/newsfirstlive-kannada/media/post_attachments/wp-content/uploads/2025/07/ITALY_PLANE_New.jpg)
ವಿಮಾನದ ಇಂಜಿನ್ಗೆ ವ್ಯಕ್ತಿಯೊಬ್ಬ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಇಟಲಿಯ ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ನಡೆದಿದೆ. 154 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿ ದೊಡ್ಡ ಪ್ರಮಾದದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದಲ್ಲಿ A319 ವೊಲೊಟಿಯಾ ವಿಮಾನದ ಇಂಜಿನ್ಗೆ ಸಿಲುಕಿಕೊಂಡು ಜೀವ ಬಿಟ್ಟ ವ್ಯಕ್ತಿಯೂ ಗ್ರೌಂಡ್ ಸ್ಟಾಫ್ ಎಂದು ಕನ್ಫರ್ಮ್ ಮಾಡಲಾಗಿದೆ. A319 ವೊಲೊಟಿಯಾ ವಿಮಾನವೂ ಇಟಿಲಿಯ ಮಿಲನ್ ಬರ್ಗಾಮೊ ನಿಲ್ದಾಣದಲ್ಲಿ ಟೇಕ್ಆಫ್ ಆಗುವ ವೇಳೆ ಸಿಬ್ಬಂದಿ ಅದೇ ಮಾರ್ಗದಲ್ಲಿ ಬರುವಾಗ ಈ ಘಟನೆ ನಡೆದಿದೆ. ಸ್ಪೇನ್‌ನ ಆಸ್ಟೂರಿಯಸ್‌ಗೆ ವಿಮಾನ ತೆರಳತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ:ಸ್ಮಾರ್ಟ್ ಕನ್ನಡಕದಲ್ಲಿ ಕ್ಯಾಮೆರಾ, ಪದ್ಮನಾಭಸ್ವಾಮಿ ದೇವಾಲಯಕ್ಕೆ ವೃದ್ಧ ಎಂಟ್ರಿ.. ಪೊಲೀಸರಿಂದ ತನಿಖೆ!
ವೊಲೊಟಿಯಾ ವಿಮಾನ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು ವಿಮಾನದಲ್ಲಿ ಒಟ್ಟು 154 ಪ್ರಯಾಣಿಕರು, 6 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ಹಾಗೂ ನಾಲ್ವರು ಕ್ಯಾಬಿನ್ ಕ್ರಿವ್ ಇದ್ದರು. ಟೇಕ್ಆಫ್ ಆಗುವಾಗ ಈ ಘಟನೆ ನಡೆದಿದೆ ಎಂದು ಹೇಳಿದೆ. ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದ ಅತ್ಯಂತ ಬ್ಯಸಿಯೆಸ್ಟ್ ಏರ್ಪೋರ್ಟ್ ಆಗಿದ್ದು ಈ ಘಟನೆ ನಡೆದ ಮೇಲೆ 10:20ಕ್ಕೆ ಪ್ರಯಾಣ ಕ್ಯಾನ್ಸಲ್ ಮಾಡಲಾಯಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಇನ್ನು ಘಟನೆ ನಡೆದಿರುವುದು ಪಕ್ಕಾ ಆಗಿದೆ. ಆದರೆ ಇದು ಹೇಗೆ ನಡೆಯಿತು ಎಂದು ತನಿಖೆ ನಡೆಸಲಾಗುವುದು ಎಂದು ಏರ್ಪೋರ್ಟ್ನ ಎಸ್ಎಸಿಬಿಒ ತಿಳಿಸಿದೆ. ಸದ್ಯ ವ್ಯಕ್ತಿಯನ್ನು ವಿಮಾನದ ಇಂಜಿನ್ನಿಂದ ಹೊರ ತೆಗೆಯಲಾಗಿದ್ದು ಜೀವ ಹೋಗಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆ ಹಿನ್ನೆಲೆಯಲ್ಲಿ 8 ವಿಮಾನಗಳ ಹಾರಾಟ ಸ್ಥಗಿತ ಮಾಡಿ, 9 ವಿಮಾನಗಳ ಮಾರ್ಗ ಬದಲಾವಣೆ ಮಾಡಿ 6 ವಿಮಾನಗಳಿಗೆ ಮರುಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ