ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?

author-image
Gopal Kulkarni
Updated On
ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?
Advertisment
  • ಪೊಲೀಸರ ನಡೆಯನ್ನು ಹೊಗಳಿದ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ
  • ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳಕ್ಕೆ ನಿಂತ ಪತಿಯಿಂದ ವಿಚ್ಛೇಧನ
  • ಪತಿ ವಿರುದ್ಧ ಕಾನೂನು ಸಮರ ಸಾರಿದ ಪತ್ನಿ, ಪತಿ ಮೇಲೆ ದೂರು ದಾಖಲು

ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಹಲವು ನಿಯಮಗಳನ್ನು ಮಾಡಿದೆ. ಅದನ್ನು ಬ್ಯಾನ್ ಕೂಡ ಮಾಡಿದೆ. ಆದರೂ ತ್ರಿವಳಿ ತಲಾಖ್​ ಸುದ್ದಿಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಈಗ ಉತ್ತರಪ್ರದೇಶದಲ್ಲಿ ಅಂತಹುದೇ ಒಂದು ಘಟನೆ ನಡೆದಿದೆ. ಪೊಲೀಸರು ತೆಗೆದುಕೊಂಡ ಕ್ರಮವನ್ನು ಹೊಗಳಿದ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ.

ಉತ್ತರಪ್ರದೇಶದ ಮೊರಾದಾಬಾದ್ ನಿವಾಸಿ ನಿದಾ ಸಂಬಾಲಾದಲ್ಲಿನಡೆದ ಹಿಂಸಾಚಾರದ ವಿಡಿಯೋ ನೋಡುತ್ತಿದ್ದಳು. ಅದನ್ನೆಲ್ಲಾ ನೋಡಬೇಡ ಎಂದು ಪತಿ ಹೇಳಿದ್ದಾನೆ, ಈ ವೇಳೆ ಪತ್ನಿ ಸಂಬಾಲಾ ಹಿಂಸಾಚಾರದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ಹೊಗಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಪತಿ ತಲಾಖ್.. ತಲಾಖ್.. ತಲಾಖ್.. ಎಂದು ಮೂರು ಬಾರಿ ಹೇಳಿ ಆಕೆಗೆ ವಿಚ್ಛೇಧವನ್ನು ಕೊಟ್ಟಿದ್ದಾನೆ. ಈಗಾಗಲೇ ತ್ರಿವಳಿ ತಲಾಖ್ ದೇಶದಲ್ಲಿ ಬ್ಯಾನ್ ಇದೆ. 2017ರಲ್ಲಿ ಸುಪ್ರೀಂಕೋರ್ಟ್ ಇದನ್ನು ಸಂವಿಧಾನ ಬಾಹಿರ ಎಂದು ಕೂಡ ಹೇಳಿದೆ ಆದರೂ ಕೂಡ ಯುಪಿಯಲ್ಲಿ ಇಂತಹದೊಂದು ಘಟನೆ ನಡೆದಿದೆ.

ಇದನ್ನೂ ಓದಿ:₹1,000 ಕೋಟಿ ಬೇನಾಮಿ ಆಸ್ತಿ ಕೇಸ್; DCM ಆಗಿ ಪ್ರಮಾಣವಚನ ಪಡೆದ ಒಂದೇ ದಿನದಲ್ಲಿ ಪವಾರ್​ಗೆ ರಿಲೀಫ್

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿದಾ, ಯಾವುದೇ ಕಾರಣವಿಲ್ಲದೇ ನನ್ನ ಪತಿ ನನಗೆ ವಿಚ್ಛೇಧನ ನೀಡಿದ್ದಾರೆ. ನಾನು ಈಗಾಗಲೇ ಈ ಬಗ್ಗೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ. ನಾನು ಸಂಬಾಲಾಗೆ ಒಂದು ಮದುವೆಗಾಗಿ ಹೋಗಬೇಕಿತ್ತು. ಹೀಗಾಗಿ ಅಲ್ಲಿ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ವಿಡಿಯೋ ನೋಡುತ್ತಿದ್ದೆ. ಅದರ ಜೊತೆಗೆ ಅಲ್ಲಿ ನನಗೆ ಕೊಂಚ ವೈಯಕ್ತಿಕ ಕೆಲಸವೂ ಕೂಡ ಇತ್ತು. ಅಷ್ಟಕ್ಕೆ ನನ್ನ ಪತಿ ಆ ವಿಡಿಯೋ ಏಕೆ ನೋಡುತ್ತಿದ್ದೀಯಾ ಎಂದು ಕೇಳಿದರು. ಇದರಲ್ಲಿ ತಪ್ಪೇನನಿದೆ ಎಂದು ನಾನು ಕೇಳಿದೆ. ಅಷ್ಟಕ್ಕೆ ದೊಡ್ಡ ಜಗಳವೇ ನಡೆದು ಹೋಯ್ತು ಎಂದು ನಿದಾ ಹೇಳಿದ್ದಾಳೆ.

ಇದನ್ನೂ ಓದಿ:ಮನೆಗೆ ಬಂದಿದ್ದ 30 ವರ್ಷದ ಹಿಂದೆ ಕಳೆದು ಹೋಗಿದ್ದ ಮಗ, ಮಗನೇ ಅಲ್ಲ..! ಎಮೋಷನಲ್ ಸ್ಟೋರಿಯಲ್ಲೊಂದು ಮೆಗಾ ಟ್ವಿಸ್ಟ್​!

ಅಷ್ಟು ಮಾತ್ರವಲ್ಲ ಕೇವಲ ವಿಡಿಯೋ ನೋಡಿದ್ದಕ್ಕೆ ನನ್ನ ಪತಿ ನೀನು ಮುಸ್ಲಿಂಳೇ ಅಲ್ಲ ಎಂದು ಹೀಯಾಳಿಸಿದರು. ನೀನು ಪೊಲೀಸರನ್ನು ಹೊಗಳುತ್ತೀಯಾ ಎಂದ ಮೇಲೆ ನನಗೂ ನಿನಗೂ ಯಾವುದೇ ಸಂಬಂಧವಿಲ್ಲ. ನೀನು ನನ್ನ ಮನೆಯಲ್ಲಿ ಇರುವಂತಿಲ್ಲ ಕೂಡಲೇ ಹೊರಡು ಎಂದು ತ್ರಿವಳಿ ತಲಾಖ್​ ಘೋಷಿಸಿದರು ಎಂದು ನಿದಾ ಹೇಳಿದ್ದಾಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment