/newsfirstlive-kannada/media/post_attachments/wp-content/uploads/2024/08/wayanad-9.jpg)
ದುಡಿಯಲೆಂದು ಗಲ್ಫ್​​ಗೆ ಹೋದ ಮಗನಿಗೆ ವಯನಾಡಿನಲ್ಲಿ ನಡೆದ ದುರಂತ ಬರ ಸಿಡಿಲಿನಂತೆ ಕೇಳಿಸಿತು. ಸುದ್ದಿ ತಿಳಿದು ವಿಚಲಿತರಾಗಿದ್ದ ಶಾಹಿದ್​​ ವಿಮಾನ ಏರಿ ನೇರವಾಗಿ ಕೇರಳಕ್ಕೆ ಬಂದಿಳಿದರು. ವಯನಾಡಿಗೆ ಬಂದು ನೋಡಿದಾಗ ಶಾಹಿದ್​​ಗೆ ಮೊದಲು ಸಿಕ್ಕಿದ್ದೇ ತಂದೆಯ ಮೃತದೇಹ.
/newsfirstlive-kannada/media/post_attachments/wp-content/uploads/2024/08/wayanad-7.jpg)
ತಂದೆ ಭೂಕುಸಿತದ ರಣಾರ್ಭಟಕ್ಕೆ ಸಾವನ್ನಪ್ಪಿದರೆ, ಉಳಿದವರಿಗಾಗಿ ಶಾಹಿದ್​​ ಹುಡುಕಾಡುತ್ತಿದ್ದಾರೆ. ತನ್ನ ಕುಟುಂಬದ ಆರು ಜನರಿಗಾಗಿ ಅವಶೇಷಗಳ ಅಡಿಯಲ್ಲಿ ಹುಡುಕಾಡುತ್ತಿದ್ದಾರೆ. ಅಮ್ಮ, ಹೆಂಡತಿ, ಮಗ, ಸಹೋದರ ಎಲ್ಲರೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
/newsfirstlive-kannada/media/post_attachments/wp-content/uploads/2024/07/WAYANADU-LANDLSIDE-RAIN-NDRF.jpg)
ಅತ್ತ ಶಾಹಿದ್ ಮೆಪ್ಪಾಡಿ ಸರಕಾರಿ ಎಚ್​ಎಸ್​​ಎಸ್​ನ ಶಿಬಿರದಲ್ಲಿದ್ದಾರೆ​​. ತನ್ನ ಸಂಬಂಧಿಕರೊಂದಿಗೆ ನಾಪತ್ತೆಯಾದವರನ್ನು ಹುಡುಕಾಡುತ್ತಿದ್ದಾರೆ. ದಿನ ಬೆಳಗಾದರೆ ತನ್ನವರಿಗಾಗಿ ಅಲೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/07/WAYANADU-LANDLSIDE-RAIN.jpg)
ಇದನ್ನೂ ಓದಿ: ರಾತ್ರಿ ಮಟನ್ ಊಟ ಮಾಡಿ ಮಲಗಿದ್ದವರು ಏಳಲೇ ಇಲ್ಲ.. ಒಂದೇ ಮನೆಯಲ್ಲಿ ನಾಲ್ವರು ಸಾವು; ಆಗಿದ್ದೇನು?
ವಯನಾಡಿನ ದುರಂತ ಒಂದೊಂದು ಕತೆಯನ್ನು ಸಾರುತ್ತಿದೆ. ಈಗಾಗಲೇ ಸಾವಿನ ಸಂಖ್ಯೆ 300 ದಾಟಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಶೋಧಕಾರ್ಯವನ್ನು ನಿರಂತರವಾಗಿ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us