೋತ್ಸವ​​ ಕಾರ್ಯಕ್ರಮದಲ್ಲಿ ಪಾಕ್​​ ಪರ ಘೋಷಣೆ; 25 ವರ್ಷದ ಯುವಕ ಅರೆಸ್ಟ್​

Share :

Published August 17, 2023 at 6:18pm

    ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯೋತ್ಸವ​​ ಕಾರ್ಯಕ್ರಮ

    ಕಾರ್ಯಕ್ರಮದ ವೇಳೆ ಪಾಕಿಸ್ತಾನ ಪರ ಘೋಷಣೆ!

    25 ವರ್ಷದ ಯುವಕನನ್ನು ಬಂಧಿಸಿ ಪೊಲೀಸರು

ನಾಸಿಕ್​: ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ 25 ವರ್ಷದ ಯುವಕನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಶಬದ್​ ಶಫಕತ್​​ ಖುರೇಶಿ ಎಂಬ ಕಿಡಿಗೇಡಿ ಬಂಧಿತ ಆರೋಪಿ.

ಏನಿದು ಘಟನೆ?

ಆಗಸ್ಟ್​ 15ನೇ ತಾರೀಕಿನಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ​​ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಸಿಕ್​​ನಿಂದ 60 ಕಿಲೋ ಮೀಟರ್​ ದೂರದ ಚಾಂದ್​ವಾಡ್​​​​ ಟೋಲ್​​ ಪ್ಲಾಜಾ ಎಂಬಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕ ಪಾಕ್​ ಪರ ಘೋಷಣೆ ಕೂಗಿದ್ದ. ಈ ಬಗ್ಗೆ ಟೋಲ್​ ಪ್ಲಾಜಾದ ಮ್ಯಾನೇಜರ್​ ದೂರು ನೀಡಿದ್ದು, ಪೊಲೀಸರು ಆತನನ್ನು ಅರೆಸ್ಟ್​ ಮಾಡಿದ್ದಾರೆ.

ಇನ್ನು, ಬಂಧಿತ ಆರೋಪಿ ವಿರುದ್ಧ ಸೆಡಿಷನ್​​ ಕೇಸ್​ ದಾಖಲಿಸಿ ಎಂದು ಪೊಲೀಸ್​ ಠಾಣೆ ಎದುರೇ ಪ್ರತಿಭಟನೆ ಮಾಡಲಾಗುತ್ತಿದೆ. ಸದ್ಯ ಕೇಸ್​ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಾತಂತ್ರ್ಯೋತ್ಸವ​​ ಕಾರ್ಯಕ್ರಮದಲ್ಲಿ ಪಾಕ್​​ ಪರ ಘೋಷಣೆ; 25 ವರ್ಷದ ಯುವಕ ಅರೆಸ್ಟ್​

https://newsfirstlive.com/wp-content/uploads/2023/08/Pak_Slogan.jpg

Load More