Advertisment

ಲಿವ್​-ಇನ್-ರಿಲೇಷನ್​ಶಿಪ್‌.. ಕೋರ್ಟ್‌ ಮೆಟ್ಟಿಲೇರಿದ ಮಹಿಳೆಗೆ ಮುಖಭಂಗ, ಪುರುಷ ಸೇಫ್‌; ಇದು ಇಂಟ್ರೆಸ್ಟಿಂಗ್ ಪ್ರಕರಣ!

author-image
Gopal Kulkarni
Updated On
ಲಿವ್​-ಇನ್-ರಿಲೇಷನ್​ಶಿಪ್‌.. ಕೋರ್ಟ್‌ ಮೆಟ್ಟಿಲೇರಿದ ಮಹಿಳೆಗೆ ಮುಖಭಂಗ, ಪುರುಷ ಸೇಫ್‌; ಇದು ಇಂಟ್ರೆಸ್ಟಿಂಗ್ ಪ್ರಕರಣ!
Advertisment
  • ಕೋರ್ಟ್​ ಮೆಟ್ಟಿಲೇರಿದ 1 ವರ್ಷ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ
  • ರಿಲೇಷನ್​​ಶಿಪ್ ಆರಂಭಕ್ಕೂ ಮುನ್ನ ಆಗಿತ್ತು ಇಬ್ಬರ ನಡುವೆ ಒಂದು ಒಪ್ಪಂದ!
  • ಒತ್ತಾಯದಿಂದ ದೈಹಿಕ ಸಂಪರ್ಕ ಬೆಳೆಸಿದ ಆರೋಪ ಮಾಡಿದ ಮೇಲೆ ಏನಾಯ್ತು?

ಮುಂಬೈ: ಲೀವ್ ಇನ್ ರಿಲೇಷನ್‌ಶಿಪ್, ಲಿವಿಂಗ್​ ಟುಗೆದರ್ ಬದಲಾದ ಕಾಲಘಟ್ಟದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಮಾತುಗಳು. ಏಳು ಹೆಜ್ಜೆಯಿಟ್ಟು ಬಾಳಿನ ಏಳು ಬೀಳುಗಳಲ್ಲಿ ಒಂದಾಗಿ ಬಾಳುವ ಆಸೆ ಈಗಿನ ತಲೆಮಾರಿಗೆ ಬೇಕಾಗಿಲ್ಲ. ಪ್ರೇಮ ಪ್ರೀತಿ ಅನ್ನೋದು ಈಗ ತುಂಬಾ ಸಂಕುಚಿತ ವ್ಯಾಪ್ತಿಯಲ್ಲಿ ಬಂದು ನಿಂತಿವೆ.

Advertisment

ಬದುಕಿನಲ್ಲಿ ಸಂಗಾತಿ ದೀರ್ಘಕಾಲದವರೆಗೆ ಜೊತೆಯಾಗಿ ನಡೆಯುವುದು ಹೆಚ್ಚು ಕಡಿಮೆ ಯಾರಿಗೂ ಬೇಡವಾಗಿದೆ. ಹೀಗಾಗಿ ಈ ರೀತಿಯ ಸಂಬಂಧಗಳು ಚಾಲ್ತಿಯಲ್ಲಿವೆ. ಈಗ ಇದೇ ಲೀವ್​ ಇನ್ ರಿಲೇಷನ್​ಶಿಪ್​ನಿಂದಾಗಿ ಮುಂಬೈನ 46 ವರ್ಷದ ವ್ಯಕ್ತಿಯೊಬ್ಬ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಾನೆ. ಅವನನ್ನು ಕಾಪಾಡಿದ್ದು ಈ ಒಂದೇ ಒಂದು ಒಪ್ಪಂದದ ಪತ್ರ.

publive-image

ಇತ್ತೀಚೆಗೆ ಮುಂಬೈ ಕೋರ್ಟ್​ನಲ್ಲಿ 29 ವರ್ಷದ ಮಹಿಳೆ 46 ವರ್ಷದ ಪುರುಷನ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದ್ದಳು. ಈ ವ್ಯಕ್ತಿ ನನ್ನನ್ನು ಮದುವೆಯಾಗುವುದಾಗಿ ಅನೇಕ ಬಾರಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ್ದಳು. ಆಗ 46 ವರ್ಷದ ವ್ಯಕ್ತಿಯನ್ನು ಕಾಪಾಡಿದ್ದು ಅವನು ಈ ಸಂಬಂಧ ಬೆಳೆಸುವ ಮೊದಲೇ ಮಾಡಿಕೊಂಡಿದ್ದ ಒಂದು ಅಗ್ರೀಮೆಂಟ್​.

ಈ ಜೋಡಿ ಜೊತೆಯಾಗಿರಲು ಆರಂಭಿಸಿದ್ದೆ 2023ರ ಆಗಸ್ಟ್ 1 ರಿಂದ. ಇಬ್ಬರ ನಡುವೆ ಒಂದು ವರ್ಷದವರೆಗೂ ಕೂಡಿ ಬಾಳುವ ಒಪ್ಪಂದವಾಗಿತ್ತು. ಅದಕ್ಕೆ ಇಬ್ಬರೂ ಕೂಡ ಒಪ್ಪಿಗೆ ನೀಡಿ ಸಹಿ ಮಾಡಿ ಅದನ್ನು ಬಾಂಡ್​ ರೂಪಕ್ಕೆ ಇಳಿಸಿದ್ದರು. ಒಂದು ವರ್ಷವಾದ ಬಳಿಕ ಮಹಿಳೆ ಪುರುಷನ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತಾಳೆ. ಮದುವೆಯಾಗುವುದಾಗಿ ನಂಬಿಸಿ ಒತ್ತಾಯ ಪೂರ್ವಕವಾಗಿ ನನ್ನನ್ನು ಈತ ದೈಹಿಕವಾಗಿ ನನ್ನ ಬಳಸಿಕೊಂಡಿದ್ದಾನೆ ಎಂದು ದೂರನ್ನಿಟ್ಟಿದ್ದಾಳೆ.

Advertisment

publive-image

ಇದನ್ನೂ ಓದಿ:200 ವರ್ಷಗಳ ದಾಖಲೆಯ ಮಳೆ.. 300 ಹೊಸ ಬ್ರಾಂಡ್‌ ಕಾರುಗಳು ಮುಳುಗಡೆ; ವಿಡಿಯೋ ನೋಡಿ!

ಈ ಕೇಸ್‌ ವಿಚಾರಣೆ ಮಾಡಿದ ಮುಂಬೈ ಕೋರ್ಟ್​ ವಾದ ಪ್ರತಿವಾದವನ್ನು ಆಲಿಸಿದೆ. ಈ ವೇಳೆ 46 ವರ್ಷದ ಆ ಪುರುಷ ಅವರಿಬ್ಬರ ನಡುವೆ ನಡೆದ ಒಪ್ಪಂದ ಪತ್ರವನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ. ಅನೇಕ ಅಂಶಗಳಿಗೆ ಇಬ್ಬರೂ ಒಪ್ಪಿಗೆ ನೀಡಿ ಸಹಿ ಮಾಡಿದ್ದು ಕಂಡು ಬಂದಿದೆ. ಯುವತಿ ಅದು ನನ್ನ ಸಹಿಯಲ್ಲ ಎಂದು ವಾದ ಮಾಡಿದ್ದಾಳೆ. ಆದ್ರೆ ನ್ಯಾಯಾಲಯ ಕೂಲಂಕಷವಾಗಿ ನೋಡಿ ಇಬ್ಬರ ನಡುವೆ ಒಪ್ಪಂದ ಆಗಿರುವುದು ನಿಜ ಎಂದು ಹೇಳಿ 46 ವರ್ಷದ ವ್ಯಕ್ತಿಗೆ ಜಾಮೀನು ನೀಡಿದೆ

ಇದನ್ನೂ ಓದಿ:ಅರಮನೆಯ ಗೋಡೆಯೂ ಚಿನ್ನ, ವಿಮಾನವೂ ಚಿನ್ನ.. ಮೋದಿ ಭೇಟಿಯಾಗ್ತಿರುವ ಸುಲ್ತಾನನ ಜೀವನ ಅಬ್ಬಬ್ಬಾ! Photos

Advertisment

ಲಿವ್ ಇನ್ ರಿಲೇಷನ್​ಶಿಪ್ ಅಗ್ರಿಮೆಂಟ್ ಏನಾಗಿತ್ತು? 
ಈ ಒಪ್ಪಂದದ ಪತ್ರದಲ್ಲಿ ಅನೇಕ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಆಗಸ್ಟ್ 1, 2023 ರಿಂದ ಜೂನ್ 30 2024ರವರೆಗೆ ನಾವಿಬ್ಬರು ಜೊತೆಯಾಗಿ ಇರುವುದು. ಯಾವುದೇ ಸಂದರ್ಭದಲ್ಲಿಯೂ ಇಬ್ಬರೂ ಒಬ್ಬರ ಮೇಲೆ ಒಬ್ಬರು ಒತ್ತಾಯದಿಂದ ದೈಹಿಕ ಸಂಪರ್ಕ ಮಾಡಿದ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಿಸುವಂತಿಲ್ಲ. ಒಂದು ವೇಳೆ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ನಡವಳಿಕೆ ಸರಿಯಿಲ್ಲ ಅನಿಸಿದಲ್ಲಿ ಒಂದು ತಿಂಗಳ ಮುಂಚೆ ನೋಟಿಸ್ ನೀಡಿ ದೂರವಾಗುವುದು ಒಪ್ಪಂದದಲ್ಲಿ ಇತ್ತು.

ಮಹಿಳೆಯ ಯಾವುದೇ ಸಂಬಂಧಿಕರು ತಾವಿರುವ ಮನೆಗೆ ಭೇಟಿ ಮಾಡಕೂಡದು ಹೀಗೆ ಹತ್ತು ಹಲವು ಷರತ್ತುಗಳುಳ್ಳ ಅಗ್ರಿಮೆಂಟ್​ಗೆ ಇಬ್ಬರೂ ಕೂಡ ಸಹಿ ಹಾಕಿದ್ದರು. ಆದ್ರೆ ಕೊನೆಗೆ ಮಹಿಳೆ ತನ್ನೊಂದಿಗಿದ್ದ 46 ವರ್ಷದ ಯುವಕನ ಮೇಲೆ ಕೋರ್ಟ್ ಮೆಟ್ಟಿಲೇರಿ ಮುಖಭಂಗ ಅನುಭವಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment