newsfirstkannada.com

ನೀರಿನ ಟ್ಯಾಂಕ್​ಗೆ ಜಿಗಿದು ವ್ಯಕ್ತಿ ಸಾವು; ಗೊತ್ತಿಲ್ಲದೇ ಅದೇ ನೀರು ಕುಡಿಯುತ್ತಿದ್ದ ಗ್ರಾಮದ ಜನ

Share :

Published March 30, 2024 at 7:41am

    ಕರ್ನಾಟಕದ ಈ ಗ್ರಾಮಾದಲ್ಲಿ ಭಾರೀ ಆತಂಕ ಶುರುವಾಗಿದೆ

    ಕಳೆದ ಎರಡ್ಮೂರು ದಿನಗಳಿಂದ ನೀರು ಕಲುಷಿತಗೊಂಡಿತ್ತು

    ವಾಟರ್​​ ಟ್ಯಾಂಕ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರ ಬಯಲಿಗೆ

ಬೀದರ್: ಕುಡಿಯೋ ನೀರಿನ ವಾಟರ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್‌ನ ಅಣದೂರ್ ಗ್ರಾಮದಲ್ಲಿ ನಡೆದಿದೆ.

ಅದೇ ನೀರನ್ನ ಎರಡ್ಮೂರು ದಿನಗಳ ಕಾಲ ಇಡೀ ಗ್ರಾಮಸ್ಥರು ಕುಡಿದಿದ್ದು, ಆತಂಕ ಶುರುವಾಗಿದೆ. ಗ್ರಾಮದಲ್ಲಿ ಸರಬರಾಜಾಗುವ ನೀರು ಕಲುಷಿತ ಹಾಗೂ ದುರ್ವಾಸನೆ ಬರ್ತಿದ್ದಂತೆ ವಾಟರ್ ಟ್ಯಾಂಕ್‌ ಪರಿಶೀಲಿಸಿದ್ದಾರೆ. ಗ್ರಾಮದ ನಿವಾಸಿ 27 ವರ್ಷದ ರಾಜು ಶೈಲಪ್ಪಾ ದಾಸರ್ ಕುಡಿಯೋ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರೋ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹಿಂದೂ ಹೆಸರು ಹೇಳಿಕೊಂಡು ಓಡಾಟ.. ಮಹತ್ವದ ಘಟ್ಟ ತಲುಪಿದ ರಾಮೇಶ್ವರಂ ಕೆಫೆ ಕೇಸ್ ತನಿಖೆ​..!

ಪತ್ನಿ ಪರಪುರುಷನ ಜೊತೆ ಓಡಿ ಹೋಗಿದ್ದಕ್ಕೆ ಮನನೊಂದಿದ್ದ ರಾಜು, ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿಯೇ ವಾಟರ್ ಟ್ಯಾಂಕ್‌ಗೆ ರಾಜು ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಅದೇ ಟ್ಯಾಂಕ್‌ ನೀರನ್ನ ಜನರು ಕುಡಿದಿದ್ದರಿಂದ ಗ್ರಾಮದಲ್ಲಿ ಆರೋಗ್ಯ ಇಲಾಖೆ ಬೀಡು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರಿನ ಟ್ಯಾಂಕ್​ಗೆ ಜಿಗಿದು ವ್ಯಕ್ತಿ ಸಾವು; ಗೊತ್ತಿಲ್ಲದೇ ಅದೇ ನೀರು ಕುಡಿಯುತ್ತಿದ್ದ ಗ್ರಾಮದ ಜನ

https://newsfirstlive.com/wp-content/uploads/2024/03/BDR-WATER-TANK.jpg

Load More