newsfirstkannada.com

ನಮಾಜ್​ ವೇಳೆ ಹನುಮಾನ್​​ ಹಾಡು ಹಾಕಿದ ಆರೋಪ; ಯುವಕನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ!

Share :

Published March 17, 2024 at 11:16pm

    ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್​ ಹಾಡು ಹಾಕಿದ್ದ ಆರೋಪ

    ಹನುಮಾನ್​ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳಿಂದ ಭಾರೀ ಹಲ್ಲೆ

    ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಘಟನೆ!

ಬೆಂಗಳೂರು: ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್​ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಈ ಘಟನೆ ನಡೆದಿದೆ.

ಇನ್ನು, ಮುಖೇಶ್ ಅನ್ನೋರು ತಮ್ಮ ಶಾಪ್‌ನಲ್ಲಿ ಹಾಡು ಹಾಕಿದ್ರಂತೆ. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಯುವಕರ ಗುಂಪು ನಮಾಜ್ ಮಾಡೋಕೆ ತೊಂದರೆ ಆಗ್ತಿದೆ. ಕೂಡಲೇ ಹನುಮಾನ್​ ಹಾಡು ಚೇಂಜ್​ ಮಾಡಿ ಎಂದು ಕೇಳಿದೆ. ಇದಕ್ಕೆ ಮುಖೇಶ್​ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದಿದೆ. ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ 6 ಮಂದಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ರು ಘಟನೆ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮುಖೇಶ್​ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮಾಜ್​ ವೇಳೆ ಹನುಮಾನ್​​ ಹಾಡು ಹಾಕಿದ ಆರೋಪ; ಯುವಕನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ!

https://newsfirstlive.com/wp-content/uploads/2024/03/Crime_News_2.jpg

Load More