ನಮ್ಮ ಮೆಟ್ರೋದಲ್ಲಿ ಯುವತಿ ಖಾಸಗಿ ಅಂಗ ಫೋಟೋ ತೆಗೆದ ಕಾಮುಕ ಅರೆಸ್ಟ್​​

author-image
Ganesh Nachikethu
Updated On
ನಮ್ಮ ಮೆಟ್ರೋದಲ್ಲಿ ಯುವತಿ ಖಾಸಗಿ ಅಂಗ ಫೋಟೋ ತೆಗೆದ ಕಾಮುಕ ಅರೆಸ್ಟ್​​
Advertisment
  • ನಮ್ಮ ಮೆಟ್ರೋ ಮಹಿಳೆಯರಿಗೆ ಎಷ್ಟು ಸೇಫ್​​? ಅನ್ನೋ ಪ್ರಶ್ನೆ!
  • ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಕಾಮುಕರಿಂದ ನಿತ್ಯ ಕಿರುಕುಳ
  • ಈಗ ಅಂಥದ್ದೇ ಘಟನೆಯೊಂದು ನಮ್ಮ ಮೆಟ್ರೋದಲ್ಲಿ ನಡೆದಿದೆ

ಬೆಂಗಳೂರು: ನಮ್ಮ ಮೆಟ್ರೋ ಮಹಿಳೆಯರಿಗೆ ಎಷ್ಟು ಸೇಫ್​​? ಅನ್ನೋ ಪ್ರಶ್ನೆ ಎಲ್ಲರಲ್ಲೂ ಆಗಾಗ ಮೂಡುತ್ತದೆ. ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಕಾಮುಕರು ಕಿರುಕುಳ ಕೊಡುತ್ತಿರೋ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂಥದ್ದೇ ಘಟನೆಯೊಂದು ನಮ್ಮ ಮೆಟ್ರೋದಲ್ಲಿ ನಡೆದಿದೆ.

ಹೌದು, ನಮ್ಮ ಮೆಟ್ರೋದಲ್ಲಿ ಮಹೇಶ್​ ಎಂಬ ಕಾಮುಕ ಯುವತಿಯರ ಖಾಸಗಿ ಅಂಗಗಳ ಫೋಟೋ ತೆಗೆದು ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಹಲವು ಯುವತಿಯರ ಖಾಸಗಿ ಅಂಗಗಳ ಫೋಟೋ ಮತ್ತು ವಿಡಿಯೋ ಶೂಟ್​ ಮಾಡಿದ್ದಾನೆ.

ಏನಿದು ಘಟನೆ?

ಒಂದು ವಾರದ ಹಿಂದೆ ಡಿಸೆಂಬರ್​ 25ನೇ ತಾರೀಕು ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಮೆಜೆಸ್ಟಿಕ್​​ನಿಂದ ಜೆ.ಪಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಹೇಶ್​ ಎಂಬ ಕಾಮುಕ ಯುವತಿ ಫೋಟೋ, ವಿಡಿಯೋ ತೆಗೆದಿದ್ದಾನೆ. ವಿಷಯ ತಿಳಿದು ಸಿಟ್ಟಿಗೆದ್ದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಇದೇ ವೇಳೆ ಡ್ಯೂಟಿ ಮುಗಿಸಿ ಮನೆ ಕಡೆ ಹೊರಟಿದ್ದ ಮೆಟ್ರೋ ಸಿಬ್ಬಂದಿ ಯುವತಿ ನೆರವಿಗೆ ಧಾವಿಸಿದ್ದಾರೆ.

ಸದ್ಯ ಕಾಮುಕ ಮಹೇಶ್​​ನನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸ್ರು ಆರೋಪಿ ಮೊಬೈಲ್​ ಪರಿಶೀಲಿಸಿದಾಗ ಸಾಕಷ್ಟು ವಿಡಿಯೋಗಳು ಸಿಕ್ಕಿವೆ. ಆರೋಪಿಯನ್ನು ಬಂಧಿಸಿದ್ದಲ್ಲದೇ ನಮ್ಮ ಮೆಟ್ರೋ 5 ಸಾವಿರ ದಂಡ ವಿಧಿಸಿದೆ.

ಇದನ್ನೂ ಓದಿ:ಬಿಸಿಸಿಐನಿಂದ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ರಿಷಬ್​ ಪಂತ್​​ ಔಟ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment