newsfirstkannada.com

ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

Share :

Published May 14, 2024 at 2:42pm

    ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದು ಸಾವು

    ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡು ಮನೆಗೆ ಬಂದಿದ್ದ

    ಪಶು ವೈದ್ಯನನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಮಂಗಳೂರು: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶು ವೈದ್ಯಾಧಿಕಾರಿ ಹಲ್ಲೆ ಮಾಡಿದ ಪರಿಣಾಮ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಕೊಕ್ಕಡ‌ ನಿವಾಸಿ ಕೃಷ್ಣ ಯಾನೆ ಕಿಟ್ಟ(58) ಸಾವನ್ನಪ್ಪಿದ ವ್ಯಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜೋಡುಮಾರ್ಗ ಸರ್ಕಲ್​​ನಲ್ಲಿ ಈ ಘಟನೆ ನಡೆದಿದೆ.

ಏನಿದು ಆರೋಪ..?
ಮೃತ ಕೃಷ್ಣ ಮತ್ತು ಆರೋಪಿ ಪಶುವೈದ್ಯಾಧಿಕಾರಿ ಕುಮಾರ್ ಆಪ್ತರಾಗಿದ್ದರಂತೆ. ಕೃಷ್ಣ ವಿಪರೀತ ಜ್ವರದಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಕೆ ಕಂಡ ಬಳಿಕ ಕೊಕ್ಕಡಕ್ಕೆ ಕೃಷ್ಣ ವಾಪಸ್ಸಾಗಿದ್ದರು. ಈ ಮಧ್ಯೆ ಪಶುವೈದ್ಯ ಕುಮಾರ್​ ಅವರಿಗೆ ಮಾರ್ಗ ಮಧ್ಯದಲ್ಲಿ ಕೃಷ್ಣ ಸಿಕ್ಕಿದ್ದಾನೆ. ಆಗ ಆರೋಗ್ಯ ಸುಧಾರಿಸುವವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀಬೇಕಿತ್ತು ಎಂದು ಪಶು ವೈದ್ಯ ಕುಮಾರ್ ಸಲಹೆ ನೀಡಿದ್ದಾರಂತೆ.

ನಂತರ ಸಲುಗೆಯಿಂದ ಕೃಷ್ಣಗೆ ಬುದ್ಧಿ ಮಾತು ಹೇಳಿ ಬೆನ್ನಿಗೆ ಏಟು ಹೊಡೆದ್ರಂತೆ. ಹೊಡೆದ ರಭಸಕ್ಕೆ ಕೃಷ್ಣ ಕಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ ಕೃಷ್ಣ ಅವರ ಪತ್ನಿ ಭಾರತಿ ಪಶುವೈದ್ಯಾಧಿಕಾರಿ ಕುಮಾರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪಶುವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಮುಖ್ಯ ಕೋಚ್​ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ.. ಈ ಅರ್ಹತೆಗಳು ಇದ್ದರೆ ನೀವೂ ಕೂಡ ಅರ್ಜಿ ಸಲ್ಲಿಸಬಹುದು!

ಇದನ್ನೂ ಓದಿ:CSK, RCB ಅಭಿಮಾನಿಗಳಿಗೆ ಇದು ಕೆಟ್ಟ ಸುದ್ದಿ.. ಏನದು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

https://newsfirstlive.com/wp-content/uploads/2024/05/MNG-MAN-DIED.jpg

Load More