/newsfirstlive-kannada/media/post_attachments/wp-content/uploads/2024/12/MND_MURDER_1.jpg)
ಮಂಡ್ಯ: ನಿನ್ನೆ ರಾತ್ರಿ ಭೀಕರ ಕೊಲೆಗೆ ಸಕ್ಕರೆ ನಾಡು ಬೆಚ್ಚಿ ಬಿದ್ದಿತ್ತು. ಮರ ಕತ್ತರಿಸೋ ಯಂತ್ರದೊಂದಿಗೆ ಮನೆ ಬಾಗಿಲಿಗೆ ಬಂದವನೊಬ್ಬ ಮಂಡ್ಯದಲ್ಲಿ ಅದೇ ಯಂತ್ರದಿಂದಲೇ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿದ್ದ. ಮನೆ ಯಜಮಾನಿಯ ಚಾಣಾಕ್ಷತನದಿಂದ ಕೊಲೆಗಾರ ಲಾಕ್ ಕೂಡ ಆಗಿದ್ದ. ಇದೀಗ ಕಿರಾತಕ ಕೃತ್ಯದ ಹಿಂದಿನ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.
ರಾಬರಿಗೆ ಬಂದವನಿಂದ ವ್ಯಕ್ತಿಯ ಬರ್ಬರ್ ಮರ್ಡರ್
ಇವನ ಹೆಸ್ರು ಇಬ್ರಾಹಿಂ, ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ನಿವಾಸಿ. ದರೋಡೆ ದಾರಿ ಹಿಡಿದಿದ್ದ ಇಬ್ರಾಹಿಂ ನಿನ್ನೆ ಕಳ್ಳತನ ಮಾಡೋದಕ್ಕೆ ಮಂಡ್ಯದ ಕ್ಯಾತನಹಳ್ಳಿಗೆ ಬಂದವ ರಮೇಶ್ ಎಂಬುವವರ ಮನೆಗೆ ನುಗ್ಗಿದ್ದ. ಈ ವೇಳೆ ದರೋಡೆಗೆ ಅಡ್ಡಿಯಾದ ರಮೇಶ್ನನ್ನ ಮರ ಕೊಯ್ಯುವ ಯಂತ್ರದಿಂದ ಬರ್ಬರವಾಗಿ ಹತ್ಯೆಗೈದಿದ್ದ.
ಕ್ಯಾತನಹಳ್ಳಿ ಕಿರಾತಕ!
ಆನ್ಲೈನ್ ಗೇಮ್ ಸುಳಿಗೆ ಸಿಲುಕಿ ಸಾಲ ಮಾಡಿದ್ದಕೊಂಡಿದ್ದ ಇಬ್ರಾಹಿಂ, ತೀರಿಸಲು ದರೋಡೆಗೆ ಪ್ಲಾನ್ ಮಾಡಿದ್ದ. ಹೀಗಾಗಿ ಮರ ಕತ್ತರಿಸುವ ಯಂತ್ರದೊಂದಿಗೆ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನಕ್ಕೆ ಇಳಿದಿದ್ದ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ರಮೇಶ್ ತೋಟದ ಮನೆಗೆ ನಿನ್ನೆ ನುಗ್ಗಿದ್ದ ಇಬ್ರಾಹಿಂ, ಮನೆಯಲ್ಲಿ ವಯಸ್ಸಾದ ದಂಪತಿ ಇದ್ದಿದ್ದರಿಂದ ದರೋಡೆಗೆ ಯತ್ನಿಸಿದ್ದ. ಈ ವೇಳೆ ರಮೇಶ್ ಅಡ್ಡಿ ಮಾಡ್ತಿದ್ದಂತೆ ಅವರನ್ನ ಮರ ಕೊಯ್ಯುವ ಯಂತ್ರದಿಂದ ಕೊಯ್ದು ಕೊಲೆಗೈದಿದ್ದ, ನಂತರ ರಮೇಶ್ ಪತ್ನಿ ಯಶೋಧಮ್ಮ ಕೊಲೆಗೂ ಯತ್ನಿಸಿದ್ದ. ಬಳಿಕ ಯಶೋಧಮ್ಮ ಮನೆಯಿಂದ ಹೊರಬಂದು ಬಾಗಿಲು ಹಾಕಿಕೊಂಡು ಇಬ್ರಾಹಿಂನ ಒಳಗೆ ಲಾಕ್ ಮಾಡಿದ್ದಾರೆ.
ಹತ್ಯೆಗೂ ಮುನ್ನ ಕಿಲ್ಲರ್ ಇಬ್ರಾಹಿಂ ಕೆನ್ನಾಳು ಗ್ರಾಮಕ್ಕೆ ಬಂದಿದ್ದ. ಅಲ್ಲಿ ಇಂದ್ರಮ್ಮ ಎಂಬುವವರ ಮನೆಗೆ ಬಂದಿದ್ದ ಕೀಚಕ, ಮರ ಕತ್ತರಿಸುವ ಯಂತ್ರ ತಂದಿದ್ದಾಗಿ ಹೇಳಿದ್ದ. ಈ ವೇಳೆ ಇಂದ್ರಮ್ಮ, ನಾವು ಆರ್ಡರ್ ಮಾಡಿಲ್ಲ ಹೋಗು ಎಂದಿದ್ದರು. ಸಿಸಿಟಿವಿ ಅಳವಡಿಕೆ ನೋಡಿ ಹಂತಕ ಇಬ್ರಾಹಿಂ ಅಲ್ಲಿಂದ ವಾಪಸ್ ಆಗಿದ್ದ. ಇನ್ನೂ, ಹಂತಕನ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಲ ತೀರಿಸೋಕೆ ದರೋಡೆಗೆ ಇಳಿದವ ಈಗ ಕೊಲೆಗಾರನಾಗಿ ಜೈಲುಪಾಲಾಗಿದ್ದಾನೆ. ಆದ್ರೆ, ಏನು ತಪ್ಪು ಮಾಡದ ರಮೇಶ್ ಜೀವವೇ ಹೋಗಿದ್ರೆ, ಪತ್ನಿ ಯಶೋಧಮ್ಮ ಆಸ್ಪತ್ರೆ ಪಾಲಾಗಿದ್ದಾಳೆ.
ಇದನ್ನೂ ಓದಿ:ಮರ ಕತ್ತರಿಸೋ ಯಂತ್ರದಿಂದ ಜೀವ ತೆಗೆದ ಕೇಸ್; ಕ್ಯಾತನಹಳ್ಳಿ ಕಿರಾತಕನ ಹಿಸ್ಟರಿ ಕೇಳಿ ಪೊಲೀಸರು ಶಾಕ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ