/newsfirstlive-kannada/media/post_attachments/wp-content/uploads/2025/01/PIZZA-KNIFE.jpg)
ರಾತ್ರಿ ವೇಳೆ ಆರ್ಡರ್ ಮಾಡಿದ ಪಿಜ್ಜಾ ನೋಡಿದ ಗ್ರಾಹಕನಿಗೆ ರಾತ್ರಿ ಬಿದ್ದ ಕನಸಿಗೆ ಬೆಚ್ಚಿ ಬಿದ್ದಂತೆ ಬೀಳುವಂತಾಗಿತ್ತು. ಯಾಕಂದ್ರೆ ಬಿಸಿ ಬಿಸಿಯಾಗಿ ಬಂದ ಪಿಜ್ಜಾ ತುಂಡಿನಲ್ಲಿ ಚಾಕುವಿನ ತುಂಡೊಂದು ಸಿಕ್ಕಿದ್ದು ಗ್ರಾಹಕ ಒಂದು ಕ್ಷಣ ದಂಗಾಗಿ ಹೋಗಿದ್ದ. ಪಿಜ್ಜಾದಲ್ಲಿ ಚಾಕುವಿನ ತುಂಡೊಂದು ಸಿಕ್ಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಡಾಮಿನೋಸ್ ಔಟ್​ಲೆಟ್​ಗೆ 596 ರೂಪಾಯಿ ನೀಡಿ ಅರುಣ್ ಕಾಪ್ಸೆ ಎನ್ನುವವರು ಪಿಜ್ಜಾ ಆರ್ಡರ್ ಮಾಡಿದ್ದರು ಸ್ಪೈನ್​ ರೋಡ್​ನ ಜೈಗಣೇಶ್ ಎಂಪೈರ್​ನಲ್ಲಿರುವ ಡಾಮಿನೋಸ್ ಔಟ್​ಲೆಟ್​ನಿಂದ ಪಿಜ್ಜಾ ಕೂಡ ಬಂದಿತ್ತು.
ಪಿಜ್ಜಾ ಬಂದ ಖುಷಿಯಲ್ಲಿ ಮನೆಯವರೆಲ್ಲಾ ಖುಷಿಯಲ್ಲಿ ತಿನ್ನಲು ಸಜ್ಜಾಗಿದ್ದರು. ಪಿಜ್ಜಾವನ್ನು ಆಸ್ವಾದಿಸುತ್ತಾ ಒಂದು ತುಣುಕು ತೆಗೆದುಕೊಂಡು ಬಾಯಿಗೆ ಹಾಕಿಕೊಂಡ ಅರುಣ್ ಕಾಪ್ಸೆಯವರಿಗೆ ಬಾಯಲ್ಲಿ ಏನೋ ಮುಳ್ಳಿನಂತೆ ನೆಟ್ಟಂತಾಯಿತು ಕೂಡಲೇ ಬಾಯಿಯಿಂದ ಪಿಜ್ಜಾ ತುಣುಕನ್ನು ತೆರೆದು ನೋಡಿದಾಗ ಅದರಲ್ಲಿ ಚಾಕುವಿನ ತುಂಡು ಪತ್ತೆಯಾಗಿತ್ತು. ಈ ಬಗ್ಗೆ ಮಾತನಾಡಿರುವ ಅರುಣ್ ನಾನು ಗಂಭೀರವಾಗಿ ಗಾಯಗೊಳ್ಳುವಲ್ಲಿ ಕೊಂಚದರಲ್ಲಿ ಪಾರಾದೆ. ಇಲ್ಲವಾದರೆ ದೊಡ್ಡ ಮಟ್ಟದ ಅನಾಹುತವಾಗಲಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಮಿ.ಪರ್ಫೆಕ್ಟ್.. ರಾತ್ರಿ ಫುಲ್ ವೈಲೆಂಟ್.. 700 ಹುಡುಗಿಯರಿಗೆ ಕಾಟ ಕೊಟ್ಟ ಕಿರಾತಕ ಇವನೊಬ್ಬನೇ!
ಪಿಜ್ಜಾದಲ್ಲಿ ಚಾಕುವಿನ ಪೀಸ್ ವಿಚಾರವನ್ನು ಅರುಣ್ ಕಾಪ್ಸೆ ಡಾಮಿನೋಸ್​ನ ಮ್ಯಾನೆಜರ್​ಗೆ ಫೋನ್ ಮಾಡಿ ತಿಳಿಸಿದ್ದಾರೆ. ಆರಂಭದಲ್ಲಿ ಮ್ಯಾನೆಜರ್ ಅದನ್ನು ಅಲ್ಲಗಳೆದಿದ್ದಾರೆ,ಕೊನೆಗೆ ಪಿಜ್ಜಾದಲ್ಲಿದ್ದ ಚಾಕುವಿನ ಪೀಸ್​ನ್ನು ಫೋಟೋ ತೆಗೆದು ಮ್ಯಾನೆಜರ್​​ಗೆ ಕಳುಹಿಸಿದಾಗ ಆತ ಅರುಣ್ ಅವರ ಮನೆಗೆ ಓಡೋಡಿ ಬಂದಿದ್ದಾರೆ. ಅರುಣ್ ಅವರು ಹೇಳುವ ಪ್ರಕಾರ ಮನೆಗೆ ಬಂದ ಡಾಮಿನೋಸ್ ಔಟ್​ಲೆಟ್​ನ ಮ್ಯಾನೇಜರ್ ತಪ್ಪನ್ನು ಒಪ್ಪಿಕೊಂಡ ಕ್ಷಮೆಯನ್ನು ಯಾಚಿಸುವ ಮೂಲಕ ನೀವು ಈ ಪಿಜ್ಜಾದ ದುಡ್ಡನ್ನು ಕೊಡಲೇಬೇಡಿ, ದಯವಿಟ್ಟು ವಿಷಯವನ್ನು ದೊಡ್ಡದು ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ.ಅದು ಅಲ್ಲದೇ ಮೀಡಿಯಾಗಳಿಗೆ ವಿಷಯ ಹೋಗದಂತೆ ನೋಡಿಕೊಳ್ಳಿ ಎಂದಿದ್ದಾರೆ.
ಅದ್ರೆ ಅರುಣ್ ಇದು ನಿಜಕ್ಕೂ ಜನರ ಸುರಕ್ಷತೆಯ ಪ್ರಶ್ನೆ, ಕಂಪನಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಇದು ನಾಲ್ಕು ಜನರಿಗೆ ತಿಳಿಯಲೇಬೇಕು ಎಂದು ಪಿಜ್ಜಾದಲ್ಲಿ ಸಿಕ್ಕಿರುವ ಚಾಕುವಿನ ತುಂಡನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು. ಪಿಜ್ಜಾ ಆರ್ಡರ್ ಮಾಡುವ ಮುನ್ನ ಹಾಗೂ ತಿನ್ನುವ ಮುನ್ನ ಎಚ್ಚರದಿಂದಿರಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us