Advertisment

ಸಣ್ಣ ವಿಚಾರಕ್ಕೆ ಕಿರಿಕ್.. ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

author-image
Ganesh
Updated On
ಸಣ್ಣ ವಿಚಾರಕ್ಕೆ ಕಿರಿಕ್.. ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
Advertisment
  • ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಹತ್ಯೆ
  • ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿತ್ತು
  • ಸ್ಥಳಕ್ಕೆ ಬನಶಂಕರಿ ಪೊಲೀಸರು ಭೇಟಿ ನೀಡಿದ್ದಾರೆ

ಬೆಂಗಳೂರು: ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ 7ನೇ ಬಡಾವಣೆಯಲ್ಲಿ ನಡೆದಿದೆ.

Advertisment

ಮೇ 12ರ ಮಧ್ಯರಾತ್ರಿ ಕೃತ್ಯ ನಡೆದಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಕೊಲೆಗಾರ ಯಾರು ಅನ್ನೋದು ಗೊತ್ತಿಲ್ಲ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಕುಡಿದು ಓರ್ವ ವ್ಯಕ್ತಿ ಮಲಗಿದ್ದ. ಈ ವೇಳೆ ಮತ್ತೊಬ್ಬ ಬಂದು ಆತನ ಮೇಲೆ ಬಿದ್ದಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದೆ.

ಇದನ್ನೂ ಓದಿ:Video: ರಿಂಕು ಸಿಂಗ್ ಜರ್ಸಿ ಹಾಕೊಂಡು ಬಂದು ಕ್ರಿಕೆಟ್ ಬಾಲ್ ಕದ್ದ ಅಭಿಮಾನಿ.. ಬಿತ್ತು ನೋಡಿ ಒದೆ..!

ಗಲಾಟೆ ತಾರಕಕ್ಕೇರಿ ಮಲಗಿದ್ದ ವ್ಯಕ್ತಿಯನ್ನು ಧರಧರನೆ ಎಳೆದು ಹಾಕಿದ್ದಾನೆ. ನಂತರ ರಸ್ತೆ ಪಕ್ಕ ಬಿದ್ದದ್ದ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬನಶಂಕರಿ ಪೊಲೀಸರು ಭೇಟಿ ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಕೊಲೆಗಾರ ಮತ್ತು ಸಾವನ್ನಪ್ಪಿದ ಇಬ್ಬರ ಗುರುತು ಪತ್ತೆಯಾಗಿಲ್ಲ.

Advertisment

ಇದನ್ನೂ ಓದಿ:Rain: ಮಂಡ್ಯದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದು ಭಾರೀ ಅನಾಹುತ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment