newsfirstkannada.com

ತನ್ನದೇ ಚರ್ಮದಿಂದ ತಾಯಿಗೆ ಚಪ್ಪಲಿ ತೊಡಿಸಿದ ಮಗ; ಮಾಜಿ ರೌಡಿಶೀಟರ್ ಬದಲಾಗಿದ್ದೇಗೆ?

Share :

Published March 24, 2024 at 6:19am

Update March 24, 2024 at 6:20am

  ಚರ್ಮದಿಂದ ಚಪ್ಪಲಿ ಮಾಡಿದ್ದ ವ್ಯಕ್ತಿ ಈ ಬಗ್ಗೆ ಹೇಳಿದ್ದೇನು?

  ಕಾಲಿಗೆ ಗುಂಡು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗುರ್ಜರ್​

  ಕ್ರಿಮಿನಲ್ ಕೇಸ್​ನಲ್ಲಿ ಕುಖ್ಯಾತಿಯಾಗಿದ್ದ, ಈಗ ಎಲ್ಲರಿಗೂ ಮಾದರಿ

ಭೋಪಾಲ್: ಕನ್ನಡದಲ್ಲಿ ಒಂದು ಅದ್ಭುತ ಗಾದೆ ಇದೆ. ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. ಒಬ್ಬ ತಾಯಿ ತನ್ನ ಹೊಟ್ಟೆಯಲ್ಲಿ ಮಗುವನ್ನು 9 ತಿಂಗಳು ಇಟ್ಟುಕೊಂಡು ಅವರು ಸಾಕುತ್ತಾರೆ. ಬಳಿಕ ಆ ಮಗುವನ್ನು ಹಂತ ಹಂತವಾಗಿ ಬೆಳೆಸುತ್ತಾರೆ. ತಾಯಿಯೇ ಮೊದಲ ಗುರುವಾಗಿ ಮಗುವಿಗೆ ಲಾಲನೆ ಪಾಲನೆ ಮಾಡುತ್ತಾರೆ. ಆದರೆ ಕೆಲವರು ಅಂತಹ ತಾಯಿಯನ್ನೇ ದೂರ ತಳ್ಳುತ್ತಾರೆ.

ಇದನ್ನು ಓದಿ: ಕಾಂಗ್ರೆಸ್​ ಅಭ್ಯರ್ಥಿಗಳ 4ನೇ ಪಟ್ಟಿ ರಿಲೀಸ್; ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್​ಗೆ ಟಿಕೆಟ್​

ಆದರೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಗೆ ತನ್ನದೇ ಚರ್ಮದಿಂದ ಚಪ್ಪಲಿಗಳ ಆಕಾರದಂತೆ ತಯಾರಿಸಿದ್ದಾನೆ. ಬಳಿಕ ಆ ವಿಶೇಷ ಚಪ್ಪಲಿಯನ್ನು ತಾಯಿಗೆ ತೊಡಿಸಿ ತಾಯಿ ಭಕ್ತಿಗಾಗಿ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಹೌದು, ರೌನಕ್ ಗುರ್ಜರ್ ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ತಾಯಿಯ ಕಾಲಿಗೆ ತಮ್ಮದೇ ಚರ್ಮದಿಂದ ಮಾಡಿಸಿದ ಚಪ್ಪಲಿ ತೊಡಿಸಿ ಕಣ್ಣೀರಾಗಿದ್ದಾರೆ. ಉಜ್ಜಯಿನಿಯ ಸಾಂದೀಪನಿ ನಗರದ ಅಖಾಡ ಮೈದಾನದಲ್ಲಿ ಜಿತೇಂದ್ರ ಮಹಾರಾಜ್ ನೇತೃತ್ವದಲ್ಲಿ ನಡೆದ ಏಳು ದಿನಗಳ ಭಗವತ್ ಕಥಾದಲ್ಲಿ ಅವರು ತಮ್ಮ ಚರ್ಮದಿಂದ ರಚಿಸಲಾದ ಒಂದು ಜೋಡಿ ಪಾದರಕ್ಷೆಯನ್ನು ತಮ್ಮ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆ ಗುರ್ಜರ್​ಗೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಗುರ್ಜರ್ ತನ್ನ ತೊಡೆಯಿಂದ ಚರ್ಮವನ್ನು ತೆಗೆಯುವ ಪ್ರಕ್ರಿಯೆಗೆ ಒಳಗಾದ. ಈ ಚರ್ಮವನ್ನು ನಂತರ ನುರಿತ ಚಮ್ಮಾರರಿಗೆ ಕೊಟ್ಟು ಹೊಸ ಪಾದರಕ್ಷೆಗಳನ್ನು ತಯಾರು ಮಾಡಿ ಅವರ ತಾಯಿಯ ಕಾಲಿಗೆ ತೊಡಿಸಿದ್ದಾರೆ. ಕ್ರಿಮಿನಲ್ ಕೇಸ್​ನಲ್ಲಿ ಕುಖ್ಯಾತಿಯಾಗಿದ್ದವ ಈಗ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿಗಾರರೊಂದಿಗೆ ಮಾತಾಡಿದ ಗುರ್ಜರ್,  ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ ಮತ್ತು ನಾನು ರಾಮನ ಪಾತ್ರದಿಂದ ಆಳವಾಗಿ ಪ್ರಭಾವಿತನಾಗಿದ್ದೇನೆ. ಒಬ್ಬರ ಚರ್ಮದಿಂದ ಚಪ್ಪಲಿಯನ್ನು ತಯಾರಿಸಿ ನೀಡುವುದು ಸಹ ತಾಯಿಗೆ ಸಾಕಾಗುವುದಿಲ್ಲ ಎಂದು ಶ್ರೀರಾಮನು ಹೇಳಿದ್ದಾನೆ. ಆದ್ದರಿಂದ, ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು ಮತ್ತು ನನ್ನ ಚರ್ಮದಿಂದ ಪಾದರಕ್ಷೆಗಳನ್ನು ತಯಾರಿಸಿ ನನ್ನ ತಾಯಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ ಎಂದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನದೇ ಚರ್ಮದಿಂದ ತಾಯಿಗೆ ಚಪ್ಪಲಿ ತೊಡಿಸಿದ ಮಗ; ಮಾಜಿ ರೌಡಿಶೀಟರ್ ಬದಲಾಗಿದ್ದೇಗೆ?

https://newsfirstlive.com/wp-content/uploads/2024/03/Slippers.jpg

Load More