newsfirstkannada.com

ಓ ನಲ್ಲ, ನೀನಲ್ಲ.. ನಂಬಿಸಿ ಮೋಸ ಮಾಡಿದವನ ಮನೆ ಮುಂದೆ ಧರಣಿ ಕುಳಿತ ಮಹಿಳೆ

Share :

Published March 20, 2024 at 1:13pm

Update March 20, 2024 at 1:26pm

    ಮಹಿಳೆಯಿಂದ 10 ಲಕ್ಷ ಹಣ, ಒಡವೆಗಳನ್ನು ಪಡೆದು ವಂಚನೆ

    ಕಳೆದ ಹಲವು ವರ್ಷಗಳಿಂದ ಗಂಡ ಹೆಂಡತಿಯಂತೆ ಇದ್ದ ಇಬ್ಬರು

    ಮನೆ ಕಟ್ಟಿಕೊಡುವುದಾಗಿ ಹಣ ಪಡೆದು ಬೀದಿಗೆ ತಳ್ಳಿದ ಆರೋಪ

ಬೆಂಗಳೂರು: ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷ, ಲಕ್ಷ ಹಣ ಪಡೆದು ವಂಚನೆ ಮಾಡಿರೋ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಪುರುಷೋತ್ತಮ್ ಎಂಬಾತ ಮಹಿಳೆಗೆ ವಂಚನೆ ಮಾಡಿರೋ ವ್ಯಕ್ತಿ. ಕಳೆದ ಹಲವು ವರ್ಷಗಳಿಂದ ಈ ಇಬ್ಬರು ಗಂಡ ಹೆಂಡತಿಯಂತೆ ಒಂದೇ ಮನೆಯಲ್ಲಿದ್ದ ವಾಸವಾಗಿದ್ದರು. ಇನ್ನು, ತವರು ಮನೆಯಿಂದ ಬಂದಿದ್ದ 10 ಲಕ್ಷ ಹಣ ಹಾಗೂ ಒಡವೆಗಳನ್ನ ಪಡೆದು ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನು ಓದಿ: ₹75 ಪೆಟ್ರೋಲ್‌ ₹65 ಡೀಸೆಲ್, NEET ಪರೀಕ್ಷೆ ಬ್ಯಾನ್.. ಮತದಾರರಿಗೆ ಡಿಎಂಕೆ ಭರ್ಜರಿ ಆಫರ್‌!

ಇದೀಗ ಮಹಿಳೆ ಮತ್ತು ಕುಟುಂಬಸ್ಥರು ವಂಚನೆ ಮಾಡಿದವನ ಮನೆ ಮುಂದೆ ಧರಣಿ ಮಾಡುತ್ತಿದ್ದಾರೆ. ನಂಬಿಸಿ ಎಲ್ಲಾ ರೀತಿಯಲ್ಲಿ ಬಳಸಿಕೊಂಡು, ಮನೆ ಕಟ್ಟಿಕೊಡುವುದಾಗಿ ಹೇಳಿ ಇದೀಗ ಬೀದಿಗೆ ತಳ್ಳಿದ್ದಾ‌ನೆ ಅಂತಾ ಮಹಿಳೆ ಆರೋಪಿಸಿದ್ದಾರೆ. ತಮಟೆ ಹೊಡೆಯುವ ಮೂಲಕ ಮಹಿಳೆ ಕುಟುಂಬಸ್ಥರಿಂದ ಮನೆ ಮುಂದೆ ಧರಣಿ ನಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ವಂಚನೆ ಮಾಡಿದ ಪುರುಷೊತ್ತಮನ ವಿರುದ್ಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓ ನಲ್ಲ, ನೀನಲ್ಲ.. ನಂಬಿಸಿ ಮೋಸ ಮಾಡಿದವನ ಮನೆ ಮುಂದೆ ಧರಣಿ ಕುಳಿತ ಮಹಿಳೆ

https://newsfirstlive.com/wp-content/uploads/2024/03/fake-love.jpg

Load More