Advertisment

ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ

author-image
Ganesh
Updated On
ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ
Advertisment
  • ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಘಟನೆ
  • ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
  • ಬರ್ಬರ ಕೊಲೆಗೆ ಕಾರಣ ಏನು ಗೊತ್ತಾ?

ಶಿವಮೊಗ್ಗ : ಜಮೀನು ವಿವಾದ ತಾರಕಕ್ಕೇರಿ ಶಿವಮೊಗ್ಗದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ. ಸತೀಶ್ ನಾಯ್ಕ (28) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ವಿರುದ್ಧ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

Advertisment

ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಜಮೀನು ವಿವಾದ ಇತ್ತು. ವಿವಾದ ಹಿನ್ನೆಲೆಯಲ್ಲಿ ಯಾರೂ ಕೂಡ ಜಮೀ‌ನಿನೊಳಗೆ ತೆರಳದಂತೆ ಕೋರ್ಟ್ ಆದೇಶ ನೀಡಿತ್ತು. ಇಂದು ಬೆಳಗ್ಗೆ ಜಮೀನಿಗೆ ಸತೀಶ್ ನಾಯ್ಕ ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಪವಿತ್ರ ಜಯರಾಂ ಇನ್ನು ನೆನಪು ಮಾತ್ರ.. ಅಪಘಾತ ಆಗ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ದಾಗ ಏನಾಯ್ತು..?

publive-image

ಸ್ಥಳದಲ್ಲಿದ್ದ ಗುಂಪು ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದೆ. ಪರಿಣಾಮ ಸತೀಶ್ ನಾಯ್ಕ್ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ರಿಕ್ತಗೊಂಡ ಹಲವರಿಂದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮೂವರು ರೌಡಿಶೀಟರ್​​ಗಳ ಬರ್ಬರ ಕೊಲೆ ನಡೆದಿತ್ತು. ಈ ಬೆನ್ನಲ್ಲೇ ಜಮೀನು ವಿಚಾರಕ್ಕೆ ಮತ್ತೊಂದು ಭೀಕರ ಕೊಲೆ ನಡೆದಿದೆ.

Advertisment

ಇದನ್ನೂ ಓದಿ:ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment