/newsfirstlive-kannada/media/post_attachments/wp-content/uploads/2024/12/LESBIAN-1.jpg)
ಕನಸುಗಳ ಮೂಟೆ ಹೊತ್ತು ಮದುವೆಯಾದ ಪತಿರಾಯನಿಗೆ ತನ್ನ ಪತ್ನಿಯ ಅಸಲಿ ಮುಖವಾಡ ಗೊತ್ತಿರಲಿಲ್ಲ. ಮದುವೆಯಾಗಿ ಎರಡು ವರ್ಷ ಕಳೆದಿತ್ತು. ಗಂಡ-ಹೆಂಡತಿ ಮಧ್ಯೆ ಎಲ್ಲವೂ ಚೆನ್ನಾಗಿಯೇ ಇತ್ತು. ಮಕ್ಕಳ ಕನಸು ಕಾಣ್ತಿದ್ದ ಗಂಡ, ಕೊನೆಗೂ ಮಗು ಮಾಡಿಕೊಳ್ಳಲು ಪತ್ನಿಯನ್ನು ಒಪ್ಪಿಸಿದ್ದ. ಅಂತೆಯೇ ಆಕೆ ಗರ್ಭ ಧರಿಸಿ 7 ತಿಂಗಳ ಆಗಿತ್ತು.. ಮುಂದೆ ನಡೆದಿರೋದು ಊಹೆಗೂ ನಿಲುಕದ್ದು!
ಹೌದು, ಏಳು ತಿಂಗಳ ಗರ್ಭಿಣಿ ಆಗಿರುವ ಪತ್ನಿ ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ ಅಪರೂಪದ ಪ್ರಕರಣ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ. ನನ್ನ ಪತ್ನಿ ತನ್ನ ಲೆಸ್ಬಿಯನ್ ಸಂಗಾತಿಯೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಅಕ್ಟೋಬರ್‌ನಲ್ಲಿ ಮನೆಯಿಂದ ಹೊರಟು ಹೋದವಳು ಇನ್ನೂ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ. ಚಂದಖೇಡಾ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾನೆ.
ಇದನ್ನೂ ಓದಿ:17 ವರ್ಷದಲ್ಲಿ ಲೆಕ್ಕ ಇಲ್ಲದಷ್ಟು ಕೊಹ್ಲಿ ದಾಖಲೆ.. ಕಳಚುತ್ತಿದೆಯಾ ವಿರಾಟ್ ಪಟ್ಟ?
ಪೊಲೀಸರ ಪ್ರಕಾರ.. 2022ರಲ್ಲಿ ಈ ಜೋಡಿ ಮದುವೆ ಆಗಿದೆ. ಪತಿಗೆ ಯಾವುದೇ ವೈವಾಹಿಕ ಸಮಸ್ಯೆ ಇರಲಿಲ್ಲ. ಮದುವೆಗೂ ಮುನ್ನವೇ.. ಆಕೆ (ಹೆಂಡತಿ) ಲೆಸ್ಬಿಯನ್ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದಳು. ಇದು ಆಕೆಯ ಮನೆಯವರಿಗೆ ಗೊತ್ತಿತ್ತು. ಹೀಗಿದ್ದೂ ಕುಟುಂಬಸ್ಥರು ಆಕೆಗೆ ಮದುವೆ ಮಾಡಿಸಿದ್ದರು. ಇದೀಗ ಅವಳು ಏಳು ತಿಂಗಳ ಗರ್ಭಿಣಿ. ಅಕ್ಟೋಬರ್‌ನಲ್ಲಿ ಲೆಸ್ಬಿಯನ್ ಪ್ರೇಮಿಯನ್ನು ಭೇಟಿಯಾಗಿದ್ದಾಳೆ. ಕೊನೆಗೆ ವಾಪಸ್ ಬರಲಿಲ್ಲ ಎಂಬ ಮಾಹಿತಿ ಇದೆ ಎಂದಿದ್ದಾರೆ.
ಆಕೆ ಎಲ್ಲಿದ್ದಾಳೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಡಿಸೆಂಬರ್ 24ರೊಳಗೆ ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ:BBK11: ಭವ್ಯಾ ಗೌಡಗೇ ಒಲಿದ ಅದೃಷ್ಟ; ಬಿಗ್ಬಾಸ್ ಮನೆಯಲ್ಲಿ ಇವರದ್ದೇ ದರ್ಬಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ