Selfie: ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಓರ್ವ ಸಾ*ವು.. ಇಬ್ಬರು ಪ್ರಾಣಾಪಾಯದಿಂದ ಪಾರು

author-image
AS Harshith
Updated On
Selfie: ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಓರ್ವ ಸಾ*ವು.. ಇಬ್ಬರು ಪ್ರಾಣಾಪಾಯದಿಂದ ಪಾರು
Advertisment
  • ಕಾಡಾನೆ ಬಂತು ಎಂದು ನೋಡಲು ಹೋದ ಮೂವರು
  • ಕಾಡಾನೆಯನ್ನು ನೋಡಿ ಸೆಲ್ಫಿ ತೆಗೆಯಲು ಮುಂದಾದ ಸ್ನೇಹಿತರು
  • ಮೂವರಲ್ಲಿ ಓರ್ವ ಕಾಡಾನೆ ದಾಳಿಗೆ ಸಾವು.. ಸೆಲ್ಫಿ ತೆಗೆಯಲು ಹೋಗಿ ಬಲಿ

ವ್ಯಕ್ತಿಯೋರ್ವ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಗಡ್ಚಿರೋಲಿ ಅಬಾಪುರ ಅರಣ್ಯಕ್ಕೆ ಕಾಡಾನೆ ನೋಡಲು ಮೂವರು ಸ್ನೇಹಿತರು ಹೋಗಿದ್ದರು. ಈ ವೇಳೆ ಇಬ್ಬರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ.

ಶ್ರೀಕಾಂತ್​ ರಾಮಚಂದ್ರ ಸಾವನ್ನಪ್ಪಿರುವ ವ್ಯಕ್ತಿ. ಈತ ತನ್ನ ಮತ್ತಿಬ್ಬರು ಸ್ನೇಹಿತರೊಂದಿಗೆ ಕಾಡಾನೆ ವೀಕ್ಷಿಸಲು ಹೋಗುತ್ತಾನೆ. ಈ ವೇಳೆ ಕಾಡಾನೆ ಕಂಡಾಗ ಮೊಬೈಲ್​ ತೆಗೆದು ಸೆಲ್ಫಿ ಕ್ಲಿಕ್ಕಿಸಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಡಾನೆ ದಾಳಿ ಮಾಡುತ್ತದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ರೋಡ್​​ ರೇಜ್​ ಪ್ರಕರಣ; ಟ್ರಾಫಿಕ್​ ಪೊಲೀಸನ್ನೇ 100 ಮೀಟರ್​ ಎಳೆದೊಯ್ದ ಕಾರು ಚಾಲಕ

23 ವರ್ಷದ ಶ್ರೀಕಾಂತ್ ಸಾತ್ರೆ ಗಡ್ಚಿರೋಲಿ ಜಿಲ್ಲೆಯವನಾಗಿದ್ದು, ಕೇಬಲ್​ ಅಳವಡಿಕೆಯ ಕೆಲಸ ಮಾಡಿಕೊಂಡಿದ್ದನು. ಕಾಡಾನೆ ವೀಕ್ಷಿಸಲೆಂದು ನವೆಂಗಾಂವ್​ನಿಂದ ತ್ನ ಸ್ನೇಹಿರರೊಂದಿಗೆ ಬಂದಿದ್ದಾನೆ.

ಇದನ್ನೂ ಓದಿ: 98 ಮಂದಿಗೆ ಜೀವಾವಧಿ ಶಿಕ್ಷೆ.. ಕೊಪ್ಪಳ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು; ಕುಟುಂಬಸ್ಥರ ಕಣ್ಣೀರು!

ಚಿತ್ತಗಾಂಗ್​ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಿಂದ ಕಾಡಾನೆ ಸಂಚರಿಸುತ್ತಿತ್ತು. ಮುಟ್ನೂರ್​ ಅರಣ್ಯ ಪ್ರದೇಶದ ಅಬಾಪುರದಲ್ಲಿ ಕಾಡಾನೆ ಓಡಾಟ ಸ್ಥಳೀಯರ ಕಣ್ಣಿಗೆ ಕಂಡಿದೆ. ಇದನ್ನು ನೋಡಲೆಂದು ಶ್ರೀಕಾಂತ್​ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಡಾನೆ ಕಂಡು ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಈ ವೇಳೆ ಕಾಡಾನೆ ತುಳಿದು ಆತನನ್ನು ಸಾಯಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment