ಕೆಲಸ ಕೆಲಸವೆಂದು ತಡಬಡಿಸುವರಿಗೆ ಇದು ಶಾಂಕಿಂಗ್ ನ್ಯೂಸ್
ನಿರಂತರ ಕೆಲಸ ಮಾಡಿದ ವ್ಯಕ್ತಿ ಸಾವನ್ನಪ್ಪಿದ್ದು ಹೇಗೆ, ಕಾರಣ..?
ಕೋರ್ಟ್ ಎಷ್ಟು ಲಕ್ಷ ರೂಪಾಯಿ ಪರಿಹಾರ ಕೊಡಲು ಹೇಳಿದೆ?
ಯಾವಾಗಲೂ ಕೆಲಸ ಕೆಲಸವೆಂದು ತಡಬಡಿಸುವ ಹಲವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಉದ್ಯೋಗದ ಜೊತೆ ಕುಟುಂಬ, ಬಿಡುವಿನ ಸಮಯ ಕಳೆಯುವುದನ್ನು ರೂಢಿಸಿಕೊಳ್ಳಬೇಕು. ಆಫೀಸ್, ಜಾಬ್ ಇಲ್ಲದೆಯೂ ಇನ್ನೊಂದು ಸುಂದರ ಪ್ರಪಂಚ ಇದೆ. ಅದನ್ನು ಎಂಜಾಯ್ ಮಾಡಬೇಕು. ಇದೆಲ್ಲ ಏಕೆ ಹೇಳಲಾಗುತ್ತಿದೆ ಎಂದರೆ ವ್ಯಕ್ತಿಯೊಬ್ಬ ಒಂದೇ ಒಂದು ದಿನ ರಜೆ ತೆಗೆದುಕೊಂಡು 103 ದಿನ ನಿರಂತರ ಕೆಲಸ ಮಾಡಿದ ಕಾರಣಕ್ಕೆ ಮೃತಪಟ್ಟಿದ್ದಾನೆ.
ಅಬಾವೊ ಎನ್ನುವ ವ್ಯಕ್ತಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಯೊಂದರ ಜೊತೆ ಮಾತನಾಡಿ ಕಾಂಟ್ರಾಕ್ಟ್ ಬೇಸ್ ಮೇಲೆ ಪೇಟಿಂಗ್ ಮಾಡುವುದನ್ನು 2023ರ ಫೆಬ್ರುವರಿಯಲ್ಲಿ ಒಪ್ಪಿಕೊಂಡಿದ್ದ. ಒಪ್ಪಂದಂತೆ ಜನವರಿ 2024ರ ಒಳಗೆ ಎಲ್ಲ ಪೈಂಟಿಂಗ್ ಕೆಲಸ ಪೂರ್ಣ ಮಾಡಿಕೊಡಬೇಕಿತ್ತು. ಅದರಂತೆ ಚೀನಾದ ಪೂರ್ವ ಭಾಗದ ಝೆಜಿಯಾಂಗ್‌ನಲ್ಲಿನ ಝೌಶಾನ್ ನಗರದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿದ್ದ.
ಇದನ್ನೂ ಓದಿ: ಹಾರ್ಟ್ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!
ಕೆಲಸ ಆರಂಭಿಸಿದ್ದ ಅಬಾವೊ ಫೆಬ್ರವರಿಯಿಂದ ಮೇ ವರೆಗೆ ಸತತ 103 ದಿನ ಕೆಲಸ ಮಾಡಿದರು. ಈ 104 ದಿನದಲ್ಲಿ ಕೇವಲ ಒಂದೇ ಒಂದು ದಿನ ಅದು ಏಪ್ರಿಲ್ 6 ರಂದು ವಿಶ್ರಾಂತಿ ತೆಗೆದುಕೊಂಡಿದ್ದ. ಆದರೆ ನಿರಂತರ ಕೆಲಸದಿಂದ ಅಬಾವೊ ಮೇ 25ರಂದು ಅನಾರೋಗ್ಯಕ್ಕೆ ತುತ್ತಾದರು. ಇದಕ್ಕೆ ಬೇಕಾದ ಚಿಕಿತ್ಸೆ ಕೂಡ ಪಡೆದುಕೊಂಡರು. ಆದರೆ ಮೇ 28 ರ ಹೊತ್ತಿಗೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ವೈದ್ಯರನ್ನು ಈ ಬಗ್ಗೆ ಕೇಳಿದರೆ ಅವರಿಗೆ ಸತತ ಕೆಲಸದಿಂದ ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ವೈಫಲ್ಯ ಆಗಿದೆ ಎಂದು ಹೇಳಿದ್ದಾರೆ.
ಕೋರ್ಟ್ಗೆ ಅರ್ಜಿ ಸಲ್ಲಿಸಿದ ಕುಟುಂಬಸ್ಥರು
ಕೊನೆಗೆ ಜೂನ್ 1 ರಂದು ಅಬಾವೊ ನ್ಯೂಮೋಕೊಕಲ್ ಸೋಂಕಿಗೆ ಒಳಗಾಗಿ ಅಂಗ ವೈಫಲ್ಯದಿಂದ ಮೃತಪಟ್ಟರು. ಅಬಾವೊ ಸಾವನ್ನಪ್ಪಿದ ನಂತರ ದುಃಖದಲ್ಲಿದ್ದ ಅವರ ಕುಟುಂಬದವು ಕಂಪನಿಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅತಿಯಾದ ಕೆಲಸ ಹಾಗೂ ವಿಶ್ರಾಂತಿ ಇಲ್ಲದಿರುವುದೇ ಸಾವಿಗೆ ಕಾರಣವಾಗಿದೆ ಎಂದು ಕೋರ್ಟ್ಗೆ ಕುಟುಂಬ ಹೇಳಿದೆ. ಇದಕ್ಕೆ ವಿರುದ್ಧವಾಗಿ ಕಂಪನಿ ಅವರಿಗೆ ಕಾಂಟ್ರಾಕ್ಟ್ ಬೇಸ್ನಲ್ಲಿ ಕೆಲಸ ಕೊಡಲಾಗಿತ್ತು. ಅಲ್ಲಿ ರಜೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತವಾಗಿತ್ತು ಎಂದು ಹೇಳಿತ್ತು.
ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?
ಎಷ್ಟು ಲಕ್ಷ ರೂಪಾಯಿಗಳನ್ನ ಪರಿಹಾರ ಕೊಡಿಸಿದೆ ಕೋರ್ಟ್?
ಆದರೆ ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯ, ಅಂಗಾಂಗ ವೈಫಲ್ಯದಿಂದ ಉದ್ಯೋಗಿ ಮೃತಪಟ್ಟಿದ್ದಾನೆ. ಕೆಲಸ ಕೊಟ್ಟವರು ಯಾರೇ ಅಗಿರಲಿ ಉದ್ಯೋಗಿಯ ಸಾವಿಗೆ ಶೇ.20 ಹೊಣೆಗಾರನಾಗಿರುತ್ತಾರೆ. 103 ದಿನ ನಿರಂತರ ಕೆಲಸ ಮಾಡುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿದೆ. ನಮ್ಮ ದೇಶದ ಕಾರ್ಮಿಕ ಕಾನೂನಿನ ಪ್ರಕಾರ ದಿನಕ್ಕೆ 8 ಗಂಟೆ ಕೆಲಸ ಇದು ವಾರಕ್ಕೆ ಸರಾಸರಿ 44 ಗಂಟೆಗಳು ಕೆಲಸ ಮಾಡಬೇಕು. ಹೀಗಾಗಿ ಇಲ್ಲಿ ನಿಯಮ ಉಲ್ಲಂಘನೆಯಾದ ಕಾರಣ ಮೃತ ಪೈಂಟರ್ ಕುಟುಂಬಕ್ಕೆ 4,00,000 ಯುವಾನ್ (47,46,000 ರೂಪಾಯಿ) ಪರಿಹಾರ ನೀಡಬೇಕೆಂದು ನ್ಯಾಯಲಯ ಹೇಳಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ