ಡಾಬಾ ಬಂತು ಊಟ ಮಾಡು ಎಂದಾಗ ಎದ್ದಿದ್ದವ ಇನ್ನಿಲ್ಲ; ಸಾವು ಬದುಕಿನ ಹೋರಾಟದಲ್ಲಿ ವಿಧಿಯ ಕೈವಾಡ

author-image
Gopal Kulkarni
Updated On
ಹಾವೇರಿಯಲ್ಲಿ ಸತ್ತಿದ್ದಾನೆ ಎಂದು ಊರಿಗೆ ತೆಗೆದುಕೊಂಡು ಹೋಗುವಾಗ ಪುನರ್ಜನ್ಮ; ಇದು ಬಂಕಾಪುರದ ಪವಾಡ!
Advertisment
  • ಡಾಬಾ ಬಂತು ಊಟ ಮಾಡ್ತೀಯಾ ಎಂದಾಗ ಎದ್ದು ಕುಳಿತ ಮೃತವ್ಯಕ್ತಿ
  • ಅಂದು ಸಾವಿನಿಂದ ಗೆದ್ದು ಬಂದವನು ಇಂದು ಮತ್ತೆ ಸಾವಿನ ಮನೆಗೆ ತೆರಳಿದ
  • ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಬಿಷ್ಟಪ್ಪನ ಸಾವು

ಮೃತಪಟ್ಟನೆಂದು ಆಸ್ಪತ್ರೆಯಿಂದ ಕರೆ ತರುವಾಗ ಡಾಬಾ ಬಂತು ಊಟ ಮಾಡ್ತೀಯಾ ಎಂದು ಗೋಳಾಡಿ ಅಳುವಾಗ ಬದುಕಿದ ವಿಚಿತ್ರ ಘಟನೆ ಹಾವೇರಿಯಲ್ಲಿ ನಡೆದಿತ್ತು. 45 ವರ್ಷದ ಶಿಗ್ಗಾಂವಿ ತಾಳಲೂಕಿನ ಬಂಕಾಪುರ ಗ್ರಾಮದ ಬಿಷ್ಟಪ್ಪ ಗುಡಿಮನಿ ಎಂಬ ವ್ಯಕ್ತಿ ಈ ಹಿಂದೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದರು.

ಆತನನ್ನು ವಾಪಸ್ ಕರೆತರುವಾಗ, ಹೆದ್ದಾರಿಯಲ್ಲಿ ಡಾಭಾ ಕಾಣಿಸಿಕೊಂಡಿದೆ. ಡಾಭಾ ಬಂತು ಊಟ ಮಾಡ್ತೀಯಾ ಎಂದು ಸಂಬಂಧಿಕರು ಗೋಳಾಡಿದಾಗ ಮೃತವ್ಯಕ್ತಿ ಮತ್ತೆ ಉಸಿರಾಡಲು ಶುರು ಮಾಡಿದ್ದ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಾಜಿ ಶಾಸಕನ ದುರಂತ.. ಆಟೋ ಚಾಲಕ ಅರೆಸ್ಟ್; ಸಣ್ಣ ವಿಚಾರಕ್ಕೆ ದೊಡ್ಡ ಅನಾಹುತ!

ಕೂಡಲೇ ಆತನನ್ನು ಶಿಗ್ಗಾವಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಜೀವಂತವಾಗಿ ಮನೆಗೆ ಕರೆತರಲಾಗಿತ್ತು. ಕಾಮಾಲೆ ರೋಗದಿಂದ ಬಳಲುತ್ತಿದ್ದ ಬಿಷ್ಟಪ್ಪನನ್ನು ಮರಳಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಗೆ ದಾಖಲಿಸಲಾಗಿತ್ತು ನಿರಂತರ ಒಂದು ವಾರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿಷ್ಟಪ್ಪ ಇಂದು ಉಸಿರು ಚೆಲ್ಲಿದ್ದಾನೆ. ನಿಧನದ ಹಿನ್ನೆಲೆ ಇಂದು ಅವರ ಸ್ವಗ್ರಾಮ ಬಂಕಾಪುರದಲ್ಲಿ ಅಂತ್ಯಕ್ರಿಯೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment