ಗುಡ್ಡ ಕುಸಿತದಲ್ಲಿ ರಕ್ಷಣೆ ಆಗಿದ್ದ ವ್ಯಕ್ತಿ ಬದುಕಿ ಉಳಿಯಲಿಲ್ಲ, ಗಂಭೀರ ಗಾಯದಿಂದ ಸಾವು

author-image
Ganesh
Updated On
ಗುಡ್ಡ ಕುಸಿತದಲ್ಲಿ ರಕ್ಷಣೆ ಆಗಿದ್ದ ವ್ಯಕ್ತಿ ಬದುಕಿ ಉಳಿಯಲಿಲ್ಲ, ಗಂಭೀರ ಗಾಯದಿಂದ ಸಾವು
Advertisment
  • ಮನೆಯೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ ಆಗಿತ್ತು
  • ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆದ ದುರ್ಘಟನೆ
  • ಮಣ್ಣು ತೆಗೆದು ರಕ್ಷಣಾ ಕಾರ್ಯಾಚರಣೆ ಮಾಡಿದ್ದ ಸ್ಥಳೀಯರು

ಕಾರವಾರ: ರಣ ಭಯಂಕರ ಮಳೆಗೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ತಾಲೂಕಿನ ಕಿನ್ನರ ಗ್ರಾಮದ ನಿರಾಕಾರ ದೇವಾಲಯ ಬಳಿ ಗುಡ್ಡ ಕುಸಿದಿದ್ದರಿಂದ ಮಣ್ಣಿನಡಿ ಸಿಲುಕಿದ್ದ ವ್ಯಕ್ತಿ ರಕ್ಷಣೆ ಬಳಿಕ ಸಾವನ್ನಪ್ಪಿದ್ದಾರೆ.

ತಿರ್ಕಸ್ ಗುರವ್ ಮೃತ ದುರ್ದೈವಿ. ಭಾರೀ ಮಳೆ ಹಿನ್ನೆಲೆಯಲ್ಲಿ ಮನೆ ಮೇಲೆ ಗುಡ್ಡು ಕುಸಿದಿತ್ತು. ಆ ಅವಶೇಷಗಳ ಅಡಿಯಲ್ಲಿ ಗುರವ್ ಮುಚ್ಚಿ ಹೋಗಿದ್ದರು. ಇದು ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆಯೇ ಆಗಮಿಸಿ ಅವರನ್ನು ರಕ್ಷಿಸುವ ಕೆಲಸ ಮಾಡಿದ್ದರು.

ಅವಶೇಷಗಳು ಮೈಮೇಲೆ ಬಿದ್ದಿದ್ದರಿಂದ ಗುರವ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಗುರವ ಚಿಕಿತ್ಸೆ ಫಲಸಿದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಅಂಕೋಲದ ಶಿರೂರು ಬಳಿ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ಇದೆ.

ಇದನ್ನೂ ಓದಿ:ಕೊನೆಯ 2 ಓವರ್​ನಲ್ಲಿ 61 ರನ್​ ಬೇಕಿತ್ತು.. 8 ಸಿಕ್ಸರ್​, 2 ಬೌಂಡರಿ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಸ್ಟಾರ್..! Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment