/newsfirstlive-kannada/media/post_attachments/wp-content/uploads/2025/03/GOAT-MARRIAGE.jpg)
ಏಕಾಂಗಿ ಯಾನದಲಿ.. ಗುರಿ ಮರೆತ ಅಲೆಮಾರಿ ಎಂಬ ಪ್ರೇಮ ವೈಫಲ್ಯದ ಗೀತೆ ಈ ಹುಡುಗನಿಗಾಗಿಯೇ ಬರೆಯಲಾಗಿದೆಯೆನೋ ಅನ್ನುವ ಮಟ್ಟಕ್ಕೆ ಹುಡುಗ ಪ್ರೇಮವೈಫಲ್ಯದಿಂದಾಗಿ ಜಗತ್ತಿನಲ್ಲಿ ಯಾರು ಮಾಡದ ಒಂದು ನಿರ್ಧಾರ ಮಾಡಿದ್ದಾನೆ. ಇತ್ತೀಚೆಗೆ ಹುಡುಗರಲ್ಲಿ ಸಿಂಗಲ್ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅವುಗಳ ಬಗ್ಗೆ ಹಾಡುಗಳು ಬಂದು ತುಂಬಾ ಫೇಮಸ್ ಕೂಡ ಆಗಿವೆ. ಇತ್ತೀಚೆಗೆ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿಂಗಲ್ಸ್ಗಳ ಹೃದಯದ ರಾಷ್ಟ್ರಗೀತೆಯೆನಿಸಿಕೊಂಡಿತ್ತು. ಇನ್ನು ಫೇಸ್ಬುಕ್ ಮತ್ತು ಇನ್ಸ್ಟಾದ ರೀಲ್ಸ್ಗಳನ್ನು ತೆಗೆದು ನೋಡಿದರೆ ನಿಮಗೆ ಅತಿಹೆಚ್ಚು ಸಿಗುವುದು ಸಿಂಗಲ್ಸ್ಗಳ ನೋವಿನ ಹಾಗೂ ಅದಕ್ಕೆ ಹಾಸ್ಯದ ಲೇಪನವಿರುವ ಮಾಡಿರುವ ರೀಲ್ಸ್ಗಳೇ.
ಇದನ್ನೂ ಓದಿ: ‘ಪತ್ನಿಗೆ ನಾಲ್ವರು ಪ್ರೇಯಸಿಯರು, ಆಕೆಯಿಂದ ನನ್ನ ಜೀವ ಉಳಿಸಿ’ ಎಂದು CMಗೆ ಪತ್ರ..!
ಪ್ರೀತಿ ಮಾಡಲು ಹುಡುಗಿ ಸಿಗುವುದಿಲ್ಲ. ಪ್ರೀತಿಸಿದ ಹುಡುಗಿ ಕೊನೆಯವರೆಗೂ ಇರಲ್ಲ. ಎರಡು ಬೇಡ ಮದುವೆಯಾಗಿ ನೆಟ್ಟಗಿರೋಣ ಅಂದ್ರೆ ಮದುವೆಗೆ ಹುಡುಗಿಯರು ಸಿಗ್ತಿಲ್ಲ. ಇವೆಲ್ಲಾ ವಿಷಯಗಳು ಈಗೀನ ತಲೆಮಾರಿನ ಯುವಕರನ್ನು ತಲೆ ಕೆಡಿಸಿದೆ. ಹೀಗೆಯೇ ಸಾಲು ಸಾಲು ಪ್ರೀತಿಗಳು ಕಳಚಿ ಬಿದ್ದ ಹುಡುಗನೊಬ್ಬ ಈಗ ಮೇಕೆಯನ್ನು ಮದುವೆಯಾಗಲು ಸಜ್ಜಾಗಿದ್ದಾನೆ.
ಆಶ್ಚರ್ಯವೆನಿಸಿದರು ಕೂಡ ಇದು ನಿಜ. 27 ವರ್ಷದ ಮಧ್ಯಪ್ರದೇಶದ ಯುವಕ ಭಗವಾನ್ ಸಿಂಗ್ ಎಂಬುವವನು ಮೇಕೆಯನ್ನು ಮದುವೆಯಾದ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾನೆ. ಹಿಂದೂ ಸಂಪ್ರದಾಯದಂತೆಯೇ ಆ ಮೇಕೆಯನ್ನು ಮದುವೆಯಾಗಿದ್ದು, ಆ ಮೇಕೆಯ ಹೆಸರನ್ನು ಪೂಜಾ ಎಂದು ಗುರುತಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ನಾನು ಈ ಮೇಕೆಯನ್ನು ಆರೈಕೆ ಮಾಡುತ್ತಿದ್ದೇನೆ. ಅದು ಅಷ್ಟೇ ನನ್ನನ್ನು ಹಚ್ಚಿಕೊಂಡಿದೆ. ಹೀಗಾಗಿಯೇ ಈ ಮೇಕೆಯನ್ನೇ ಮದುವೆಯಾಗಲು ತೀರ್ಮಾನಿಸಿದ್ದೇನೆ ಎಂದು ಭಗವಾನ್ ಸಿಂಗ್ ಹೇಳಿದ್ದಾನೆ.
ಈ ಹಿಂದೆ ಆದ ನಿರಂತರ ಪ್ರೇಮ ವೈಫಲ್ಯಗಳು, ದಾಟುತ್ತಿರುವ ವಯಸ್ಸು ಮತ್ತು ವಯೋಸಹಜವಾಗಿ ಕಾಡುವ ಮದುವೆ ಎಂಬ ಬಂಧನದ ವ್ಯಾಮೋಹ ಇವೆಲ್ಲವನ್ನು ಅನುಭವಿಸಿ. ಸಾಕಾಗಿ ಕೊನೆಗೆ ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು ಎನ್ನುವಂತೆ ತಾನು ಸಾಕಿ ಸಲುಹಿದ ಮೇಕೆಯನ್ನೇ ಆತ ಮದುವೆಯಾಗಿದ್ದಾನೆ. ಮೇಕೆಗೆ ಪತ್ನಿಯ ಸ್ಥಾನ ನೀಡಿದ್ದಾನೆ. ಏಕಾಂಗಿ ಯಾನದಲ್ಲಿ ಗುರಿ ಮರೆತಿರುವ ಅಲೆಮಾರಿಗೆ ಸಾಕ್ಷಿಯಾಗಿ ಭಗವಾನ್ ಸಿಂಗ್ ನಿಂತಿದ್ದಾನೆ. ಸದ್ಯ ಈ ಒಂದು ಸುದ್ದಿ ಹಾಗೂ ಸಿಂಗ್ ಮೇಕೆಯನ್ನು ಮದುವೆಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಿಂಗಲ್ಸ್ಗಳ ಹಣೆಬರಹ ಎಲ್ಲಿಗೆ ಬಂತಪ್ಪ ಎಂದು ಹುಡುಗಿಯರ ಕುಲಕ್ಕೆ ಏಕಾಂಗಿಗಳ ಗುಂಪು ಶಾಪ ಹಾಕುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ