ಮಗಳು ಕಡಿಮೆ ಅಂಕ ಗಳಿಸಿದ್ಕೆ ಬಡಿದು ಜೀವ ತೆಗೆದ ಅಪ್ಪ.. ಹೆದರಿ ನೋಡುತ್ತಲೇ ನಿಂತಿದ್ದರು ಅಮ್ಮ, ಮಗ

author-image
Ganesh
Updated On
ಮಗಳು ಕಡಿಮೆ ಅಂಕ ಗಳಿಸಿದ್ಕೆ ಬಡಿದು ಜೀವ ತೆಗೆದ ಅಪ್ಪ.. ಹೆದರಿ ನೋಡುತ್ತಲೇ ನಿಂತಿದ್ದರು ಅಮ್ಮ, ಮಗ
Advertisment
  • ಮಗು ಕಡಿಮೆ ಅಂಕ ಗಳಿಸಿದ್ಲು ಅಂತಾ ಹೀಗಾ ಮಾಡೋದು?
  • ಆರೋಪಿ ತಂದೆಯನ್ನು ಬಂಧಿಸಿದ ಪೊಲೀಸರು..!
  • ತನ್ನ ಪತಿ ವಿರುದ್ಧ ಪತ್ನಿ ನೀಡಿರುವ ದೂರಿನಲ್ಲಿ ಏನೇನಿದೆ..?

ಮಹಾರಾಷ್ಟ್ರದಲ್ಲಿ ಮಗಳು ನೀಟ್ ಮಾಕ್ ಪರೀಕ್ಷೆಯಲ್ಲಿ (National Eligibility cum Entrance Test ) ಕಡಿಮೆ ಅಂಕ ಗಳಿಸಿದಳು ಅನ್ನೋ ಕಾರಣಕ್ಕೆ ಪಾಪಿ ತಂದೆಯೊಬ್ಬ ಹೊಡೆದು ಜೀವ ತೆಗೆದಿದ್ದಾನೆ. ಮಗಳಿಗೆ ಮರಣದಂಡನೆ ಕೊಟ್ಟ ತಂದೆ ಶಾಲೆಯೊಂದರ ಹೆಡ್​ಮಾಸ್ಟರ್​ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲ್ಕರಂಜಿ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಸಾಧನಾ ಭೋಸಲೆ (17) ಅಪ್ಪನ ಹಲ್ಲೆಗೆ ಜೀವಬಿಟ್ಟ ಮಗಳು. ಧೊಂಡಿರಮ್ ಭೋಸಲೆ (45) ಆರೋಪಿ. 12ನೇ ತರಗತಿ ಪಾಸ್ ಆಗಿದ್ದ ಸಾಧನಾ, ನೀಟ್​ ಎಕ್ಸಾಂ ಬರೆದಿದ್ದಳು. ಆದರೆ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಳು. ಇದಕ್ಕೆ ಕೋಪಿಸಿಕೊಂಡು ಮಾಡಬಾರದ ಕೆಲಸ ಮಾಡಿದ್ದಾನೆ. ಇನ್ನು ಈ ಬಾಲಕಿ 10ನೇ ತರಗತಿ ಪರೀಕ್ಷೆಯಲ್ಲಿ 92.60 ಅಂಕ ಗಳಿಸಿದ್ದಳು.

ಇದನ್ನೂ ಓದಿ: ಜಮೀರ್​ ನಿವಾಸದಲ್ಲಿ ಹೈಡ್ರಾಮಾ.. ರೂಪೇಶ್ ರಾಜಣ್ಣನ ವಶಕ್ಕೆ ಪಡೆದ ಪೊಲೀಸರು..!

ಕಡಿಮೆ ಅಂಕ ಗಳಿಸಿದ್ಕೆ ಮಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಗಳ ಮೇಲೆ ಕೋಪಿಸಿಕೊಂಡ ತಂದೆ ತಾಳ್ಮೆ ಕಳೆದುಕೊಂಡಿದ್ದಾನೆ. ಗ್ರ್ಯಾಂಡರ್​​ನ ಮರದ ಹಿಡಿಕೆ ಹಿಡಿದು ಮಗಳ ತಲೆಗೆ ಬಾರಿಸಿದ್ದಾನೆ. ಹೊಡೆಯುವ ವೇಳೆ ಹೆಂಡತಿ ಮತ್ತು ಮಗ ಕೂಡ ಅಲ್ಲೇ ಇದ್ದರು ಎಂದು ವರದಿಯಾಗಿದೆ.

ಅಪ್ಪನ ಹಲ್ಲೆಗೆ ಗಂಭೀರವಾದ ಮಗಳು ನೆಲಕ್ಕೆ ಕುಸಿದು ಬಿದ್ದಿದ್ದಳು. ನಂತರ ಆಕೆಯನ್ನು ಸಾಂಗ್ಲಿಯದ ಉಶ್ಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ದುರಾದೃಷ್ಟವಶಾತ್ ಆಕೆ ಉಸಿರು ನಿಲ್ಲಿಸಿದ್ದಾಳೆ. ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ವಿನಯ್ ಬಹೀರ್ ನೀಡಿದ ಮಾಹಿತಿ ಪ್ರಕಾರ, ಬಾಲಕಿಯನ್ನು ಸಾಂಗ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಜೀವ ಕಳೆದುಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಆಕೆಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎಂದಿದ್ದಾರೆ.

ಈ ಸಂಬಂಧ ವಿದ್ಯಾರ್ಥಿನಿಯ ತಾಯಿ ಜೂನ್ 22 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪರೀಕ್ಷೆಯಲ್ಲಿ ಮಗಳು ಕಡಿಮೆ ಅಂಕ ಪಡೆದಿದ್ದಕ್ಕೆ ಪತಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ನಾನು ಆಸ್ಪತ್ರೆಗೆ ಕರೆದುಕೊಂಡು ಬಂದೆ ಅಂತಾ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಆರೋಪಿ ತಂದೆಯನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಮುತ್ತಯ್ಯ ಮುರುಳೀಧರನ್ ಕಂಪನಿ.. 39 ಎಕರೆ ಜಾಗದಲ್ಲಿ ಬೃಹತ್ ಕೈಗಾರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment