ಜೋರಾಗಿ ಕೆಮ್ಮಿದ್ದಕ್ಕೆ ಮೂಳೆಯೇ ಮುರಿದೋಯ್ತು! ಇದು ನಂಬಲು ಅಸಾಧ್ಯವಾದ ಸ್ಟೋರಿ!

author-image
AS Harshith
Updated On
ಜೋರಾಗಿ ಕೆಮ್ಮಿದ್ದಕ್ಕೆ ಮೂಳೆಯೇ ಮುರಿದೋಯ್ತು! ಇದು ನಂಬಲು ಅಸಾಧ್ಯವಾದ ಸ್ಟೋರಿ!
Advertisment
  • ನಿಮಗೆ ಕೆಮ್ಮು ಇದೆಯಾ? ಹಾಗಿದ್ರೆ ಈ ಸ್ಟೋರಿ ಓದಿ
  • ಮೂಳೆ ಮುರಿದು ಹೋಗಲು ಕಾರಣವಾಯ್ತು ಕೆಮ್ಮು!
  • ಹೀಗೂ ಆಗಲು ಸಾಧ್ಯನಾ? ಇದೆಂಥಾ ಸ್ಟೋರಿ ಗುರೂ

ಗಂಟಲಿನಲ್ಲಿ ಕಿರಿಕಿರಿಯಾದರೆ, ಖಾರ ಸೇವಿಸಿದರೆ, ಒಣಗಂಟಲಾದರೆ ಕೆಮ್ಮು ಬರುವುದು ಸಹಜ. ಅಷ್ಟೇ ಏಕೆ ಅನಾರೋಗ್ಯ ಕಾಡಿದರೂ ಕೆಮ್ಮು ಬರುತ್ತದೆ. ಸರಿಯಾದ ಔಷಧಿ ಸೇವಿಸುವ ಮೂಲಕ ಗಂಟಲು ಸೋಂಕನ್ನು ಕಡಿಮೆ ಮಾಡಬಹುದು. ಆದರೆ ನಿರ್ಲಕ್ಷ ವಹಿಸಿದರೆ ಅಪಾಯ ಕಂಡಿತ. ಆದರೆ ಕೆಮ್ಮಿನಿಂದ ದೇಹದ ಮೂಳೆಗಳು ಮರಿಯಬಹುದೇ? ಇಂತಹದೊಂದು ಪ್ರಕರಣವೀಗ ಎಲ್ಲರನ್ನು ಅಚ್ಚರಿಗೆ ದೂಡಿದೆ.

ಚೀನಾದ ಫುಜಿಯಾನ್​ ಪ್ರಾಂತ್ಯದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷ ವಯಸ್ಸಿನ ವ್ಯಕ್ತಿ ಆಘಾತಕಾರಿ ಪ್ರಕರಣವನ್ನು ಹಂಚಿಕೊಂಡಿದ್ದಾರೆ. ಕೆಮ್ಮಿನಿಂದಾಗಿ ಎಲುಬು ಮುರಿದುಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಘಟನೆಯನ್ನು ತಿಳಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ.. ಪತಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹೆಂಡತಿ

ವ್ಯಕ್ತಿ ಕೆಮ್ಮಿದಾಗ ದೇಹದ ತೊಡೆಯ ಭಾಗದ ಮೂಳೆ ಮುರಿದಿದೆ. ಬಳಿಕ ಆತನಿಗೆ ನಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕೊನೆಗೆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡುತ್ತಾನೆ. ಆದರೆ ವೈದ್ಯರು ವ್ಯಕ್ತಿಯ ಎಕ್ಸ್​ರೇ ತೆಗೆದಿದ್ದು, ಅದರಲ್ಲಿ ತೊಡೆ ಮುರಿದಿರುವುದು ಗೊತ್ತಾಗಿದೆ. ಆದರೆ ಹೊರಭಾಗದಲ್ಲಿ ಯಾವುದೇ ಗಾಯಗಳಾಗದೆ ಮೂಳೆ ಮುರಿದಿರುವುದನ್ನು ಕಂಡು ಅಚ್ಚರಿಗೊಂಡ ವೈದ್ಯರು ಆತನನ್ನು ವಿಚಾರಿಸಿದ್ದಾರೆ.

ಇದು ಸಾಧ್ಯವೇ?

ವೈದ್ಯರು ವ್ಯಕ್ತಿಯ ಆರೋಗ್ಯ, ಜೀವನ ಶೈಲಿಯನ್ನು ತಿಳಿದುಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯ ಮೂಳೆಯ ಸಾಂದ್ರತೆ 80 ವರ್ಷದ ವ್ಯಕ್ತಿಯಂತೆ ಕಂಡುಬಂದಿದೆ. ಕಳಪೆ  ಆಹಾರ ಸೇವನೆ, ಜಂಕ್​ ಫುಡ್​ಗಳ ಸೇವನೆ, ವ್ಯಾಯಾಮದ ಕೊರತೆ ಇವು ಮೂಳೆಗಳನ್ನು ದುರ್ಬಲಗೊಳಿಸಿವೆ. ಇದೇ ಕಾರಣಕ್ಕೆ ವ್ಯಕ್ತಿಯ ಮೂಳೆ ಮುರಿದಿದೆ ಎಂದು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment